ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಮೇರಿಕಾದ ನಾಸಾ ಬಾಹ್ಯಕಾಶ ಸಂಶೋಧನ ಕೇಂದ್ರ ತನ್ನ ಸಂಶೋಧನೆಯಿಂದ ಹೀಗೆ ಹೇಳಿದೆ, “ಯೋಗದಲ್ಲಿ ಬಳಸುವ ಓಂಕಾರವು ಈ ಜಗತ್ತು ಹುಟ್ಟುವ ಮೊದಲೇ ಹುಟ್ಟಿತ್ತು. ಸೂರ್ಯ ಮಂಡಲದಿಂದ ಸದಾ ಹೊರಹೊಮ್ಮುವ ಕಿರಣಗಳ ಧ್ವನಿಯು ಓಂಕಾರದಂತೆ ಕೇಳಿಸುತ್ತದೆ. ಸನಾತನ ಭಾರತೀಯ ಋಷಿಗಳು ಯೋಗ ಮತ್ತು ಧ್ಯಾನದಿಂದ ಶತಾಯುಷಿಗಳಾಗಿ ಜೀವಿಸುತಿದ್ದರೆಂದು ಹಲವು ಮೂಲಗಳು ತಿಳಿಸುತ್ತವೆ. ಸನಾತನ ಭಾರತೀಯ ಋಷಿಗಳು ಸಂಯೋಜಿಸಿದ ಯೋಗವನ್ನು ವಿಶೇಷ ಬಾಷ್ಯದಲ್ಲಿ ಹಾಗೂ ಎಂಟು ಹಂತಗಳಲ್ಲಿ ಬರೆದವರು ‘ ಪತಂಜಲಿ ಮಹರ್ಷಿ ‘. ಸುಮಾರು ಇಪ್ಪತಕ್ಕೂ ಹೆಚ್ಚು ಉಪನಿಷತ್ ಗಳು ಯೋಗದ ಬಗ್ಗೆ ಉಲ್ಲೇಖಿಸಿದೆ. ನಂತರದಲ್ಲಿ ಭಾರತೀಯ ಯೋಗವನ್ನು ಹೊರದೇಶಕ್ಕೆ ಪರಿಚಯಿಸಿದವರು ಬೌದ್ಧ ಭಿಕ್ಷುಗಳು. ಪತಂಜಲಿಯವರು ಅಷ್ಟಾಂಗ ಮಾರ್ಗದ ಜೊತೆ ಧ್ಯಾನವನ್ನು ಸೇರಿಸಿ ಎಲ್ಲೆಡೆ ಪಸರಿಸಿದರು. 2015 ಜೂನ್ 21 ರಂದು ನಮ್ಮ ಹೆಮ್ಮೆಯ ಭಾರತೀಯ ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿತು. ಸುಮಾರು 177 ದೇಶಗಳು ಭಾರತೀಯ ಯೋಗವನ್ನು ಒಪ್ಪಿಕೊಂಡರು. ಇಂತಹ ಇತಿಹಾಸ ಹೊಂದಿರುವ ಯೋಗದ ಶಿಕ್ಷಕರಾದವರು ಶರತ್ ಮರ್ಗಿಲಡ್ಕರವರು.
ಇವರು ತಮ್ಮ ಪದವಿ ಶಿಕ್ಷಣವನ್ನು ಮುಗಿಸಿ ಆಟೋ ಚಾಲಕನಾಗಿ ವೃತ್ತಿಯನ್ನು ಆರಂಭಿಸಿದರು. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ವಿವೇಕಾನಂದರ ಜಯಂತಿಯಂದು ಉಚಿತ ಆಟೋ ಸೇವೆ ಕೊಟ್ಟಿದಾರೆ. ಇವರು ಯುವಬ್ರಿಗೇಡ್ ಸಂಘಟನೆಯಲ್ಲಿದ್ದು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊದಗಿಸಿಕೊಳ್ಳುತಿದ್ದಾರೆ.
ಒಂದು ದಿನ ಪಂಚಾಯತ್ ಸಿಬ್ಬಂದಿಯೊಬ್ಬರು ಮಾವಿನಕಟ್ಟೆಯಲ್ಲಿ ಯೋಗ ತರಬೇತಿ ಇರುವುದಾಗಿ ಹೇಳಿದರು. ತಮ್ಮ ದೇಹದ ತೂಕ ಇಳಿಸಲು ಇವರು ಯೋಗ ಶಿಬಿರದಲ್ಲಿ ಭಾಗವಹಿಸಿದರು. ಇದು ಅವರ ಜೀವನದ ದಿಕ್ಕನ್ನು ಬದಲಾಯಿಸಿದ ಘಟನೆಯಾಯಿತು. ಆಗಲೇ ಅವರ ನರನಾಡಿಗಳಲ್ಲಿ ಯೋಗವು ಪಸರಿಸಿ ಹೋಗಿದ್ದು, ಯೋಗ ಎಂಬ ಮಾಹಾಜಗತ್ತಿಗೆ ಪಾದರ್ಪಣೆ ಮಾಡಿದರು.
ತದನಂತರ ಆನ್ಲೈನ್ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದರು. ಆವಿಷ್ಕಾರದ ಯೋಗ ಮಂಗಳೂರು ಇದರ ವತಿಯಿಂದ ನಡೆಸಲಾದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಕರ್ನಾಟಕ ರಾಜ್ಯ ಆಮೆಚೂರು ಯೋಗ ಕ್ರೀಡಾ ಸಂಸ್ಥೆಯವರು ಆಯೋಜಿಸಿದ ನಲವತ್ತನೇ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2020 ಇದರಲ್ಲಿ ಭಾಗವಸಿದ್ದು ಹೆಮ್ಮೆಯ ವಿಷಯವಾಗಿದೆ.
ಕುಂಡಲಿ ಯೋಗಶಾಲಾ ಬೆಂಗಳೂರು ಇದರ ವತಿಯಿಂದ ನಡೆದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಟಾಪ್ ಟೆನ್ ನಲ್ಲಿ ನಾಲ್ಕನೇ ಸ್ಥಾನ ಪಡೆಕೊಂಡ ಹಿರಿಮೆ ಇವರದ್ದು. ಪತಂಜಲಿ ಯೋಗಪೀಠ ಹರಿದ್ವಾರಾ ಇದರ ಮಾರ್ಗದರ್ಶನದಲ್ಲಿ ಆನ್ಲೈನ್ ಯೋಗ ಶಿಕ್ಷಕ ತರಬೇತಿ ಶಿಬಿರವನ್ನು ಪತಂಜಲಿ ಯೋಗ ಸಮಿತಿ ಕರ್ನಾಟಕ ಇವರು ಜನವರಿ 1ರಿಂದ 30ರವರೆಗೆ ನಡೆಸಿಕೊಟ್ಟ ಸುಳ್ಯದ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. ಸುಳ್ಯ ತಾಲೂಕಿನ ಹಲವಾರು ಕಡೆಗಳಲ್ಲಿ ಯೋಗ ಶಿಬಿರದಲ್ಲಿ ಭಾಗವಹಿಸಿ ಯೋಗ ಪ್ರದರ್ಶನವನ್ನು ಕೊಟ್ಟಿದ್ದಾರೆ. ಇದರೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹಲವಾರು ಮಂದಿಗೆ ಯೋಗದ ಬಗೆಗಿನ ವಿಷಯವನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದರೆ.
ಇವರ ಸಾಧನೆಗೆ ಮುಖ್ಯ ಮೇಲುಗೈ ಎಂದರೆ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ 25 ರಿಂದ 30ರ ವಯೋಮಿತಿಯ ಪುರುಷರ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದದ್ದು.
ಇಂದಿನ ಮಕ್ಕಳು ಯೋಗವನ್ನು ಕಲಿಯಬೇಕು ಹಾಗೂ ಅದರಲ್ಲಿ ಇನ್ನೂ ಏತ್ತರಕ್ಕೆ ಹೋಗಬೇಕೆಂಬುದು ಇವರ ಮಹದಾಸೆ.
ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಹಾಗೂ ಇವರ ಇಬ್ಬರು ಶಿಷ್ಯಂದಿರು ಆರಾಧ್ಯ ಎ.ರೈ ಹಾಗೂ ರಿತೇಶ್ ಜಿ. ಪ್ರಥಮ ಸ್ಥಾನ ಪಡೆದಿದ್ದಾರೆ.
“ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಇವರು ಪ್ರತಿದಿನ ಯೋಗಾಭ್ಯಾಸ ಮಾಡುತಿದ್ದಾರೆ. ಇದರೊಂದಿಗೆ ತಾವು ಕಲಿತು ತಮ್ಮವರಿಗೂ ಕಲಿಸಬೇಕು ಎನ್ನುವ ಉದ್ದೇಶದಿಂದ ಆನ್ಲೈನ್ ತರಗತಿ ಆರಂಭಿಸಿ ಪ್ರತಿನಿತ್ಯ ಯೋಗವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತಿದ್ದಾರೆ.
ಇವರು ಮರ್ಗಿಲಡ್ಕ ಸುಂದರ ಗೌಡ ಹಾಗೂ ಲಲಿತಾ ದಂಪತಿಗಳ ಪುತ್ರ ಹಾಗೂ ಸಂತೋಷ ಮುಂಡಕಜೆಯವರ ಶಿಷ್ಯ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೈಲಾರು ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಎಲಿಮಲೆ ಪ್ರೌಢ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಸುಳ್ಯ ಹಾಗೂ ಪದವಿ ಶಿಕ್ಷಣವನ್ನು ಕೊಡಿಯಾಲಬೈಲಿನಲ್ಲಿ ಮುಗಿಸಿದ್ದಾರೆ. ಮನೆಮಂದಿ ಇವರ ಸಾಧನೆಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇವರ ಸಾಧನೆ ಇನ್ನಷ್ಟೂ ಎತ್ತರಕ್ಕೇರಲಿ
ಯುವರಾಜ್ ಬಿ.ಎಸ್., ದ್ವಿತೀಯ ಪಿಯುಸಿ
ಸ.ಪ.ಪೂ. ಕಾಲೇಜು ಗುತ್ತಿಗಾರು