Ad Widget

ಸುಳ್ಯ : ಯುವ ಉದ್ಯಮಿಗಳಿಂದ ಅಶಕ್ತ ಬಡಕುಟುಂಬಗಳಿಗೆ ಧನಸಹಾಯ ಮತ್ತು ಕಿಟ್ ವಿತರಣೆ

ಸುಳ್ಯದ ಯುವ ಉದ್ಯಮಿಗಳಾದ ಪ್ರಗ್ಯಾನ್ ಎಂಟರ್ ಪ್ರೈಸಸ್ ನ ಮಾಲಕ ಕಾರ್ತಿಕ್ ರೈ ಕನ್ನೆಜಾಲು, ಡಿಸೈನ್ ಇಂಟಿರಿಯರ್ಸ್ ನ ಅಶ್ವಿನ್ ಅಡ್ಕಾರ್, ಆದಿಲಕ್ಷ್ಮೀ ಟ್ರಾನ್ಸ್ ಪೋರ್ಟ್ ನ ರಾಜೇಶ್ ಕಿರಿಭಾಗ, ವಿನಾಯಕ ಸೂಪರ್ ಮಾರ್ಕೆಟ್ ನ ಅಮೃತ್ ರಾಜ್ ಸುಳ್ಯ ರವರ ನೇತೃತ್ವದಲ್ಲಿ ಅಶಕ್ತ ಬಡಕುಟುಂಬಗಳನ್ನು ಗುರುತಿಸಿ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ನ್ನು ವಿತರಿಸಿದರು. ನಾಗಪಟ್ಟಣದಲ್ಲಿರುವ ವಿಕಲಚೇತನ ಮನೆಗೆ, ಕಲ್ಲುಮುಟ್ಲುವಿನ ಉಮೇಶ ಎಂಬವರ ಮಗನ ಚಿಕಿತ್ಸೆಗೆ, ರಾಜೇಶ್ವರೀ ಕಲ್ಲುಮುಟ್ಲು ರವರಿಗೆ ,ಜಯನಗರ, ಕಾಂತಮಂಗಲ, ಸುಳ್ಯ ನಗರ ಪ್ರದೇಶಗಳಲ್ಲಿ ಅಶಕ್ತರನ್ನು ಗುರುತಿಸಿ ವಿತರಿಸಿದರು. ಈ ಸಂದರ್ಭ ಪ್ರದೀಪ್ ಅಡ್ತಲೆ,ವಿನಯ್ ನಾರಾಲು, ಮಂಜುನಾಥ ಬಳ್ಳಾರಿ, ಆನಂದ, ನವೀನ್ ಮಚಾದೊ ರವರು ಸಹಕರಿಸಿದರು. ಸುಮಾರು 1500 ರೂ. ಮೌಲ್ಯದ 12 ಮನೆಗೆ ಕಿಟ್ ಹಾಗೂ ರೂ. 10 ಸಾವಿರದಷ್ಟು ಸಹಾಯಧನ ನೀಡಿ ಸಾಮಾಜಿಕ ಕಾಳಜಿ ವ್ಯಕ್ತಪಡಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading