ವಿಶ್ವ ತಂಬಾಕು ರಹಿತ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 03-06-2026 ರಂದು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಅಗದ ತಂತ್ರ ವಿಭಾಗ, ಕಾಲೇಜಿನ ತಂಬಾಕು ನಿಯಂತ್ರಣ ಸಮಿತಿ ಹಾಗೂ ಜೆ ಸಿ ಐ ಸುಳ್ಯ ಪಯಸ್ವಿನಿಯ ಸಹಯೋಗದೊಂದಿಗೆ ಆಚರಿಸಲಾಯಿತು.

. . . . . . . . .

ತಂಬಾಕು ಸೇವನೆಯ ದುಷ್ಪರಿಣಾಮಗಳು, ಇದರಿಂದ ಉಂಟಾಗುವ ಕಾಯಿಲೆಗಳು ಹಾಗೂ ಸೇವನೆಯ ಚಟದಿಂದ ಹೊರಬರುವ ವಿಧಾನಗಳನ್ನು ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಗದ ತಂತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಯಾದ ಡಾ. ಅಪರ್ಣಾ ದಿಲೀಪ್ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾರ್ಥಿಯಾದ ಕುಮಾರಿ ಮಾಯ ಪ್ರತೀಜ್ಞಾವಿಧಿ ಭೋಧಿಸಿದರು. ಕಾರ್ಯಕ್ರಮವನ್ನು ಕು ಮೇಧಾ ಮತ್ತು ಕು. ನಿರ್ಮಿತಾ ಪ್ರಾರ್ಥಿಸಿ.
ಕು ಮಾಯ ಮತ್ತು ಕು ಶ್ರೇಯಾ ಜಿ ಎಸ್ ಕಾರ್ಯಕ್ರಮ ನಿರೂಪಿಸಿದರು.

. . . . . . .

ಮಾಹಿತಿ ಕಾರ್ಯಗಾರದ ಬಳಿಕ ದ್ವಿತೀಯ ಬಿ.ಎ.ಎಂ.ಎಸ್. ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ಆಗದ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಅವಿನಾಶ್ ಕೆ ವಿ, ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿಯಾದ ಡಾ. ಪ್ರಮೋದ್ ಪಿ ಎ, ಜೆ ಸಿ ಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೆ.ಎಫ್. ಎಂ ಲತಾಶ್ರೀ ಸುಪ್ರೀತ್ ಮೊಂಟಡ್ಕ, ಸಂಸ್ಥೆಯ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು, ಹಾಗೂ ಕಲಿಕಾ ವೈದ್ಯರುಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading