Ad Widget

ಕರ್ಮ ತಿರುಗಿದಾಗ…..


ಕೊರೊನ ಎಂದಾಕ್ಷಣ ನೆನಪಾಗುವುದೇ ಅದೆಷ್ಟೋ ದಿನಗಳನ್ನು ಕತ್ತಲೆಯ ಕೊಣೆಯೊಳಗೆ ಕಳೆದಂತೆ, ಬಂಧಿಸಲ್ಪಟ್ಟ ಚಿಟ್ಟೆಯಂತೆ ಕೆಲಸಕಾರ್ಯವಿಲ್ಲದೆ ನಾಳೆಯ ಬಗ್ಗೆ ಯೋಚಿಸುತ್ತ ಕಳೆದ ದಿನಗಳು. ನಮ್ಮ ಜೀವನವನೊಮ್ಮೆ ಹಿಂತಿರುಗಿ ನೋಡಿದಾಗ ಉರುಳುತಿದ್ದ ದಿನಗಳು ಹೊರೆತು ಬೇರೇನು ಇಲ್ಲ. ಸಾವಿನ ಎದುರಲೊಮ್ಮೆ ನಿಂತು ಅದರೆಡೆಗೆ ಕಣ್ಣು ಹಾಯಿಸಿದಂತೆ ಕಳೆದ ದಿನಗಳು ಹಾಗೂ ಕಳೆಯುತ್ತಿರುವ ದಿನಗಳು. ಅದೆಷ್ಟೋ ಕುಟುಂಬಗಳಲ್ಲಿ ಹೊಟ್ಟೆಯ ಹಿಟ್ಟಿಗಾಗಿ ಹಾತೊರೆಯುತ್ತಿರುವ ಕಂಗಳು, ಆ ಕಂಗಳಿಗೆ ಭರವಸೆಯ ಬೆಳಕ ಹರಿಸಿ ನೆರವಿನ ಹಸ್ತವ ನೀಡುವ ಕೈಗಳು ಇದೆಲ್ಲ ಒಂದೆಡೆಯಾದರೆ ಪುಟ್ಟ ಸಸಿಯೊಂದು ಬೆಳೆದು ನಿಂತಿರಲು ಚಿಗುರ ಚಿವುಟುವಂತೆ ಬಂದ ಅಟ್ಟಹಾಸ ಯುವಜನತೆಯ ಮೇಲೆ ಪ್ರಬಲವಾದ ಪ್ರಭಾವವನ್ನು ಬಿರುತ್ತಾ ಕಷ್ಟಗಳ ಸಂಕೋಲೆಯನ್ನು ಕಡಿದು ವಿದ್ಯಾಭ್ಯಾಸ ಮುಗಿಸಿ ಜೀವನಕ್ಕಾಗಿ ಉದ್ಯೋಗವನ್ನರಸಿ ಬಂದಾಗ ಕೊರೊನ ತನ್ನ ಅಜಾನುಭಾಹುವನ್ನು ವಿಶಾಲವಾಗಿ ಚಾಚಿಕೊಂಡು ಜೀವನದ ಗುರಿ ಮತ್ತು ಆಸೆಗಳೆರಡನ್ನು ದೂರಕ್ಕೆ ಎಸೆದಿದೆ. ಇಲ್ಲಿಗೆ ಮುಗಿಯಿತೇನು, ಇಲ್ಲ ಇನ್ನು ತನ್ನ ಆದೇಶವನ್ನು 1 ನೇ ಅಲೆ 2 ನೇ ಅಲೆಯಂತೆ ವಿಶೇಷ ರೂಪ ಧರಿಸಿ ಜೀವ ಜೀವನಗಳೆರಡನ್ನು ಧೂಳಿಪಟವನ್ನಾಗಿ ಮಾಡಲು ಇನ್ನೊಂದು ಮೆಟ್ಟಿಲೇರಿದೆ. ಅದೆಷ್ಟೋ ದೇಹಗಳು ಅನಾಥವಾಗಿ ಪರಲೋಕ ಸೇರಿವೆ ಅವುಗಳಿಗೆ ತನ್ನವರು ಯಾರು ಇಲ್ಲದಂತ ಪರಿಸ್ಥಿತಿಯಲ್ಲಿ ಇಹಲೋಕವನ್ನು ತ್ಯಜಿಸಿವೆ. ಮಾನವನ ಕರ್ಮ ಇನ್ನೊಂದು ರೂಪ ತಾಳಿ ಹಿಂದಿರುಗಿವೆ ಅವನ ಕರ್ಮಗಳಿಗೆ ಪ್ರಕೃತಿಯ ಉತ್ತರ ದಿಗ್ಬ್ರಮೆಗೊಳಿಸುವಂತೆ ಬಡಿದು ಹೇಳುತ್ತಿವೆ.
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ ಆದರೆ ಕಾಲ ಕೆಡುವುದಿಲ್ಲ ಜನರ ನಡತೆ ಆಚಾರ ವಿಚಾರ ಇಂದು ತನ್ನನ್ನು ತಾನೇ ಸಾವಿನ ಬಾಯಿಗೆ ದೂಡುತ್ತಿವೆ. ನಮ್ಮ ದುಃಖಗಳಿಗೆ ನಾವೇ ಜವಾಬ್ದಾರರು ಮತ್ತಾರೂ ಅಲ್ಲ, ನಮ್ಮ ಅದೃಷ್ಟಗಳನ್ನು ರೂಪಿಸುಕೊಳ್ಳುವ ಭರದಲ್ಲಿ ನಾವು ಪ್ರಕೃತಿಯ ಅವನತಿಗೆ ಕಾರಣಿಕರ್ತರಾಗಿದ್ದೇವೆ.
ತುಂಬಿದ ಜೇಬು ಅಂದು ಆಟವಾಡುತಿತ್ತು
ಖಾಲಿಯಾದ ಪ್ರಕೃತಿ ಇಂದು ಆಟವಾಡುತಿದೆ. ಇನ್ನಾದರೂ ಅರಿತು ತಿಳಿದು ಜಗತ್ತಿನ ಕಟ್ಟ ಕಡೆಯ ಮರವನ್ನು ಧರೆಗುರುಳಿಸುವ ಮುನ್ನ ನಮ್ಮೊಂದಿಗೆ ಪ್ರಕೃತಿ ಇರಲಿ ಎಂಬಂತೆ ಬದುಕಿನ ದಾರಿಯಲ್ಲಿ ಮುನ್ನಡೆಯೋಣ. ಚಾಣಕ್ಯನ ಮಾತಿನಂತೆ ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷವಾಗಿ ಮಾರ್ಪಡುವುದು ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ಹಾಗೂ ದುರಾಸೆ ಯಾವುದಾದರೂ ಇರಬಹುದು. ಅವಶ್ಯಕತೆಗಿಂತ ಮೀರಿ ಹೋದರೆ ಅನಾಹುತ ಖಂಡಿತ.

. . . . . . . . .

ತೇಜಸ್ವಿನಿ ಬೊಮ್ಮೆಟ್ಟಿ
ಪ್ರಥಮ ಬಿ.ಕಾಂ.
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading