ಭೂ ಪರಿವರ್ತನೆ ಆಗದೆ ಗ್ರಾಮದಲ್ಲಿ ಬಡವರಿಗೆ ಸಮಸ್ಯೆ ಆಗುತಿದೆ. ಇದರ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ನ 14 ಮಂದಿ ಸದಸ್ಯರು ತಾಲೂಕು ಕಚೇರಿ, ತಾ.ಪಂ ಎದುರಿನಲ್ಲಿ ಗ್ರಾ.ಪಂ. ಸದಸ್ಯರು ಧರಣಿ ನಡೆಸಲು ಸಂಪಾಜೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಗ್ರಾ.ಪಂ.ಆಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.
ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪಾಜೆ ಗ್ರಾಮದ ಹಲವು ಸರ್ವೆ ನಂಬ್ರಗಳಲ್ಲಿ ಫ್ಲೋಟಿಂಗ್ ಆಗದೇ ಭೂ ಪರಿವರ್ತನೆ ಆಗುತ್ತಿಲ್ಲ. ಇದರಿಂದ ಬಡವರು, 10 ಸೆಂಟ್ಸ್ ಸ್ಥಳ ಇರುವವರಿಗೆ ಪಹಣಿ ಪತ್ರ ಇದ್ದರೂ ಪಂಚಾಯತ್ ನಿಂದ ಡೋರ್ ನಂಬ್ರ ಕೊಡಲು ಆಗುವುದಿಲ್ಲ. ಮನೆ ಕಟ್ಟಿದ ಬಡವರಿಗೆ ವಿದ್ಯುತ್ ಪಡೆಯಲು ನಿರಾಕ್ಷೇಪಣಾ ಪತ್ತ ಪಡೆಯಲಾಗುತ್ತಿಲ್ಲ.ಈ ಬಗ್ಗೆ ಕೂಡಲೇ ಕ್ರಮ ಕೈ ಗೊಲ್ಲದಿದ್ದಲಿ ಎಲ್ಲಾ 14 ಜನ ಸದಸ್ಯರು ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯತ್ ಎದುರು ಧರಣಿ ಮಾಡಲು ನಿರ್ಧರಿಸಲಾಯಿತು. ಕಳೆದ 3 ವರುಷಗಳಿಂದ
ಸಂಪಾಜೆ ಗ್ರಾಮಕ್ಕೆ ಯಾವುದೇ ಯೋಜನೆಯಡಿಯಲ್ಲಿ ಮನೆ ಮಂಜೂರಾತಿ ಆಗಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲು ನಿರ್ಧರಿಸಲಾಯಿತು.
ಗ್ರಾಮದ ವಿದ್ಯುತ್ ಸಮಸ್ಯೆ ಸರಿಪಡಿಸಲು ಮೆಸ್ಕಾಂ ಸ್ಪಂದಿಸುತಿಲ್ಲ. ಟ್ರೀ ಕಟಿಂಗ್ ಮಾಡಿಲ್ಲ ನಿರಂತರ ಪವರ್ ಕಟ್ ಇದೆ ಎಂದು ಸದಸ್ಯರು ದೂರಿದರು. ಈ ಕುರಿತು ಮೆಸ್ಕಾಂ ಮುಖ್ಯ ಅಭಿಯಂತರರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ತೀರ್ಮಾನಿಸಲಾಯಿತು. ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಕಳುಹಿಸಲು,ಘನ ತ್ಯಾಜ್ಯ ಘಟಕಕ್ಕೆ ಸ್ಥಳಕ್ಕೆ ಪುನರ್ ಪರಿಶೀಲನೆ ಮಾಡಲು, ಆರೋಗ್ಯ ಸಹಾಯಕಿ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪ್ರಯತ್ನ ನಡೆಸಲು ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಉಪಾಧ್ಯಕ್ಷೆ ಲೆಸ್ಸಿ ಮೊನಾಲಿಸಾ, ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಸುಂದರಿ ಮುಂಡಡ್ಕ, ಜಗದೀಶ್ ರೈ, ಶೌವಾದ್ ಗೂನಡ್ಕ, ಅಬುಸಾಲಿ, ಎಸ್. ಕೆ. ಹನೀಫ್, ವಿಜಯ ಅಲಡ್ಕ,ವಿಮಲಾ ಪ್ರಸಾದ್, ಸುಮತಿ ಶಕ್ತಿವೇಲು, ಸುಶೀಲಾ, ರಜನಿ, ಉಪಸ್ಥಿತರಿದ್ದರು.ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
- Saturday
- November 23rd, 2024