ಸುಳ್ಯ : ಮಟ್ಕಾ ಜೂಜಾಟ – ಆರೋಪಿಗಳು ದೋಷ ಮುಕ್ತ

ಸುಳ್ಯ ನಾವೂರು ಸಮೀಪ ಸಾರ್ವಜನಿಕ ಸ್ಥಳದಲ್ಲಿ 2025 ಮಾ.04 ರಂದು ಸಾರ್ವಜನಿಕರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ಆಡಿಸುತ್ತಿರುವುದನ್ನು ಖಚಿತ ಮಾಹಿತಿ ಪಡೆದುಕೊಂಡು ಸುಳ್ಯ ಪೋಲಿಸ್ ಠಾಣಾ ಉಪ ನಿರೀಕ್ಷಕರಾದ ಸಂತೋಷ ಬಿ.ಪಿ ರವರು ದಾಳಿ ನಡೆಸಿ ಬಾಬು ಮತ್ತು ಕಾವೇರಿ ಜಗ್ಗ ಅಲಿಯಾಸ್ ಜಗದೀಶ್ ಪೂಜಾರಿ ಎಂಬವರ ಮೇಲೆ ಪ್ರಕರಣವನ್ನು ದಾಖಲಿಸಿ ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

. . . . . . . . .

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯ ಹಿರಿಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ತಟ್ಟಂಡ ದಮಯಂತಿ ಸೋಮಯ್ಯ ರವರು ಆರೋಪಿಗಳಾದ ಬಾಬು ಮತ್ತು ಕಾವೇರಿ ಜಗ್ಗ ಅಲಿಯಾಸ್ ಜಗದೀಶ್ ಎಂಬುವರ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಜು.17 ರಂದು ಆರೋಪಿಗಳನ್ನು ಬಿಡುಗಡೆಗೊಳಿಸಿ ತೀರ್ಪು ನೀಡಿರುತ್ತಾರೆ.

. . . . . . .

ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ.ವಿ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ರವರು ವಾದಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading