ಕೋವಿಡ್-19 ಎರಡನೇ ಅಲೆಯು ಆರಂಭವಾಗುವುದಕ್ಕಿಂತ ಮೊದಲು ಅದನ್ನು ತಡೆಗಟ್ಟಲು ಬೇಕಾದಂತಹ ಯೋಜನೆಗಳನ್ನು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಬಿಜೆಪಿ ಸರಕಾರ ಎಲ್ಲದರಲ್ಲೂ ಕೂಡ ವೈಫಲ್ಯವನ್ನು ಕಂಡು ಕೋವಿಡ್ ನಿರ್ವಹಣೆ ಮಾಡಲು ಸಾಧ್ಯವಾಗದೇ ಕೈ ತೊಳೆದು ಕೊಂಡಿದೆ.
ಸರ್ಕಾರವು ತನ್ನ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗದ ನಿಟ್ಟಿನಲ್ಲಿ ಆಕ್ಸಿಜನ್ ಕೊರತೆಯಿಂದ,ಬೆಡ್ ಗಳ ಸೌಲಭ್ಯಗಳ ಕೊರತೆಯಿಂದ, ವ್ಯಾಕ್ಸಿನ್ ಅಲಭ್ಯತೆಯಿಂದ ಹಲವು ಜೀವಗಳು ಕಳೆದುಕೊಂಡಿದ್ದೇವೆ. ಇದೆಲ್ಲವೂ ಕೂಡ ಬಿಜೆಪಿ ಸರ್ಕಾರದ ವೈಫಲ್ಯ ವನ್ನು ಎತ್ತಿ ತೋರಿಸುತ್ತದೆ.
ಅದೇ ರೀತಿಯಲ್ಲಿ ಎರಡನೇ ಅಲೆಯನ್ನು ತಡೆಗಟ್ಟಲೆಂದು ಲಾಕ್ ಡೌನ್ ಘೋಷಣೆ ಮಾಡಿದ್ದಾರೆಯೇ ಹೊರತು ದುಡಿಯುವ ವರ್ಗಕ್ಕೆ, ಬಡವರಿಗೆ ಮತ್ತು ಮದ್ಯಮ ವರ್ಗದ ಜನರಿಗೆ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಜನರ ಕಣ್ಣಿಗೆ ಮಣ್ಣು ಎರಚುವಂತೆ ಜುಜುಬಿ ಪ್ಯಾಕೇಜ್ ಗಳನ್ನು ಘೋಷಿಸಿ ಜನರಿಗೆ ಮತ್ತೊಂದು ರೀತಿಯಲ್ಲಿ ಮೋಸದ ಬಲೆಯನ್ನು ಬೀಸಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.
ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಕೋವಿಡ್ ನ್ನು ನಿರ್ವಹಣೆ ಮಾಡುತ್ತಿರುವುದು ಗ್ರಾಮೀಣ ಮಟ್ಟದ ಸ್ಥಳೀಯ ಆಡಳಿತ ಆಗಿರುತ್ತದೆ.ಅದೇ ರೀತಿಯಲ್ಲಿ ಅಭಿವೃದ್ದಿ ಆಗಬೇಕಾಗಿರುವುದು ಕೂಡ ಗ್ರಾಮೀಣ ಮಟ್ಟದಲ್ಲಾಗಿದೆ ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಗೆ ಬರುವಂತಹ ಅನುದಾನವನ್ನು ಕೂಡ ಕಡಿತಗೊಳಿಸುವುದರ ಮೂಲಕ ಇವತ್ತು ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಮಟ್ಟದ ಪೆಟ್ಟನ್ನು ಕೊಟ್ಟು ಇಡೀ ಗ್ರಾಮವನ್ನು ಅಭಿವೃದ್ಧಿ ಗೊಳಿಸದಂತೆ ಮಾಡಿರುತ್ತದೆ. ಇದೆಲ್ಲವೂ ಕೂಡ ಬಿಜೆಪಿ ಸರ್ಕಾರದ ವೈಫಲ್ಯ ಮತ್ತು ಅವರು ಯಾವ ರೀತಿಯಲ್ಲಿ ಇವತ್ತು ಅಭಿವೃದ್ದಿಹೀನವಾದ ಆಡಳಿತ ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ ಇವತ್ತು ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದಲ್ಲಿ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಆದ್ದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾ.ಪಂ. ಗಳಿಗೆ ಹೆಚ್ಚು ಅನುದಾನವನ್ನು ನೀಡಬೇಕಾದ ಸರಕಾರ ಅನುದಾನದಲ್ಲಿಯೇ ಕಡಿತ ಗೊಳಿಸಿರುವುದು ಖಂಡನೀಯವಾಗಿದೆ ಮತ್ತು ಅಭಿವೃದ್ಧಿ ವಿರೋಧಿ ನಿಲುವುಗಳಾಗಿದೆಯೆಂದು ಬೆಳ್ಳಾರೆ ಗ್ರಾ.ಪಂ ಸದಸ್ಯರೂ , ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.
- Saturday
- November 23rd, 2024