ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50 ಕ್ಕಿಂತ ಹೆಚ್ಚು ಸಕ್ರೀಯ ಪ್ರಕರಣಗಳಿರುವ ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡನ್ನು ಜೂ 14 ರಿಂದ 21 ರವರೆಗೆ ಲಾಕ್ ಡೌನ್ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜೂ. 14 ಬೆಳಿಗ್ಗೆ 9 ರಿಂದ ಜೂ 21 ಬೆಳಿಗ್ಗೆ 9 ರವರೆಗೆ ಲಾಕ್ ಡೌನ್ ಆಗಲಿದೆ. ಕಡಬ ತಾಲೂಕಿನ ಸವಣೂರು ಮತ್ತು ಸುಬ್ರಹ್ಮಣ್ಯ ಕೂಡ ಲಾಕ್ ಆಗಲಿದೆ. ಈ 5 ಗ್ರಾ.ಪಂ.ವ್ಯಾಪ್ತಿಯಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ, ಹಾಲಿನ ಬೂತ್, ಹಾಲು ಸೊಸೈಟಿಗಳಲ್ಲಿ ಹಾಲು ಖರೀದಿಗೆ, ಪೆಟ್ರೋಲ್ ಪಂಪ್, ತುರ್ತು ಸೇವಾ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
- Thursday
- November 21st, 2024