ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ; ಒಟ್ಟು 480 ಕೋಟಿ ವ್ಯವಹಾರ – 1.80 ಕೋಟಿ ನಿವ್ವಳ ಲಾಭ ; ಶೇ.14 ಡಿವಿಡೆಂಡ್ ಘೋಷಣೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆ.06ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘವು ಪ್ರಸಕ್ತ ವರ್ಷದಲ್ಲಿ 480 ಕೋಟಿ 86 ಲಕ್ಷದ 59 ಸಾವಿರದ 531 ರೂಪಾಯಿ ವ್ಯವಹಾರ ನಡೆಸಿದ್ದು, 1 ಕೋಟಿ 80 ಲಕ್ಷದ 22 ಸಾವಿರದ 950 ರೂಪಾಯಿ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡುವುದಾಗಿ ಘೋಷಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರುಗಳಾದ ಡ್ಯಾನಿ ಯಳದಾಳು, ರೇಗನ್ ಶೆಟ್ಯಡ್ಕ, ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ ಗೌಡ ಮುಳ್ಳುಬಾಗಿಲು, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು, ಬೊಳಿಯ ಅಜಿಲ ಬೆಂಡೋಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ತೀರ್ಥಕುಮಾರಿ.ವೈ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನಮನೆ, ನಿವೃತ್ತ ಯೋಧರಾದ ಯಶವಂತ ನಿಡುಬೆ, ಭಾಸ್ಕರ ಕೇಮಟಿ, ಶೈಕ್ಷಣಿಕ ಸಾಧಕಿ ಆಶಿಕಾ ಮುಂಡಾಜೆ ಹಾಗೂ ಸಂಘಕ್ಕೆ ವಿಶೇಷ ರೀತಿಯಲ್ಲಿ ಪ್ರೋತ್ಸಾಹ ನೀಡಿದವರನ್ನು ಗೌರವಿಸಲಾಯಿತು.
ಕಳೆದ ವರ್ಷದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಪೂರ್ವ ಹಾಗೂ ದಿವ್ಯಾ ಪ್ರಾರ್ಥನೆ ನೆರೇವೇರಿಸಿದರು. ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ ಸ್ವಾಗತಿಸಿ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ತೀರ್ಥಕುಮಾರಿ.ವೈ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕರಾದ ಕಮಲಾಕ್ಷ ಮುಳ್ಳುಬಾಗಿಲು ಧನ್ಯವಾದ ಸಮರ್ಪಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading