ದೇವಚಳ್ಳ ಗ್ರಾಮದ ದೇವ ಕಾಲೋನಿ ಮತ್ತು ಅಡ್ಡನಪಾರೆಯಲ್ಲಿ ಕೋವಿಡ್ ಸಂತ್ರಸ್ತರಿಗೆ ಸೇವಾ ಭಾರತಿ ಮತ್ತು ಸಚಿವರಾದ ಎಸ್. ಅಂಗಾರ ರವರ ನೇತೃತ್ವದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಎಪಿಎಂಸಿ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ಭವಾನಿಶಂಕರ್ ಮುಂಡೋಡಿ, ಪ್ರೇಮಲತಾ ಕೇರ,ಹಾಗೂ ಸೀತಮ್ಮ ಕರಂಗಲ್ಲು , ಮಾಜಿ ಪಂಚಾಯತ್ ಅಧ್ಯಕ್ಷರಾದ ದಿವಾಕರ್ ಮುಂಡೋಡಿ, ಕೃಷ್ಣಯ್ಯ ಮೂಲೆತೋಟ, ಸೇವಾಭಾರತಿಯ ಸದಸ್ಯರು , ಬೂತ್ ಸಮಿತಿಯ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Thursday
- November 21st, 2024