ಕಾರ್ಣಿಕದ ಕ್ಷೇತ್ರ ಕಲ್ಕುಡ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವದ ಸಂಭ್ರಮ- ಜೂ.15 ರಿಂದ 18 ರ ವರೆಗೆ ಕಲ್ಕುಡ,ಕಲ್ಲುರ್ಟಿ ಹಾಗೂ ಗುಳಿಗ ದೈವದ ಪ್ರತಿಷ್ಠೆ

ಸುಳ್ಯದ ಕಾರ್ಣಿಕ ಕ್ಷೇತ್ರವಾಗಿರುವ ಶ್ರೀ ಕಲ್ಕುಡ ದೈವಸ್ಥಾನ ನವೀಕೃತಗೊಂಡು ಸುಂದರವಾದ ಶಿಲಾಮಯ ಗುಡಿ £ರ್ಮಾವಾಗಿದೆ. ಜೂ.15 ರಿಂದ 18 ರ ವರೆಗೆ ಕಲ್ಕುಡ,ಕಲ್ಲುರ್ಟಿ ಹಾಗೂ ಗುಳಿಗ ದೈವದ ಪುನರ್ ಪ್ರತಿಷ್ಠಾ ಕಲಶೋತ್ಸವ ನಡೆಯಲಿದ್ದು, ದೈವಸ್ಥಾನದಲ್ಲಿ ಜೂನ್ 4 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದ ವಿವರ ನೀಡಿದರು.

. . . . . . . . .

ಸುಳ್ಯದ ಪುರದೊಡೆಯ ಶ್ರೀ ಚೆನ್ನಕೇಶವ ದೇವರ ರಥೋತ್ಸವದ ರಕ್ಷಕನಾಗಿ ಸುಮಾರು 300 ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕಲ್ಕುಡ-ಕಲ್ಲುರ್ಟಿ ದೈವಗಳಿಗೆ ನೂತನ ಶಿಲಾಮಯ ಗುಡಿ, ಗುಳಿಗ ದೈವಕ್ಕೆ ಕಟ್ಟೆ ನಿರ್ಮಿಸಿ ಜೂನ್ 15 ರಿಂದ 18 ರ ತನಕ ಪುನರ್ ಪ್ರತಿಷ್ಠಾ ಕಲಶೋತ್ಸವ ಕಾಯಕ್ರಮವನ್ನು ನಡೆಯಲಿದೆ ಎಂದರು.

. . . . . . .

ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ-ಗುಳಿಗ ದೈವಗಳು ಇದ್ದು, ಸಂಪೂರ್ಣವಾಗಿ ನಶಿಸಿ ಹೋಗಿದ್ದ ದೈವಸ್ಥಾನವನ್ನು 1985ರ ಅಂತ್ಯದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಸ್ಥಳದ ಮಾಲೀಕರಾದ ಶ್ರೀ ರಾಮಕೃಷ್ಣ ರಾವ್ ಪೆರುವಾಜೆ ಇವರು ಕಲ್ಕುಡ ದೈವಸ್ಥಾನಕ್ಕೆ 0.11ಎಕ್ರೆ ಮತ್ತು ಮಿತ್ತೂರ್ ಕಟ್ಟೆಗೆ 0.04 ಎಕ್ರೆ ಸ್ಥಳವನ್ನು ದಾನವಾಗಿ £Ãಡಿ ಕಲ್ಕುಡ ದೈವಸ್ಥಾನದ ಟ್ರಸ್ಟ್ಗೆ £Ãಡಿದರು. ಆರ್. ಉಮೇಶ್ ವಾಗ್ಲೆ, ಶ್ರೀ ಪುಟ್ಟಪ್ಪ ಜೋಷಿಯವರ ನೇತೃತ್ವದಲ್ಲಿ ಧರ್ಮದರ್ಶಿ ಮಂಡಳಿ ರಚಿಸಿ ಅದರಲ್ಲಿ ಆರ್.ಉಮೇಶ್ ವಾಗ್ಲೆ, ಪುಟ್ಟಪ್ಪ ಜೋಷಿ, ಪಿ. ನಾರಾಯಣ ಮಡಿವಾಳ ಬೂಡುಪನ್ನೆ, ಬಿ. ಭಾಸ್ಕರ ಐಡಿಯಲ್, ರಾಮಕೃಷ್ಣ ರಾವ್ ಪೆರುವಾಜೆ, ಪಿ. ಕೆ.ಉಮೇಶ್ ಹಾಗೂ ಇತರ ಸಮಾನ ಮನಸ್ಕರು ಒಟ್ಟು ಸೇರಿ 1986 ಜೂನ್ 19ರಂದು ದೇಲಂಪಾಡಿ ವೇದಮೂರ್ತಿ ಬಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ತುದಿಯಡ್ಕ ವಿಷ್ಣಯ್ಯನವರ ಉಪಸ್ಥಿತಿಯಲ್ಲಿ ಸಾರ್ವಜ£ಕರ ಸಹಕಾರದೊಂದಿಗೆ ಪುನರ್ ನಿರ್ಮಾಣಗೊಂಡು ಶ್ರೀ ಕಲ್ಕುಡ ದೈವವನ್ನು ಪುನರ್ ಪ್ರತಿಷ್ಠಾಪನೆಗೊಂಡಿತು. ಅಂದಿ£Aದ ದೈವಗಳಿಗೆ ನೇಮೋತ್ಸವ, ತಂಬಿಲ ಸೇವೆ ಹಾಗೂ ಸಂಕ್ರಮಣ ಪೂಜೆಗಳನ್ನು ನಿಯಮಿತವಾಗಿ ನಡೆಸಿಕೊಂಡು ಕ್ಷೇತ್ರವನ್ನು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆದು ಬಂದಿದೆ.

ಇತ್ತೀಚೆಗೆ ಸ್ಥಳದ ಮತ್ತು ದೈವಗಳ ಬಗ್ಗೆ ಪ್ರಶ್ನಾಚಿಂತನೆ ಇಟ್ಟಾಗ ದೈವಗಳಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಬೇಕೆಂಬ ಚಿಂತನೆ ಮೂಡಿ ಬಂದು ಆ ಪ್ರಕಾರ ತಂತ್ರಿಗಳಾದ ದೇಲಂಪಾಡಿಯ ಬ್ರಹ್ಮಶ್ರೀ ವೇ| ಮೂ| ಗಣೇಶ ತಂತ್ರಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್‌ರವರ ನೇತೃತ್ವದಲ್ಲಿ ಶ್ರೀ ದೈವಗಳಿಗೆ ಶಿಲಾಮಯ ಗುಡಿ ಮತ್ತು ಗುಳಿಗ ದೈವಕ್ಕೆ ನೂತನ ಕಟ್ಟೆಯನ್ನು ನಿರ್ಮಿಸಲಾಗಿರುತ್ತದೆ. ಈ ಎಲ್ಲಾ ಜೀರ್ಣೋದ್ದಾರದ ಕಾಮಗಾರಿಗಳು ಶಂಕು ಸ್ಥಾಪನೆಯಿಂದ ಪ್ರಾರಂಭಿಸಿ ಕೇವಲ 64 ದಿನಗಳೊಳಗೆ ಪೂರೈಸಿಕೊಂಡು ಇದೀಗ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ತಯಾರಾಗಿರುತ್ತೇವೆ. ಜೂನ್ ತಿಂಗಳ 15 ರಂದು ಪೂರ್ವಾಹ್ನ ಗಂಟೆ 9.00ರಿಂದ ದಶಮ ಸ್ಕಂದ ಪಾರಾಯಣವೂ ನಾರಾಯಣ ಮೂರ್ತಿ ಕಾಂಞಗಾಡ್ ಇವರಿಂದ ಪ್ರಾರಂಭವಾಗುತ್ತದೆ. ಸಂಜೆ ಗಂಟೆ 5.00ಕ್ಕೆ ತಂತ್ರಿಗಳ ಆಗಮನವಾಗುತ್ತದೆ. ತದನಂತರ ವೈದಿಕ ಕಾಠ್ಯಕ್ರಮಗಳು ಪ್ರಾರಂಭಿಸಿ ರಾತ್ರಿ ಗಂಟೆ 9.00ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 16 ರಂದು ಬೆಳಿಗ್ಗೆ 7.00ರಿಂದ ಗಣಪತಿ ಹೋಮದಿಂದ ವೈದಿಕ ಕಾಠ್ಯಕ್ರಮಗಳು ಪ್ರಾರಂಭಗೊAಡು ತದನಂತರ ಭಾಗವತದಶಮ ಸ್ಕಂದ ಪಾರಾಯಣ ಮುಂದುವರೆದು ಪೂರ್ವಾಹ್ನ ಗಂಟೆ 10.00ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 17 ರ ಸಂಜೆ ಗಂಟೆ 4.30ರಿಂದ ಭಜನೆಯಿಂದ ಪ್ರಾರಂಭಗೊAಡು ಗಂಟೆ 6.00ರ ನಂತರ ವಿವಿಧ ಹೋಮ ಹವನಗಳು ನಡೆಯಲಿದೆ. ಜೂನ್ 18 ರಂದು ವಿಶೇಷವಾಗಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ದಿನ. ಪೂ.ಗಂಟೆ 8.00ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಗಂಟೆ 8.08 ರಿಂದ 9.06ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ
ಶ್ರೀ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳಿಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆದು ಬರಲಿದೆ. ತದನಂತರ ದೈವಗಳಿಗೆ ತಂಬಿಲ, ಮಹಾಪೂಜೆ, £ತ್ಯ ನೈಮಿತ್ಯಾದಿಗಳ ನಿರ್ಣಯ ಆಗಿ ಪ್ರಸಾದ ವಿತರಣೆಯಾಗುತ್ತದೆ.
ಪೂ. ಗಂಟೆ 10.30ರಿಂದ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣ ಕಾಮತ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾ ಸ್ವಾಮೀಜಿಗಳವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇ| ಮೂ| ದೇಲಂಪಾಡಿ ಗಣೇಶ ತಂತ್ರಿಯವರು ಗೌರವ ಉಪಸ್ಥಿತಿಯಲ್ಲಿದ್ದು, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷರಾದ ಡಾ| ಕೆ. ವಿ. ಚಿದಾನಂದ, ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇದರ ಅನುವಂಶಿಕ ಆಡಳಿತ ಮೊಕೇಸರರಾದ ಡಾ| ಹರಪ್ರಸಾದ್ ತುದಿಯಡ್ಕ, ಸುಳ್ಯದ ಮಾನ್ಯ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಪಿ. ಕೆ. ಉಮೇಶರವರು ಉಪಸ್ಥಿತರಿರುತ್ತಾರೆ ಎಂದರು.

ಶಿಲೆ ಕಲ್ಲಿನಗುಡಿ ನಿರ್ಮಾಣ, ಮರದ ಮಾಡಿನ ಕೆಲಸ, ತಾಮ್ರದ ಹೊದಿಕೆ, ಗ್ರಾನೈಟ್ ಕಲ್ಲು ಹಾಸು, ಗುಳಿಗನ ಕಟ್ಟೆ, ಅಯ್ಯಂಗಾಯಕಟ್ಟೆ, ಹೀಗೆ ರೂ.75,00,000 ಲಕ್ಷಗಳ ಕಾಮಗಾರಿಗಳು ಆಗಿವೆ. ಇದರಲ್ಲಿ ಗುಳಿಗನ ಕಟ್ಟೆಯ ದಾನಿಗಳಾಗಿ ಸುಳ್ಯ ಠಾಣೆಯ ಆರಕ್ಷಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಇದನ್ನು ರೂ. 1,80,000 ಪ್ರಾಯೋಜಿಸಿದ್ದಾರೆ. ಅಯ್ಯಂಗಾಯ ಕಟ್ಟೆಯ ವೆಚ್ಚ ರೂ.30,000ವನ್ನು ಕೈಲಾಶ್ ಶೆಣೈ ಮತ್ತು ಮನೆಯವರು ಪ್ರಾಯೋಜಿಸಿದ್ದಾರೆ.

ಹೆಚ್ಚಿನ ಕಾಮಗಾರಿಗಳಾಗಿ ದೈವಸ್ಥಾನದಲ್ಲಿ ಪ್ರತಿದಿನ ಸಂಗ್ರಹವಾಗುವ ಹರಿಕೆ, ಉಳಿಕೆ ಮಾಡಿದ ಹಣ ಮತ್ತು ಜೀರ್ಣೋದ್ಧಾರಕ್ಕಾಗಿ ಭಕ್ತಾಧಿಗಳು £Ãಡುವ ದೇಣಿಗೆಯಲ್ಲಿ ಕಾಮಗಾರಿಗಳನ್ನು ಮಾಡಿದ್ದು, ಶಿಲಾನ್ಯಾಸದಿಂದ ಪ್ರಾರಂಭಿಸಿ ಕೇವಲ 64 ದಿನಗಳಲ್ಲಿ ಕೆಲಸ ಕಾರಗಳು ಶ್ರೀ ದೈವಗಳ ಕೃಪೆಯಿಂದ ನಡೆದುಬಂದಿದೆ. ಈಗಾಗಲೇ ಸುಳ್ಯ ನಗರದ ಪ್ರತಿ ವಾರ್ಡ್ ಮಟ್ಟದಲ್ಲಿಯೂ ಜೀರ್ಣೋದ್ಧಾರಕ್ಕೆ ಸಂಬAಧಿಸಿದAತೆ ಸಮಿತಿಗಳನ್ನು ಮಾಡಿದ್ದು, ಅದರ ಮೂಲಕ ಪ್ರತಿ ಮನೆಗಳಿಗೆ ಆಮಂತ್ರಣ ನೀಡಿ ಅವರು ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ಶ್ರೀ ದೈವಗಳ ಪಾಣಿಪೀಠ ನಿರ್ಮಾಣಕ್ಕಾಗಿ ಶ್ರೀಮತಿ ಮುಕ್ತ ಮತ್ತು ವಿಶಾಲಾಕ್ಷ ಶೇಟ್ ಅಂಬಟೆಡ್ಕ ಮನೆ ಸುಳ್ಯ 1ಕೆ.ಜಿ ಬೆಳ್ಳಿಯನ್ನು ದಾನರೂಪದಲ್ಲಿ ನೀಡಿರುತ್ತಾರೆ.

ಜೀರ್ಣೋದ್ಧಾರದ ಕೆಲಸ ಕಾವ್ಯಗಳಲ್ಲಿ ಪ್ರಾರಂಭದಿAದಲೂ ಈ ತನಕ ಸಂಜೆ ಮತ್ತು ರಾತ್ರಿ ಹೊತ್ತಿನಲ್ಲಿ ಅನೇಕ ಹಿಂದೂ ಯುವಕರ ಸಂಘಟನೆಗಳೂ, ಸ್ಥಳಿಯ ಭಕ್ತಾಧಿಗಳೂ ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದಾರೆ. 4 ದಿನಗಳಲ್ಲಿ ನಡೆಯುವ ಈ ಧಾರ್ಮಿಕ ಕಾಠ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಹಸಿರು ಕಾಣಿಕೆ £Ãಡುವವರಿಗೆ ಅವಕಾಶವಿದ್ದು, ಈಗಾಗಲೇ ವಾರ್ಡ್ ಮಟ್ಟದಲ್ಲಿಯೂ ಮತ್ತು ಸುಳ್ಯ ನಗರದ ಹಿಂದೂ ವರ್ತಕರಲ್ಲಿಯೂ ಮನವಿ ಮಾಡಿಕೊಂಡಿರುತ್ತೇವೆ. ಜೂನ್ 18ರಂದು ದೈವಗಳಿಗೆ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಎಲ್ಲರಿಗೂ ಅನ್ನಸಂತರ್ಪಣೆ ಇರುತ್ತದೆ.

ವಾಹನ ನಿಲುಗಡೆಗೆ ದೈವಸ್ಥಾನದ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗ ಮತ್ತು ಗಾಂಧಿನಗರ ಶಾಲಾ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕಾಮತ್, ಆಡಳಿತ ಧರ್ಮದರ್ಶಿ ಪಿ. ಕೆ. ಉಮೇಶ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಪ್ರಭು, ಜೀರ್ಣೋದ್ಧಾರ ಸಮಿತಿ ದಿನೇಶ್ ಮಡಪ್ಪಾಡಿ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಅವಿನಾಶ್ ಕುರುಂಜಿ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading