ಪೆರಾಜೆ ವ್ಯಾಪ್ತಿಯ ಶಾಲೆಗಳಲ್ಲಿ ರಕ್ತದ ಗುಂಪು ಪರೀಕ್ಷೆ ಶಿಬಿರ

ಪೆರಾಜೆ, ಜೂ.24: ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆಯ ಆಯುಷ್ಮಾನ್ ಆರೋಗ್ಯ ಕೇಂದ್ರ ಪೆರಾಜೆ ವ್ಯಾಪ್ತಿಯ ಸ.ಹಿ.ಪ್ರಾ. ಶಾಲೆ ಕುಂಬಳಚೇರಿ, ಕೋಟೆ ಪೆರಾಜೆ, ಕೋಡಿ ಪೆರಾಜೆ ಹಾಗೂ ಕನ್ನಡ ಪೆರಾಜೆ ಶಾಲೆಗಳಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಪೆರಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ರಕ್ತದ ಗುಂಪು ಪರೀಕ್ಷೆ ಶಿಬಿರ ನಡೆಯಿತು.
ಶಿಬಿರಕ್ಕೆ ಅಗತ್ಯವಿದ್ದ ರಕ್ತದ ಗುಂಪು ಪರೀಕ್ಷಾ ಕಿಟ್‌ಗಳನ್ನು ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್‌ಪೆಕ್ಟರ್ ವೆಂಕಟೇಶ್ ಅವರು ಕೊಡುಗೆಯಾಗಿ ನೀಡಿದ್ದು, ಶಿಬಿರ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಶಿಬಿರದಲ್ಲಿ ಒಟ್ಟು 112 ಮಕ್ಕಳಿಗೆ ರಕ್ತದ ಗುಂಪು ಪರೀಕ್ಷೆ ನಡೆಸಲಾಯಿತು.
ಉಳಿದ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಮುಗಿದ ಬಳಿಕ ಮುಂದಿನ ದಿನಗಳಲ್ಲಿ ರಕ್ತದ ಗುಂಪು ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆಯ ಆಡಳಿತಾಧಿಕಾರಿಗಳು, ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯ ಚಿದಾನಂದ, ಆರೋಗ್ಯ ನಿರೀಕ್ಷಕರು, ಪ್ರಾಥಮಿಕ ಶಾಲಾ ತಂತ್ರಜ್ಞರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, KIOMS ಇಂಟರ್ನ್ ವೈದ್ಯರು, ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading