ಸುಳ್ಯದಲ್ಲಿ ಫ್ಯೂಶನ್ ಡ್ಯಾನ್ಸ್ ಸ್ಟುಡಿಯೋ ಮತ್ತು ರಂಗೋಲಿ ಕಾಸ್ಟ್ಯೂಮ್ಸ್ ಸ್ಥಳಾಂತರಗೊಂಡು ಶುಭಾರಂಭ

ಸುಳ್ಯದ ವಿವೇಕಾನಂದ ಸರ್ಕಲ್ ಹತ್ತಿರ ಮೆಸ್ಕಾಂ ಬಳಿಯ ಸಮೃದ್ಧಿ ಸಂಕೀರ್ಣದಲ್ಲಿ ಫ್ಯೂಶನ್ ಡ್ಯಾನ್ಸ್ ಸ್ಟುಡಿಯೋ ಮತ್ತು ರಂಗೋಲಿ ಕಾಸ್ಟ್ಯೂಮ್ಸ್ ಜೂ 18ರಂದು ಸ್ಥಳಾಂತರವಾಗಿ ಶುಭಾರಂಭಗೊಂಡಿತು.

. . . . . . . . .

ಪುರೋಹಿತ ಹೇಮಂತ್ ಆಚಾರ್ಯ ವಿಟ್ಲ ಇವರ ಮುಂದಾಳತ್ವದಲ್ಲಿ ಶ್ರೀ ಮಹಾಗಣಪತಿ ಹವನ ಹಾಗೂ ಲಕ್ಷ್ಮೀ ಪೂಜೆ ಜರುಗಿತು. ಈ ಸಂಸ್ಥೆಯ ಮುಖ್ಯಸ್ಥ ವಸಂತ ಆಚಾರ್ಯ ಕಾಯರ್ತೋಡಿಯವರ ಮಾತೃಶ್ರೀ ಪುಷ್ಪಾವತಿ ಜನಾರ್ಧನ ಕಾಯರ್ತೋಡಿಯವರು ದೀಪ ಪ್ರಜ್ವಲನೆ ಮಾಡಿದರು. ಡ್ಯಾನ್ಸ್ ಸ್ಟುಡಿಯೋ ಉದ್ಘಾಟನೆಯನ್ನು ಸುಳ್ಯ ತಾ. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸೋಮಶೇಖರ ಪೈಕ ಮಾಡಿದರು. ಕಾಸ್ಟ್ಯೂಮ್ಸ್ ಉದ್ಘಾಟನೆಯನ್ನು ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಸ್ಕೂಲ್ ನ ಸ್ಥಾಪಕರಾದ ರುಕ್ಮಯದಾಸ್ ನೆರವೇರಿಸಿದರು. ಗಾಯಕ ಕೃಷ್ಣರಾಜ್ ಕೇರ್ಪಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.  ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading