ಜಿಲ್ಲೆಯಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ನವೋದಯ ಶಾಲೆಗೆ ಆಯ್ಕೆ ಮಾಡಿದ ಜ್ಞಾನದೀಪ ಸಂಸ್ಥೆಯಲ್ಲಿ ನವೋದಯ ತರಗತಿಗಳು ಜೂ. 07ರಿಂದ ಆರಂಭ

ನವೋದಯ ಮತ್ತು ಮೊರಾರ್ಜಿ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಗತಿಗಳು ಜೂ.07 ರಿಂದ ಆರಂಭಗೊಳ್ಳಲಿದೆ. ಪ್ರಸ್ತುತ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯ, ಗಣಿತ ಮತ್ತು ಭಾಷಾ ವಿಷಯಗಳಿಗೆ ಸಂಬಂಧಿಸಿದ ತರಗತಿಗಳು ನಡೆಯಲಿದೆ. ಈಗಾಗಲೇ ಜ್ಞಾನದೀಪ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 223 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದು, 2025-26ನೇ ಸಾಲಿನಲ್ಲಿ ಇಲ್ಲಿ ತರಬೇತಿ ಪಡೆದ 16 ವಿದ್ಯಾರ್ಥಿಗಳು ಪ್ರಥಮ ಸುತ್ತಿನಲ್ಲಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ. ಮೊರಾರ್ಜಿ ವಸತಿ ಶಾಲಾ ಪ್ರವೇಶಕ್ಕೂ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್ ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ನವೋದಯ ಶಾಲೆಗೆ ಆಯ್ಕೆ ಮಾಡಿರುವ ಇಲ್ಲಿ 2026-27ನೇ ಸಾಲಿನಲ್ಲಿ ನವೋದಯ ಹಾಗೂ ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಸೀಮಿತ ವಿದ್ಯಾರ್ಥಿಗಳಿಗೆ ದಾಖಲಾತಿಗೆ ಅವಕಾಶವಿದ್ದು, ಬೆಳ್ಳಾರೆಯ ಕಲ್ಪವೃಕ್ಷ ಆರ್ಕೆಡ್ ಮತ್ತು ಸುಳ್ಯದ ತಾಲೂಕು ಪಂಚಾಯತ್ ಬಳಿಯ ಮಹಿಳಾ ಮಂಡಲ ಕಟ್ಟಡದಲ್ಲಿ ತರಗತಿಗಳು ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading