ಅಗಲಿದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಜು.20 ರಂದು ಸಾರ್ವಜನಿಕ ಶ್ರದ್ಧಾಂಜಲಿ ಸಭೆ – ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಜು.07 ರಂದು ಅಗಲಿದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಜು.20 ರಂದು ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಕಲಾ ಮಂದಿರದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ನಡೆಸುವ ಬಗ್ಗೆ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಸುಳ್ಯದ ವರ್ತಕರ ಸಂಘದ ಸಭಾಭವನದಲ್ಲಿ ಜು.9 ರಂದು ನಡೆಯಿತು. ಕಾರ್ಯಕ್ರಮದ ರೂಪುರೇಷೆ ಬಗ್ಗೆ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ...

ಸುಬ್ರಹ್ಮಣ್ಯ : ಲಾಡ್ಜ್ ನಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದ ರಾಮನಗರ ಜಿಲ್ಲೆಯ 30 ವರ್ಷದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ರಾಮನಗರ ಜಿಲ್ಲೆಯ ಕೈಲಂಜ ಹೋಬಳಿ, ಕೆ.ಪಿ.ದೊಡ್ಡ ಅಂಚೆ, ಉಚ್ಚಮ್ಮನದೊಡ್ಡಿ ನಿವಾಸಿ ಮಧು.ಎಸ್(30) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಮಧು ಅವರು ಜುಲೈ 8ರಂದು ಕುಕ್ಕೆ ಶ್ರೀ...
Ad Widget

ಕೊಲ್ಲಮೊಗ್ರು : ಮಾವಿನ ಮರಕ್ಕೆ ಗುದ್ದಿ ಜಖಂಗೊಂಡ ಕಾರು – ಕೂದಲೆಳೆ ಅಂತರದಲ್ಲಿ ಪಾರಾದ ಪಾದಾಚಾರಿ

ಕೊಲ್ಲಮೊಗ್ರದಲ್ಲಿ ಕಾರೊಂದು ಮಾವಿನ ಮರಕ್ಕೆ ಗುದ್ದಿದ ಘಟನೆ ಜು.09ರಂದು ನಡೆದಿದೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 7:30ರ ಸುಮಾರಿಗೆ ಹರಿಹರ ಪಳ್ಳತ್ತಡ್ಕ ಕಡೆಯಿಂದ ಬಂದ ಡಸ್ಟರ್ ಕಾರೊಂದು ಕೊಲ್ಲಮೊಗ್ರು ಪೇಟೆಯ ತಂಬಿನಡ್ಕ ಸಮೀಪ ಹಾಲಿನ ಡೈರಿ ಪಕ್ಕದಲ್ಲಿ ಇದ್ದ ಪಂಚಾಯತ್ ಪಂಪ್‌ಸೆಟ್ ಗೆ ಗುದ್ದಿ ಸುಮಾರು 50 ಮೀಟರ್ ಮುಂದಕ್ಕೆ ಹೋಗಿ ಮಾವಿನ ಮರಕ್ಕೆ ಗುದ್ದಿ...

ಜೇಸಿಐ ಸುಳ್ಯ ಪಯಸ್ವಿನಿಗೆ ಸಿಂಧು-2026 ಲೇಡಿ ಜೇಸಿ ಸಮ್ಮೇಳನ | ಟಾಪ್ 5 ಘಟಕದೊಂದಿಗೆ, ಹಲವು ಪುರಸ್ಕಾರ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ ಘಟಕವು ಮಹಿಳಾ ಪರ ಕಾರ‍್ಯಕ್ರಮಗಳ ಆಯೋಜನೆಯಲ್ಲಿ ಸಾಧನೆ ಮೆರೆದಿದ್ದು, ಜುಲೈ 5ರಂದು ಬೈಂದೂರಿನ ಜೆ.ಎನ್.ಆರ್. ಕಲಾಮಂದಿರದಲ್ಲಿ ನಡೆದ ಜೇಸಿಐ ಭಾರತ ವಲಯ-15ರ ಲೇಡಿ ಜೇಸಿ ಸಮ್ಮೇಳನ "ಸಿಂಧು-2026"ರಲ್ಲಿ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ. ಕಾರ‍್ಯಕ್ರಮದಲ್ಲಿ ಜೇಸಿಐ ಭಾರತ ವಲಯ-15ರ ವಲಯಾಧ್ಯಕ್ಷ ಜೆ.ಎಫ್.ಎಸ್. ಸಂತೋಷ್ ಶೆಟ್ಟಿ ಹಾಗೂ ಪ್ರಥಮ ಮಹಿಳೆ...

ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ ಚಿತ್ರ ಕಲಾವಿದೆ ಪೂಜಾ ಬೋರ್ಕರ್

ಸುಳ್ಯದ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ರವರು ಇದೀಗ ಮತ್ತೊಂದು ವಿಶೇಷ ಕಲಾಸಾಧನೆಯ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಕೇವಲ 3 ನಿಮಿಷ 30 ಸೆಕೆಂಡ್ ನಲ್ಲಿ 1.4 ಸೆ. ಮೀ. ಕಥಕಳಿ ಚಿತ್ರವನ್ನು ಕಡಲೆಕಾಳಿನಲ್ಲಿ ಬಿಡಿಸುವುದರೊಂದಿಗೆ ದಾಖಲೆ ನಿರ್ಮಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪಟ್ಟಿಯನ್ನು ಸೇರಿದ್ದಾರೆ....

ಬಿಳಿಯಾರು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ಅರಂತೋಡು ಗ್ರಾಮದ ಬಿಳಿಯಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 19 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆಗೈದು ಇದೀಗ ಗೂನಡ್ಕ-ದೊಡ್ಡಡ್ಕ ಶಾಲೆಗೆ ವರ್ಗಾವಣೆ ಗೊಂಡ ಅವರಿಗೆ ಜು. 6ರಂದು ಬಿಳಿಯಾರು ಸ.ಕಿ.ಪ್ರಾ. ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಇವರಿಗೆ ಶಾಲೆಯ ಶಿಕ್ಷಕಿ ಸುಜ್ಯೋತಿ ಅವರು ಮತ್ತು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಹಾಗೂ ಮಾಜಿ...

ಗೃಹಜ್ಯೋತಿ ಯೋಜನೆ ಪರಿಶೀಲನೆ : ವಿದ್ಯುತ್ ಗ್ರಾಹಕರಿಗೆ ಮೆಸ್ಕಾಂ ನಿಂದ ಪ್ರಮುಖ ಸೂಚನೆ..!

“ಕರ್ನಾಟಕ ಘನ ಸರ್ಕಾರದಿಂದ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಈಗಾಗಲೇ ನೋಂದಣಿಗೊಳಿಸಿರುವ ಗೃಹಬಳಕೆ ವಿದ್ಯುತ್ ಸ್ಥಾವರಗಳ ಮಾಹಿತಿಯನ್ನು ಪರಿಶೀಲನೆ ಮಾಡಲು ಮೆಸ್ಕಾಂ ಇಲಾಖೆಯ ವತಿಯಿಂದ ಮಾಪನ ಓದುಗರು ಹಾಗೂ ಪವರ್ ಮ್ಯಾನ್ ಸಿಬ್ಬಂದಿಗಳು ಪ್ರತೀ ಮನೆಗಳಿಗೆ ಭೇಟಿ ನೀಡಲಿದ್ದು, ಸದ್ರಿ ಭೇಟಿಯ ಸಂದರ್ಭದಲ್ಲಿ ವಿದ್ಯುತ್ ಗ್ರಾಹಕರುಗಳು ಗೃಹಜ್ಯೋತಿ ಯೋಜನೆಯ ನೋಂದಣಿ ಸಂದರ್ಭದಲ್ಲಿ ನೀಡಿರುವ ಆಧಾರ್ ಕಾರ್ಡ್ ಜೊತೆಗೆ...

ಚಾಲನ ಪರವಾನಿಗೆ ರಹಿತ ವಾಹನ ಚಾಲಕನು ತನ್ನ ವೈಯಕ್ತಿಕ ನೆಲೆಯಲ್ಲಿ ಮೃತನ ವಾರಿಸುದಾರರಿಗೆ ಪರಿಹಾರ ನೀಡುವಂತೆ ಸುಳ್ಯ ನ್ಯಾಯಾಲಯದಿಂದ ಆದೇಶ

ದಿನಾಂಕ 15/10/2024 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಅಕೌಂಟೆಂಟ್ ಭೋಜಪ್ಪ ಗೌಡರು ತನ್ನ ಬಾಪ್ತು ಕೆಎ 21 EC 3742 ನೋಂದಣಿ ನಂಬ್ರದ ಹೋಂಡಾ ಶೈನ್ ಮೋಟರ್ ಸೈಕಲ್ ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ಸೋಣoಗೇರಿ ಎಂಬಲ್ಲಿ ಅವರ ಎದುರುಗಡೆಯಿಂದ ಬರುತ್ತಿದ್ದ ಕೆ.ಎ 21 W 7626...

ಯೇನೇಕಲ್ಲು : ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯ ಜುಲೈ 9 : ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಯೇನೆಕಲ್ಲು ಇದರ ವತಿಯಿಂದ ಮಹಿಳೆಯರಿಗಾಗಿ ಮೂರು ದಿನಗಳ ಕಾಲ ನಡೆಯುವ ಮಹಿಳಾ ಕೌಶಲ್ಯ ತರಬೇತಿಯನ್ನು ಶಿಬಿರವನ್ನು ಇಂದು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಶ್ರೀಯುತ...

ಸುಬ್ರಹ್ಮಣ್ಯ : ಕಡಬ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ – ಹಿರಿಯ ಪತ್ರಕರ್ತ ಪಿ.ಬಿ ಹರೀಶ್ ರೈ ರವರಿಗೆ “ಮಾಧ್ಯಮ ಸಾಧಕ” ಹಾಗೂ ಪತ್ರಿಕಾ ವಿತರಕ ಬಸವರಾಜ್ ರಿಗೆ “ಶ್ರೇಷ್ಠ ಪತ್ರಿಕಾ ವಿತರಕ” ಪ್ರಶಸ್ತಿ ಪ್ರಧಾನ – “ಸಮಾಜವನ್ನು ಒಗ್ಗೂಡಿಸಿ ದೇಶ ಕಟ್ಟುವ ಕಾಯಕದಲ್ಲಿ ಪತ್ರಿಕೋದ್ಯಮದ ಪಾತ್ರ ಅನನ್ಯ” : ಅರವಿಂದ ಅಯ್ಯಪ್ಪ ಸುತಗುಂಡಿ

ಸುಬ್ರಹ್ಮಣ್ಯ : “ಪತ್ರಿಕೆಯು ಸಮಾಜವನ್ನು ತಿದ್ದುವ ಅಧಮ್ಯ ಕಾರ್ಯವನ್ನು ಮಾಡುತ್ತಿದೆ. ಹರಿತವಾದ ಆಯುಧವಾದ ಪೆನ್ನಿನ ಮೂಲಕ ಜನತೆಯ ಆಶೋತ್ತರಕ್ಕೆ ತಕ್ಕುದಾಗಿ ಕಾರ್ಯನಿರ್ವಹಿಸುವ ಅಂಗ ಇದಾಗಿದೆ. ಪತ್ರಕರ್ತರು ಪತ್ರಿಕೆಯಲ್ಲಿನ ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿಯ ಬೀಜವನ್ನು ಬಿತ್ತುತ್ತಾರೆ. ಸಮಾಜವನ್ನು ಒಗ್ಗೂಡಿಸಿ ದೇಶವನ್ನು ಕಟ್ಟುವ ಕಾಯಕವನ್ನು ಪತ್ರಿಕೋದ್ಯಮ ಮಾಡುತ್ತಿದೆ. ಆಧುನಿಕ ಯುಗದಲ್ಲಿ ಮೊಬೈಲ್ ವ್ಯಾಮೋಹವನ್ನು ತ್ಯಜಿಸಿ ಪತ್ರಿಕೆ...
Loading posts...

All posts loaded

No more posts

error: Content is protected !!