- Sunday
- June 7th, 2026
ಬಾಳುಗೋಡು ಗ್ರಾಮದ ಅಯ್ಯಪ್ಪ ಯುವಕ ಮಂಡಲ ಉಪ್ಪುಕಳ ಇದರ ಸದಸ್ಯರಿಂದ ವನ್ಯಜೀವಿಗಳಿಗಾಗಿ ಹಣ್ಣಿನ ಗಿಡ ಬೆಳೆಸಿ ಅಭಿಯಾನ ಜೂ. 6 ರಂದು ಆರಂಭಿಸಲಾಯಿತು. ಅಭಿಯಾನದಲ್ಲಿ ಬಾಳುಗೋಡು ಉಪ್ಪುಕಳ ಸಂಪರ್ಕ ರಸ್ತೆಯ ಮಾನಡ್ಕ ಎಂಬಲ್ಲಿಂದ ಕೊತ್ನಡ್ಕವರೆಗೆ ರಸ್ತೆಯ ಬದುಗಳಲ್ಲಿ ಮಾವಿನ ಸಸಿ, ಪೇರಳೆ ಸಸಿ, ನಕ್ಷತ್ರ ಹಣ್ಣಿನ ಸಸಿ, ಗೇರುಬೀಜ ಸಸಿ, ಕಾಳುಮೆಣಸು ಬಳ್ಳಿಗಳನ್ನು ನೆಡಲಾಯಿತು. ವಿಶೇಷವಾಗಿ...
ಕೇನ್ಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೇನ್ಯ ಗ್ರಾಮದ ಕಾರ್ಯತಡ್ಕದಿಂದ ಪೇರ್ಬಂಡ ಕೆರೆಕೋಡಿ ನೇಲ್ಯಡ್ಕ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಮತ್ತು ರಸ್ತೆ ದುರಸ್ತಿ ಮಾಡುವ ಮುಖಾಂತರ ಜೂ.6ರಂದು ಶ್ರಮದಾನ ಮಾಡಲಾಯಿತು.ಈ ಶ್ರಮದಾನದಲ್ಲಿ ಜಾಗರಣ ಕಾರ್ಯಕರ್ತರು ಭಾಗವಹಿಸಿದರು.
ಶೇಣಿ ಕುಳ್ಳಾಜೆಯ ಎಂ.ಎಸ್.ಕೆ. ತಂಡದ ಸದಸ್ಯರಿಂದ ಶೇಣಿ ಪಾಡಾಜೆ ರಸ್ತೆಯಲ್ಲಿದ್ದ ಗುಂಡಿಯನ್ನು ಕಾಂಕ್ರೀಟ್ ಹಾಕಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸುಬ್ರಾಯ ಸೂರೆಂಗಿ, ವಿಜಯ ಕುಳ್ಳಾಜೆ, ಸುಬ್ರಮಣ್ಯ ಸೂರೆಂಗಿ, ದಿನೇಶ್ ಕುಳ್ಳಾಜೆ, ವಿಶ್ವನಾಥ ಕುಳ್ಳಾಜೆ, ದೀಕ್ಷಿತ್ ಶೇಣಿ, ಕೃತಿಕ್ ಕುಳ್ಳಾಜೆ, ಜಗದೀಶ್ ಕುಳ್ಳಾಜೆ, ನಿತೀನ್ ಕುಳ್ಳಾಜೆ, ಯಶೋಧರ ಕುಳ್ಳಾಜೆ, ರಾಮಚಂದ್ರ ಕುಳ್ಳಾಜೆ ಉಪಸ್ಥಿತರಿದ್ದರು.
ಉತ್ತರಾಖಂಡ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ಎನ್.ಎಂ.ಸಿ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ.ಪಿ. ಆಯ್ಕೆ
ಸುಳ್ಯದ ಎನ್ ಎಂ ಸಿ ಪ್ರಥಮ ಬಿ ಕಾಂ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ ಪಿ ಯವರು ಉತ್ತರಕಾಶಿ ಉತ್ತರಖಾಂಡ್ ನಲ್ಲಿ ಎನ್ ಸಿ ಸಿ ವತಿಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. 19 ಕೆಎಆರ್ ಬೆಟಾಲಿಯನ್ , ಎನ್ ಸಿ ಸಿ ಮಡಿಕೇರಿಯಿಂದ ಆಯ್ಕೆ ಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ. 2021 ಜೂನ್ 6...
