- Thursday
- June 11th, 2026
ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಎಸ್ ಪಿ ಮೋಹನರವರ ತೋಟಕ್ಕೆ ಕಳೆದ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಹಾನಿ ಮಾಡಿದೆ. ತೆಂಗು, ಅಡಿಕೆ ಹಾಗೂ ಬಾಳೆ ಕೃಷಿ ಹಾನಿ ಮಾಡಿದೆ.
ಸುಳ್ಯದ ಯುವಕನ ನೇತೃತ್ವದ ತಂಡ ಬೆಂಗಳೂರು ವಿಧಾನಸೌಧದಿಂದ ಶಬರಿಮಲೆಗೆ ಸೈಕಲ್ ಯಾತ್ರೆ ತೆರಳಿದ್ದಾರೆ. ಸುಮಾರು 850 ಕಿಲೋಮೀಟರ್ ದೂರವನ್ನು ಸೈಕಲ್ ನಲ್ಲಿ ಪ್ರಯಾಣಿಸಿದ್ದಾರೆ. ಸುಳ್ಯದ ಶಿವಪ್ರಸಾದ್ ನಾರ್ಣಕಜೆ, ಅಂಕುಶ್ ದೇವರಾಜ್ ಬೆಂಗಳೂರು, ಸುದರ್ಶನ್ ಚಿಂತಾಮಣಿ, ವಿನಯ್ ಶಾಸ್ತ್ರಿ ಬಿಡದಿ, ಪ್ರವೀಣ್ ಬೆಂಗಳೂರು, ವಿನಯ್ ಬೆಂಗಳೂರು, ಗಣೇಶ್ ಬೆಂಗಳೂರು, ಮಹೇಶ್ ಬೆಂಗಳೂರು, ವಿಷ್ಣು ಪ್ರಸಾದ್ ಬೆಂಗಳೂರು ತಂಡದಲ್ಲಿದ್ದರು.
ಬಿಜೆಪಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಸಂಘಟನಾತ್ಮಕ ಸಭೆ ಹಾಗೂ BLA-2 ಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಜೂ.09 ಮತ್ತು 10 ರಂದು ಸುಳ್ಯ ವಿಧಾನ ಸಭಾಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆಯಿತು.ಜೂ.09ರಂದು ಕೊಯಿಲ ಮಹಾಶಕ್ತಿ ಕೇಂದ್ರದ ಸಭೆಯು ಗೊಳಿತೊಟ್ಟು ಸಿದ್ದಿವಿನಾಯಕ ಸಭಾಂಗಣದಲ್ಲಿ, ಕಡಬ ಮಹಾಶಕ್ತಿ ಕೇಂದ್ರದ ಸಭೆಯ ಕೋಡಿಂಬಾಳ...
ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಹಾಗೂ ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ್ ಸಮಾಜದ ಸುಳ್ಯ ತಾಲೂಕಿನ ಏಕೈಕ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2025-26ನೇ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ(ಡಿ.ಎಂ.ಇ.ಡಿ) ಪೂರ್ಣಗೊಳಿಸಿದ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಪ್ರತಿಷ್ಠಿತ...
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ದೂರಡ್ಕದಲ್ಲಿ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್, ಮುಂಬಯಿ ಇವರು ಕೊಡಮಾಡಿದ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಉದಯಕುಮಾರ್ ರೈ ನಾಗನಕಜೆ ಇವರ ನೇತೃತ್ವದಲ್ಲಿ ವಿತರಿಸಲಾಯಿತು. ಶ್ರೀ ದುರ್ಗಾ ಸೇವಾ ಸಂಘ ಕೇನ್ಯದ ಸದಸ್ಯರಾದ ದೇವಿಪ್ರಸಾದ್ ರೈ ಕೇನ್ಯ ಈ ಕೊಡುಗೆ ಒದಗಿಸುವಲ್ಲಿ ಸಹಕಾರ ನೀಡಿದರು. ಈ ಸಂದರ್ಭ...
ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ ಸಾರಥ್ಯದಲ್ಲಿ ಜೂ.13 ಶನಿವಾರದಂದು ಬೆಳಿಗ್ಗೆ 10:30ಕ್ಕೆ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಿವೃತ್ತ ಯೋಧರಾದ ಭಾಸ್ಕರ ಕೇಮಟಿ ರವರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.99 ಫಲಿತಾಂಶ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದ ದಿ| ದಿವಾಕರ ಮುಂಡಾಜೆ ರವರ ಪುತ್ರಿ ಕು.ಆಶಿಕಾ ಮುಂಡಾಜೆ...
ರಕ್ತದಾನವು ಮಾನವೀಯತೆಯ ಶ್ರೇಷ್ಠ ಸೇವೆಗಳಲ್ಲಿ ಒಂದಾಗಿದ್ದು, ರಕ್ತದಾನ ಮಾಡಿ-ಜೀವದಾನ ನೀಡಿ, ನಿಮ್ಮ ಒಂದು ಹನಿ ರಕ್ತ ಮತ್ತೋಬ್ಬರ ಬದುಕಿಗೆ ಆಶಾಕಿರಣವಾಗಬಹುದು ಎಂಬ ಆಶಯದೊಂದಿಗೆ ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ, ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಹಾಗೂ ಸರಕಾರಿ ಆಸ್ಪತ್ರೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ...
