ಬಂದರು ಮತ್ತು ಮೀನುಗಾರಿಕೆ ಸೇರಿದಂತೆ ಒಳನಾಡು ಜಲ ಸಾರಿಗೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧನಿದ್ದೆ. ನನಗೆ ಈ ಹಿಂದೆ ನಿರ್ವಹಿಸಿದ್ದ ಖಾತೆ ದೊರಕಿರುವುದರಿಂದ ಸಂತಸವಾಗಿದೆ. ಈ ಹಿಂದೆ ಇದೇ ಖಾತೆಯನ್ನು ನಿರ್ವಹಣೆ ಮಾಡಿದ್ದುದರಿಂದ ಪ್ರಗತಿ ಕಾರ್ಯಕ್ಕೆ ಅನುಕೂಲಕರವಾಗಿದೆ. ಅಲ್ಲದೆ ಈ ಹಿಂದಿನ ಯೋಜನೆಗಳನ್ನು ಮುಂದುರೆಸಲು ಇದು ಸಹಕಾರಿಯಾಗಿದೆ.ಮುಂದೆ ಒಳನಾಡು ಜಲ ಸಾರಿಗೆ ಮತ್ತು ಬಂದರು ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಜನತೆಗೆ ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗುವುದು. ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನುಡಿದರು.
ಎರಡನೇ ಬಾರಿಗೆ ಖಾತೆ ಹಂಚಿಕೆ ಬಳಿಕ ಸಚಿವರು ಮಾತನಾಡಿದರು. ಹಲವಾರು ವಿನೂತನ ಯೋಜನೆಗಳನ್ನು ಕಾರ್ಯಗತ ಮಾಡುವ ಮೂಲಕ ಮೀನುಗಾರರ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ರಾಜ್ಯಾದ್ಯಂತ ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮೀನಿನ ಮರಿಗಳನ್ನು ಬೆಳೆಸಲು ಬೇಕಾದ ವಿನೂತನ ಯೋಜನೆಯನ್ನು ಮುಂದುವರೆಸಲಾಗುವುದು. ಸಿದ್ಧಪಡಿಸಲಾಗಿದೆ. ರಾಜ್ಯಾದ್ಯಂತ ಮೀನುಗಾರಿಕೆ ಔನತ್ಯಕ್ಕೆ ಮೀನಿನ ಮರಿಗಳನ್ನು ಹೆಚ್ಚು ಹೆಚ್ಚು ಬೆಳೆಸುವ ವಿನೂತನ ಯೋಜನೆ ಶೀಘ್ರ ಜಾರಿಗೆ ತರಲಾಗುವುದು. ಹೆಚ್ಚು ಮೀನು ಉತ್ಪಾದನೆ ಮಾಡಿ ಈ ಮೂಲಕ ಸ್ವ ಉದ್ಯೋಗ ಮಾಡಲು ಪ್ರೋತ್ಸಾಹಿಸಲಾಗುವುದು. ಕೃಷಿಕರಿಗೆ ಉಚಿತವಾಗಿ ಮೀನಿನ ಮರಿಗಳನ್ನು ಒದಗಿಸಿ ಅವರಿಗೆ ಬೇಕಾದ ರಿಯಾಯಿತಿಗಳನ್ನು ಒದಗಿಸಲಾಗುವುದು ಎಂದು ಎಸ್.ಅಂಗಾರ ಹೇಳಿದರು.
ಕೊರೋನಾ ಹೊಡೆದೋಡಿಸಲು ಕಾರ್ಯತಂತ್ರ:
ಮೊದಲಾಗಿ ದ.ಕ ಜಿಲ್ಲೆಯಲ್ಲಿ ಅಧಿಕವಿರುವ ಕೊರೋನಾ ಪ್ರಕರಣವನ್ನು ನಿಯಂತ್ರಣ ಮಾಡಲು ಹೆಚ್ಚಿನ ಆಧ್ಯತೆ ನೀಡಲಾಗುವುದು.ಅಲ್ಲದೆ ಜನತೆ ಸರಕಾರದ ಆದೇಶಗಳನ್ನು ಪಾಲನೆ ಮಾಡುವ ಮೂಲಕ ಸಹಕರಿಸಬೇಕು.ಎಲ್ಲರ ಸಹಕಾರದಿಂದ ಕೊರೋನಾವನ್ನು ಹತೋಟಿ ತರಬಹುದು.ಆದುದರಿಂದ ಎಲ್ಲರೂ ಸಹಕರಿಸಬೇಕು ಎಂದರು.