
ಸ್ವರ್ಣ ಮಹಿಳಾ ಮಂಡಲ (ರಿ) . ಕನಕಮಜಲು ಇದರ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮವು ಜು.31ರಂದು ಶ್ರೀ ಆತ್ಮ ರಾಮ ಭಜನಾ ಮಂದಿರದಲ್ಲಿ ನಡೆಯಿತು. ಶ್ರೀಮತಿ ಕೃತಿಕಾ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕು ಮಹಿಳಾ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಶ್ರೀಮತಿ ಶಾರದಾ ಉಗ್ಗಮೂಲೆ ಕನಕಮಜಲು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಹಿಳಾ ಮಂಡಲದ ಕಾರ್ಯದರ್ಶಿಯಾದ ಶ್ರೀಮತಿ ಪ್ರೇಮ ಅಡ್ಕಾರ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಶ್ರೀಮತಿ ಸುಶೀಲಾ ಮಗೇಶ್ವರ ಕಾರಿಂಜ,ಕಾರ್ಯದರ್ಶಿಯಾಗಿ ಶ್ರೀಮತಿ ರಕ್ಷಿತಾ ಸತ್ಯಕುಮಾರ್ ದೇರ್ಕಜೆ ಉಪಾಧ್ಯಕ್ಷರಾಗಿ ಶ್ರೀಮತಿ ಶ್ಯಾಮಲ ಪೆರುಂಬಾರ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಅಡ್ಕಾರ್, ಹಾಗೂ ಶ್ರೀಮತಿ ಪೂರ್ಣಿಮಾ ಮಾಣಿಕೋಡಿ, ಶ್ರೀಮತಿ ರಶ್ಮಿ ಕಣಜಾಲ್, ಶ್ರೀಮತಿ ಶಾರದಾ ಉಗ್ಗಮೂಲೆ, ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಸಲಹಾ ಸಮಿತಿಯನ್ನು ರಚಿಸಲಾಯಿತು. ಶ್ರೀಮತಿ ಕುಸುಮ ಅಡ್ಕಾರ್ ಪ್ರಾರ್ಥಿಸಿದರು . ಶ್ರೀಮತಿ ಸುಮತಿ ಕುತ್ಯಾಳ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ವಾರಿಜಕೋಡ್ತಿಲು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು.