ಸುಳ್ಯ ಲಯನ್ಸ್ ಕ್ಲಬ್ ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಹಸಿರೇ ಉಸಿರು ಕಾರ್ಯಕ್ರಮದಡಿಯಲ್ಲಿ ಆಲೆಟ್ಟಿ ಗ್ರಾಮದಾದ್ಯಂತ ಸುಮಾರು 10 ಸಾವಿರ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮಕ್ಕೆ ಜುಲೈ 31ರಂದು ಚಾಲನೆ ನೀಡಲಾಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ಡಾ. ಯು.ಪಿ.ಶಿವಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಅರಣ್ಯ ಇಲಾಖೆಯ ಎ.ಸಿ ಎಫ್, ವಿ.ಪಿ. ಕಾರ್ಯಪ್ಪ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್. ಭವಾನಿಶಂಕರ, ವಲಯ ಅರಣ್ಯಾಧಿಕಾರಿ ಆರ್.ಗಿರೀಶ್, ಲಯನ್ ಕ್ಯಾಬಿನೆಟ್ ಕಾರ್ಯದರ್ಶಿ ಶಶಿಧರ ಮಾರ್ಲ, ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಜಯರಾಮ ದೇರಪ್ಪಜ್ಜನಮನೆ, ಆಲೆಟ್ಟಿ ಪಂಚಾಯತ್ ಪಿ.ಡಿ ಒ ಕೀರ್ತಿಪ್ರಸಾದ್, ಲಯನ್ಸ್ ಮಾಜಿ ಗವರ್ನರ್ ಎಂ.ಸದಾಶಿವ, ಜಿಲ್ಲಾ ಜತೆ ಕಾರ್ಯದರ್ಶಿ ಅನಿಲ್ ಕುಮಾರ್,ಸಂಯೋಜಕ ಪಿ.ಯಂ.ರಂಗನಾಥ್, ಜಯಪ್ರಕಾಶ್ ರೈ , ಕಾರ್ಯದರ್ಶಿ ರಮಿತಜಯರಾಮ ದೇರಪ್ಪಜ್ಜನಮನೆ, ಖಜಾಂಜಿ ರಾಮಚಂದ್ರ ಎಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು, ಆಲೆಟ್ಟಿ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು, ಆನಂದ್ ಇಲೆಕ್ರಿಕಲ್ಸ್ ಸಂಸ್ಥೆಯ ಉದ್ಯೋಗಿಗಳು ಸಹಕರಿಸಿದರು. ಹಸಿರು ಉಸಿರು ಎಂಬ ಟ್ಯಾಬ್ಲೋ ಗೆ ಶಶಿಧರ ಮಾರ್ಲ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಗಿಡಗಳನ್ನು ಹೊತ್ತ 20 ಪಿಕ್ ಅಪ್ ವಾಹನದ ಜಾಥಾ ಸುಳ್ಯ ನಗರದ ಮೂಲಕ ಹಾದು ಹೋಗಿ ಆಲೆಟ್ಟಿ ಗ್ರಾಮದ ಪ್ರತೀ 8 ವಾರ್ಡಿಗೆ ಮನೆ ಮನೆ ತೆರಳಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಯುವಜನ ಸಂಯುಕ್ತ ಮಂಡಳಿಯ ಮೈದಾನದಲ್ಲಿ ಸಾಂಕೇತಿಕವಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ ಯಂತ್ರದ ಮುಖಾಂತರ ಗುಂಡಿ ತೆಗೆದು ಗಿಡ ನೆಡುವುದರೊಂದಿಗೆ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
- Thursday
- November 21st, 2024