ಉಬರಡ್ಕ ಗ್ರಾಮದ ಅಮೈ ಪಾಲಡ್ಕ ನಿವಾಸಿಯಾಗಿದ್ದ ದಿ. ಕುಶಾಲಪ್ಪ ಗೌಡರ ಪತ್ನಿ ನಿವೃತ್ತ ಮುಖ್ಯ ಶಿಕ್ಷಕಿ ರತ್ನಾವತಿ ಜು.31 ರಂದು ನಿಧನರಾದರು. ಪ್ರಸ್ತುತ ಇವರು ಪುತ್ತೂರು ತಾ. ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ದಂಬೆತಡ್ಕದಲ್ಲಿ ನೆಲೆಸಿದ್ದರು. ಸೋಮವಾರ ಪೇಟೆಯಲ್ಲಿ ಶಿಕ್ಷಕಿ ವೃತ್ತಿ ಆರಂಭಿಸಿದ ಇವರು ಚೆಂಬು ಹಾಗೂ ಕೊಯನಾಡು ಶಾಲೆಯಲ್ಲಿ ಸೇವೆ ನಿವೃತ್ತರಾಗಿದ್ದರು. ಮೃತರು ಪುತ್ರರಾದ ಕಿಶೋರ್ ಕುಮಾರ್, ನಿವೃತ್ತ ಯೋಧ ಶಿವ ಪ್ರಸಾದ್, ಪುತ್ರಿ ಶ್ರೀಮತಿ ಚೈತ್ರ ನೋಣಯ್ಯ ಉಪ್ಪಿನಂಗಡಿ ಹಾಗೂ ಅಳಿಯ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
- Sunday
- November 24th, 2024