Ad Widget

ಸುಳ್ಯ : ಅಂತರಾಷ್ಟ್ರೀಯ ಜೈವಿಕ ಇಂಧನ ಮತ್ತು ಜೀವ ವೈವಿಧ್ಯ ದಿನಾಚರಣೆ

. . . . . . .

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮಂಗಳೂರು, ತಾಲೂಕು ಪಂಚಾಯತ್‌ ಸುಳ್ಯ, ಸಾಮಾಜಿಕ ಅರಣ್ಯ ವಲಯ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಆ.10ರಂದು ಅಂತರಾಷ್ಟ್ರೀಯ ಜೈವಿಕ ಇಂಧನ ಮತ್ತು ಜೀವವೈವಿಧ್ಯ ದಿನಾಚರಣೆಯನ್ನು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಆಚರಿಸಲಾಯಿತು. ಸುಳ್ಯ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭವಾನಿ ಶಂಕರ್‌ ಎನ್‌ ಪ್ರಾಸ್ತವಿಕವಾಗಿ ಮಾತನಾಡಿ, ಜೈವಿಕ ಇಂಧನದ ಉತ್ಪಾದನೆ ಹಾಗೂ ಬಳಕೆಗಳ ಅಗತ್ಯತೆ ಕುರಿತು ಅರಿವು ಮೂಡಿಸಲು ಆ.10ರಂದು ಅಂತಾರಾಷ್ಟ್ರೀಯ ಜೈವಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಜೊತೆಗೆ ಜೀವ ವೈವಿಧ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಜುಲೈ 15ರಿಂದ ಆಗಸ್ಟ್‌ 15ರವರೆಗೆ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆಯನ್ನು ಅಭಿಯಾನದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಹಾಗೂ ಜೀವವೈವಿಧ್ಯ ಅಭಿಯಾನದ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ನಾಟಿವೈದ್ಯರಾದ ಮಾಧವ ಗೌಡ ಮಾತನಾಡಿ, ಮುಂದಿನ ಪೀಳಿಗೆಗೆ ಮರಗಿಡಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಗಿಡಮರಗಳಿದ್ದಲ್ಲಿ ಮಣ್ಣಿನ ಫಲವತ್ತತೆಯು ಹೆಚ್ಚುತ್ತದೆ. ಪ್ರಾಣಿ ಪಕ್ಷಿಗಳಿಗೂ ಆಹಾರ ದೊರೆಯುತ್ತದೆ. ಹೇರಳವಾಗಿ ಅರಣ್ಯ ಪ್ರದೇಶಗಳಿದ್ದಲ್ಲಿ ಭೂಮಿಯಲ್ಲಿ ನೀರಿನ ಪ್ರಮಾಣವು ಅಧಿಕವಾಗಿ ಕೃಷಿ ಚಟುವಟಿಕೆಗಳಿಗೂ ಪೂರಕ ವಾತವರಣವಿರುತ್ತದೆ ಎಂದರು.
ಜಗತ್ತಿನ ಜೀವ ವೈವಿಧ್ಯ ತಾಣಗಳಲ್ಲಿ ಭಾರತಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಪಶ್ಚಿಮ ಘಟ್ಟಗಳು ಜೀವ ವೈವಿಧ್ಯಗಳ ತಾಣ. ವಿಶಿಷ್ಟವಾದ ಜೀವರಾಶಿಗಳು ಇಲ್ಲಿ ಕಾಣಸಿಗುತ್ತವೆ. ಅಂತಹ ಸಸ್ಯಸಂಕುಲ ಹಾಗೂ ಜೀವರಾಶಿಗಳನ್ನು ಉಳಿಸುವ ಮೂಲಕ ನಮ್ಮ ಸುತ್ತಮುತ್ತ ಇರುವ ಜೀವವೈವಿಧ್ಯವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಂಪನ್ಮೂಲ ವ್ಯಕ್ತಿಗಳಾದ ನೆಹರೂ ಮೆಮೋರಿಯಲ್‌ ಮಹಾವಿದ್ಯಾಲಯದ ಉಪನ್ಯಾಸಕರಾದ ಕುಲದೀಪ್‌ ಪಿಪಿ ತಿಳಿಸಿದರು.

ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರಾದ ಜಾಹ್ನವಿ ಕಾಂಚೋಡು, ವಲಯ ಅರಣ್ಯಾಧಿಕಾರಿಗಳಾದ ಶೈಲಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಶುಸಂಗೋಪಣೆ ಇಲಾಖೆಯ ಸಹಾಯಕ ನಿರ್ದೇಶಕರು ಸಾಮಾಜಿಕ ಅರಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿಗಳು, ತಾಲೂಕು ಪಂಚಾಯತ್‌ ನ ವ್ಯವಸ್ಥಾಪಕರು ಸೇರಿದಂತೆ ತಾಲೂಕು ಪಂಚಾಯತ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಯಾನಂದ ಪಿ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!