ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ)ಸುಳ್ಯ ದೊಡ್ಡತೋಟ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ದೊಡ್ಡತೋಟ ವಲಯ, ಜನಜಾಗೃತಿ ವೇದಿಕೆ ದೊಡ್ಡತೋಟ ,ಅರಣ್ಯ ಇಲಾಖೆ ಮರ್ಕಂಜ ಮತ್ತು ಗ್ರಾಮ ಅರಣ್ಯ ಸಮಿತಿ, ಹಾಗೂ ಸ. ಹಿ .ಪ್ರಾ ಶಾಲೆ ಮಿತ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಆ.2 ರಂದು ಅರಣ್ಯೀಕರಣ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ ನೆರವೇರಿಸಿದರು. ಅರಣ್ಯ ವಲಯಾಧಿಕಾರಿ ಚಂದ್ರು ಪರಿಸರ ಮತ್ತು ಅರಣ್ಯ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಿದರು . ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿಯವರು ಗಿಡವನ್ನು ನೆಡುವುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ನಂತರ 150 ಗಿಡಗಳನ್ನು ಮಿತ್ತಡ್ಕ ಶಾಲೆ, ಅಜ್ಜನಗದ್ದೆ ಶಾಲೆ ಮತ್ತು ಕುಕ್ಕುಜಡ್ಕ ಶಾಲೆಗಳಲ್ಲಿ ವಿಪತ್ತು ನಿರ್ವಹಣೆಯ ಸ್ವಯಂಸೇವಕರ ಮೂಲಕ ಗಿಡವನ್ನು ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ ಗುಂಡಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್, ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸರಸ್ವತಿ ದೊಡ್ಡತೋಟ, ವಲಯದ ಮೇಲ್ವಿಚಾರಕರಾದ ನವೀನ್ ,ವಿಪತ್ತು ನಿರ್ವಹಣೆಯ ಸಂಯೋಜಕರಾದ ವೆಂಕಟೇಶ್ ಸುಂದರ ಹಾಗೂ ನಿರ್ವಹಣೆಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಶಾಲಾ ಮಕ್ಕಳು ಒಕ್ಕೂಟ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳಾದ ರೋಹಿತಾ ,ಹರ್ಷಿತಾ ,ಗಾಯತ್ರಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
- Saturday
- November 23rd, 2024