Ad Widget

ಸುಳ್ಯದ ವಿವಿಧ ಯೋಜನೆಗಳಿಗೆ ವಿಶೇಷ ಅನುದಾನ ತರಿಸಲು ಪ್ರಯತ್ನ – ಹರೀಶ್ ಕಂಜಿಪಿಲಿ

ವಿದ್ಯುತ್ ಸಬ್ ಸ್ಟೇಷನ್ , ತಾಲೂಕು ಕ್ರೀಡಾಂಗಣ, ಕುಡಿಯುವ ನೀರು, ಕಸವಿಲೇವಾರಿ , ಅಂಬೇಡ್ಕರ್ ಭವನ ಹಾಗೂ ಮಹಾಯೋಜನೆ ಕುರಿತು ವಿಶೇಷ ಪ್ಯಾಕೇಜ್ ಅನ್ನು ತರಿಸಲು ಸಚಿವರ ಮುಖೇನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿ ಕೊರೊನಾ ಹಿನ್ನಲೆ ಸಣ್ಣ ಮಟ್ಟದಲ್ಲಿ ಸಚಿವರಿಗೆ ಅಭಿನಂಧನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅಂಗಾರರಿಗೆ ಸಚಿವ ಸ್ಥಾನ ದೊರೆಯಲು ಕಾರಣರಾದ ಜೆ.ಪಿ ನಡ್ಡಾ,ಅಮಿತ್ ಷಾ , ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

. . . . .

ಈ ಸಂದರ್ಭ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಬಿಜೆಪಿ ಜಿಲ್ಲಾ‌ ಉಪಾಧ್ಯಕ್ಷ ವೆಂಕಟ್ ವಳಲಂಬೆ,ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ, ಚನಿಯ ಕಲ್ತಡ್ಕ, ಸುನೀಲ್ ಕೇರ್ಪಳ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!