ಬಾಳಿಲ : ಪೋಷಕರ ಸಭೆ ಮತ್ತು ವಿಶ್ವ ಪರಿಸರ ದಿನಾಚರಣೆ

ಬಾಳಿಲ ವಿದ್ಯಾಬೋಧಿನೀ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಸರ್ವ ಪೋಷಕರ ಸಭೆ ಮತ್ತು ವಿಶ್ವ ಪರಿಸರ ದಿನಾಚರಣೆ ಪ್ರೌಢಶಾಲೆಯ ಸಭಾಂಗಣ ದಲ್ಲಿ ನಡೆಯಿತು.
ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿ (ರಿ )ಬಾಳಿಲ ಇದರ ಅಧ್ಯಕ್ಷ ಶ್ರೀ ರಾಧಾಕೃಷ್ಣ ರಾವ್ ಯು ಅಧ್ಯಕ್ಷತೆ ವಹಿಸಿದರು. ವಿದ್ಯಾಸಂಸ್ಥೆಗಳ ಸಂಚಾಲಕ ಪಿ ಜಿ ಎಸ್ ಎನ್ ಪ್ರಸಾದ್  ಶುಭಕೋರಿದರು. ವೇದಿಕೆ ಯಲ್ಲಿ ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಹರಿಣಾಕ್ಷಿ ಬರಮೇಲು, ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕಾಯಾರ ಉಪಸ್ಥಿತರಿದ್ದರು.
ಎಣ್ಮೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ ಕೆ ಪರಿಸರ ದಿನಾಚರಣೆ ಮತ್ತು ಪೋಷಕರ ಸಭೆಯ ಕುರಿತು ಮಾತನಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಗಳ ಮುಖ್ಯಶಿಕ್ಷಕ ಉದಯಕುಮಾರ್ ರೈ ಎಸ್ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಶೈಕ್ಷಣಿಕ ಮಾಹಿತಿಯನ್ನು ನೀಡಿದರು.
ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಮೋಹನ್ ಕೆ ಸಿ ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕ ಶಿವಪ್ರಸಾದ್ ಕೆ ವಂದಿಸಿದರು. ಶಿಕ್ಷಕ ಲೋಕೇಶ್ ಬೆಳ್ಳಿಗೆ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading