ಹೇ ಮಾನವ….
ಆಮ್ಲಜನಕ ನೀಡುವ ಮರಗಿಡಗಳನ್ನು ಕಡೆದುರುಳಿಸುತ್ತಿದ್ದೆ ಅಂದು…
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಪರದಾಡುತ್ತಿರುವೆ ಇಂದು…
ಉದ್ಯೋಗಕ್ಕಾಗಿ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋದೆ ಅಂದು…
ಕೊರೋನಾ ಬಂತೆಂದು ಹೆದರಿ ಉದ್ಯೋಗವನ್ನು ತೊರೆದು ಮರಳಿ ಹಳ್ಳಿಗೆ ಬಂದೆ ಇಂದು…
ಸಂಬಂಧಗಳ ಬೆಲೆಯನ್ನು ಮರೆತು ಹೋದೆ ಅಂದು…
ಸಂಬಂಧಗಳ ನಿಜವಾದ ಬೆಲೆಯನ್ನು ತಿಳಿದು ಹಿಂತಿರುಗಿ ಬಂದೆ ಇಂದು…
ಜೀವನದಲ್ಲಿ ಹಣವೇ ಮುಖ್ಯ ಎಂದು ತಿಳಿದಿದ್ದೆ ಅಂದು…
ಹಣಕ್ಕಿಂತ ಗುಣ ಮುಖ್ಯ ಎಂದು ತಿಳಿದುಕೊಂಡೆ ಇಂದು…
ದಿನನಿತ್ಯ ಮನೆಯಿಂದ ಹೊರಗೆ ಓಡಾಡುತ್ತಿದ್ದೆ ಅಂದು…
ದಿನವಿಡೀ ಮನೆಯೊಳಗೆ ಕೂರುವಂತಾಯಿತು ಇಂದು…
ತನ್ನ ಕಷ್ಟವೇ ದೊಡ್ಡದು ಎಂದುಕೊಂಡಿದ್ದೆ ಅಂದು…
ಇತರರ ಕಷ್ಟಗಳಿಗೆ ಸ್ಪಂದಿಸುತ್ತಿರುವೆ ಇಂದು…
ತನಗೆ ಕಷ್ಟ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದೆ ಅಂದು…
ಜಗತ್ತು ಈ ಕಷ್ಟದಿಂದ ಮುಕ್ತವಾಗಲಿ ಎಂದು ಪ್ರಾರ್ಥಿಸುತ್ತಿರುವೆ ಇಂದು…
ಈ ಜಗತ್ತಿನಲ್ಲಿ ತನಗೊಬ್ಬನಿಗೆ ಇಷ್ಟೊಂದು ಕಷ್ಟ ಎಂದು ನೋವು ಅನುಭವಿಸುತ್ತಿದ್ದೆ ಅಂದು…
ತನಗಿಂತ ಕಷ್ಟದಲ್ಲಿರುವವರ ಕಷ್ಟದ ಮುಂದೆ ತನ್ನ ಕಷ್ಟ ಏನೇನೂ ಅಲ್ಲ ಎಂದು ತಿಳಿದುಕೊಂಡೆ ಇಂದು…
ಮಾನವೀಯತೆಯನ್ನು ಮರೆತು ವರ್ತಿಸಿದ್ದೆ ಅಂದು…
ಮಾನವೀಯತೆಯ ನಿಜವಾದ ಬೆಲೆಯನ್ನು ತಿಳಿದುಕೊಂಡೆ ಇಂದು…
ಹೇ ಮಾನವ ನಿನ್ನ ಬದುಕಿನ ರೀತಿ ಹೇಗಿತ್ತು ಅಂದು…
ಹೇಗೆ ಬದಲಾಯಿತು ಇಂದು…
ಈ ಬದಲಾವಣೆಗೆ ಕಾರಣವಾದರೂ ಏನು…?
ಕಣ್ಣಿಗೆ ಕಾಣದ ವೈರಸ್ “ಕೊರೊನಾ” …!
✍ಉಲ್ಲಾಸ್ ಕಜ್ಜೋಡಿ