ನಾನು ನಾನು ಎಂದು ನೀ ಜಂಭ ಪಡುವೆ…
ಎಲ್ಲವೂ ನನ್ನದು ಎಂಬ ಭ್ರಮೆಯಲ್ಲಿ ಬದುಕುವೆ…
ಪುಣ್ಯದ ಬೆಲೆಯನ್ನು ನೀ ಮರೆತುಬಿಡುವೆ…
ಬದುಕಿನುದ್ದಕ್ಕೂ ಪಾಪ ಕಾರ್ಯವನ್ನೇ ಮಾಡುವೆ…
ಅಹಂಕಾರದ ಕೋಟೆಯಲ್ಲಿ ನೀ ಬಂಧಿಯಾದೆ…
ನಿನ್ನವರ ಪ್ರೀತಿಯನ್ನು ನೀ ಮರೆತುಹೋದೆ…
ಯಾರ ಮಾತಿಗೂ ನೀ ಬೆಲೆ ನೀಡದಾದೆ…
ಯಾರ ನೋವಿಗೂ ನೀ ಕರಗದಾದೆ…
ಅಹಂಕಾರದ ಅಂಧಕಾರದಲ್ಲಿ ನೀ ಮುಳುಗಿಹೋದೆ…
ನಾನೇ ಸರ್ವಸ್ವ ಎಂದು ನೀ ತಿಳಿದುಕೊಂಡೆ…
ಜಗದಲ್ಲಿ ನನಗಿಂತ ಮೇಲ್ಯಾರೂ ಇಲ್ಲ ಎಂದು ನೀ ಹಿಗ್ಗಿಹೋದೆ…
ಭಗವಂತನ ಆಟದಲ್ಲಿ ನೀ ಶೂನ್ಯವೆಂಬುದೇ ಮರೆತುಹೋದೆ…
ನಾನು-ನನ್ನದೆನ್ನುವ ಭ್ರಮೆಯಲ್ಲಿ ಬದುಕಿದೆ…
ಇತರರ ಕಣ್ಣೀರಿಗೆ ನೀ ಕರಗದಾದೆ…
ಇತರರ ಪ್ರಾಣಕ್ಕೂ ಬೆಲೆ ನೀಡದೇ ಹೋದೆ…
ಒಂದು ದಿನ ಈ ಭೂಮಿಯಲ್ಲಿ ನಿನ್ನ ಪ್ರಾಣವೂ ಕೊನೆಯಾಗುವುದು ಎಂಬುದನ್ನೇ ಮರೆತುಹೋದೆ…
✍ಉಲ್ಲಾಸ್ ಕಜ್ಜೋಡಿ