ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197
ದಿನಾಂಕ:03-06-2026 ಬುಧವಾರ

*01,🐏ಮೇಷರಾಶಿ🐏*
📖,ಬೆಲೆಬಾಳುವ ವಸ್ತ್ರಆಭರಣಗಳನ್ನು ಇಂದು ನೀವು ಖರೀದಿಸಬಹುದು. ನಿರುದ್ಯೋಗ ಪ್ರಯತ್ನಗಳಲ್ಲಿ ಧನಾತ್ಮಕಫಲಿತಾಂಶಗಳಿರುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ,
ಗಮನಿಸಿ:-ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ,
ಪರಿಹಾರ:-ನವಗ್ರಹ ಮಂತ್ರ ಜಪಿಸಿ,

. . . . . . . . .

*02,🐂ವೃಷಭರಾಶಿ🐂*
📖,ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ.ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ.ದೀರ್ಘಾವಧಿಯ ಸಾಲ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ,
ಗಮನಿಸಿ:-ಮನೆಯಲ್ಲಿ ಶುಭಕಾರ್ಯಗಳ ಪ್ರಸ್ಥಾಪವಿರುತ್ತದೆ,
ಪರಿಹಾರ:-ಶ್ರೀ ಗಣಪತಿ ದೇವರಿಗೆ ಗರಿಕೆ ನೀಡಿ,

. . . . . . .

*03,👥ಮಿಥುನ ರಾಶಿ👥*
📖,ಈ ದಿನ ಯಾವುದಾದರು ಒಂದು ಕ್ಷೇತ್ರ ದರ್ಶನ ಮಾಡುವಿರಿ,ಕುಟುಂಬದ ವಿಚಾರಗಳಿಗೆ ಸಮಯವನ್ನು ಕೊಡುತ್ತೀರಾ ಹಾಗು ಕುಟುಂಬದ ವಿಚಾರಗಳಿಗೆ ಹಣ ಖರ್ಚು ಮಾಡುತ್ತೀರಾ, ಕೆಲಸದ ಒತ್ತಡದಿಂದ ಮೈಕೈ ನೋವು ಬರುವ ಸಾಧ್ಯತೆ ಇದೆ,
ಗಮನಿಸಿ:- ಇನ್ನೊಬ್ಬರ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸಬೇಡಿ,
ಪರಿಹಾರ:-ದುರ್ಗಾ ದೇವಿಯ ಪ್ರಾರ್ಥನೆ ಮಾಡಿ, 

*04,🦀ಕಟಕ ರಾಶಿ🦀*
📖,ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ, ಸಹೋದರರೊಂದಿಗಿನ ಸ್ಥಿರಾಸ್ತಿ ಸಮಸ್ಯೆಗಳು ದೂರವಾಗುತ್ತವೆ.ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮೀಯ ಸ್ನೇಹಿತರಿಂದ ಸಲಹೆಗಳು ದೊರೆಯುತ್ತವೆ. ಹೊಸ ಆಹ್ವಾನಗಳುಬರುತ್ತವೆ,
ಗಮನಿಸಿ:-ವ್ಯಾಪಾರ ವಿಸ್ತರಣೆ ಕಾರ್ಯಗಳನ್ನುವೇಗಗೊಳಿಸುತ್ತೀರಿ,
ಪರಿಹಾರ:-ಶ್ರೀ ಹನುಮಾನ್ ಚಾಲೀಸಾ ಪಠಿಸಿ,

*05,🦁ಸಿಂಹ ರಾಶಿ🦁*
📖,ಈ ದಿನ ನಿಮಗೆ ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ ನಿಮ್ಮ ಸಕಾರಾತ್ಮಕ ಚಿಂತನೆಯು ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಮಕ್ಕಳ ಅಧ್ಯಯನ ಪರೀಕ್ಷೆ ಮತ್ತು ಸ್ಪರ್ಧೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮ್ಮ ಮುಂದಿನ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ. ಕಚೇರಿಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ,
ಗಮನಿಸಿ:- ಈ ದಿನ ವಿನೋದದಿಂದಸಮಯವನ್ನು ಕಳೆಯಬಹುದು,
ಪರಿಹಾರ:-ತಂದೆ ತಾಯಿಯ ಆಶೀರ್ವಾದವನ್ನು ಪಡೆಯಿರಿ,

*06,👩‍🦳ಕನ್ಯಾ ರಾಶಿ👩‍🦳*
📖,ಇಂದು ನಿಮಗೆ ಸ್ವಲ್ಪ ಚಿಂತೆಯ ದಿನವಾಗಲಿದೆ. ನಿಮ್ಮ ಶತ್ರುಗಳು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ತಡೆಯಲುಪ್ರಯತ್ನಿಸಬಹುದು.ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ,ಆದರೆ ನೀವು ಕೆಲವು ಹೂಡಿಕೆಗೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನೀವು ಧಾರ್ಮಿಕಪ್ರವಾಸಕ್ಕೆಹೋಗಲು. ತಯಾರಿ ನಡೆಸುತ್ತಿದ್ದರೆ, ಅದು ಒಳ್ಳೆಯದು,
ಗಮನಿಸಿ:-ಹಣಕ್ಕೆಸಂಬಂಧಿಸಿದ. ಸಮಸ್ಯೆಗಳ ಬರಬಹುದು,
ಪರಿಹಾರ:-ಶ್ರೀ ಲಲಿತಾ ಸಹಸ್ರನಾಮ ಪಠಿಸಿ, 

*07,⚖️ತುಲಾ ರಾಶಿ⚖️*
📖,ವ್ಯವಹಾರಕ್ಕೆಸಂಬಂಧಿಸಿದಂತೆ ಜನರೊಂದಿಗೆ ಸಂಪರ್ಕ ಬೆಳೆಸುವುದು ಉತ್ತಮ. ನೀವು ಇಂದು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಗಮನಿಸಿ, ಪಾಲುದಾರಿಕೆ ವ್ಯವಹಾರ ಉದ್ಯೋಗದಲ್ಲಿ ಅಭಿವೃದ್ಧಿ ತೋರಿದರು ತಾಳ್ಮೆಯಿಂದ ವ್ಯವಹರಿಸಿ, ಗಮನಿಸಿ:-ದೂರ ಪ್ರಯಾಣ ಸಂಭವ,
ಪರಿಹಾರ:-ಆಂಜನೇಯ ಸ್ವಾಮಿಯನ್ನು ಪೂಜಿಸಿ,

*08,🦂ವೃಶ್ಚಿಕ ರಾಶಿ🦂*
📖,ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು ಅದರಲ್ಲಿ ಜಯವನ್ನು ಸಂಪಾದಿಸುವಿರಿ, ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ ಅವರನ್ನು ನಿರ್ಲಕ್ಷಿಸಿ,
ಗಮನಿಸಿ:- ಇಂದು ಸಾಮಾನ್ಯಕ್ಕಿಂತ ಸ್ವಲ್ಪ ಮುಂಚಿತವಾಗಿ ಮಲಗಲು ಪ್ರಯತ್ನಿಸಿ,
ಪರಿಹಾರ:-ಶ್ರೀ ಕಾಲಭೈರವ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ,

*09,🏹ಧನುಸ್ಸು ರಾಶಿ🏹*
📖,ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಆರೋಗ್ಯ ಸಮಸ್ಯೆಗಳು ಸ್ವಲ್ಪ ನೋವುಂಟು ಮಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆರ್ಥಿಕ ಪರಿಸ್ಥಿತಿ ನಿಧಾನವಾಗುತ್ತದೆ. ಹಠಾತ್ ಪ್ರಯಾಣದಿಂದ ದೈಹಿಕ ಶ್ರಮ ಉಂಟಾಗುತ್ತದೆ.ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ,
ಗಮನಿಸಿ:-ವ್ಯಾಪಾರಸ್ಥರಿಗೆ ಇಂದು ಶುಭ ದಿನವಾಗಲಿದೆ,
ಪರಿಹಾರ:- ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ,

*10,🐊ಮಕರ ರಾಶಿ🐊*
📖,ಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ. ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳುದೊರೆಯುತ್ತವೆ, ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ,
ಗಮನಿಸಿ:-ಗೌರವ ಪ್ರತಿಷ್ಟೆಗಳು ಹೆಚ್ಚಾಗುತ್ತದೆ,
ಪರಿಹಾರ:-ಶ್ರೀ ದಕ್ಷಿಣಾಮೂರ್ತಿಯನ್ನು ಭಕ್ತಿಯಿಂದ ಪ್ರಾರ್ಥಿಸಿ,

*11,⚱️ಕುಂಭ ರಾಶಿ⚱️*
📖,ಇಂದು ಧರ್ಮದ ಕಡೆಗೆ ಒಲವು ತೋರಿಸುತ್ತೀರಿ.ಗೃಹ ಸಂತೋಷ ಹೆಚ್ಚಲಿದೆ. ಅನಾರೋಗ್ಯದ ಸಮಸ್ಯೆಗಳು ಬಾಧಿಸುತ್ತವೆ.ಪ್ರಮುಖ ಕಾರ್ಯಗಳನ್ನು, ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿವಿಶೇಷವಾಗಿ ಭಾಗವಹಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ,
ಗಮನಿಸಿ:-ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಊಟಾಗುತ್ತದೆ,
ಪರಿಹಾರ:-ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ,

*12,🐬ಮೀನ ರಾಶಿ🐬*
📖,ಹಣಕಾಸಿನ ಪರಿಸ್ಥಿತಿ ಅಸ್ತವ್ಯಸ್ತವಾಗಿರುತ್ತದೆ. ಸಹೋದರರೊಂದಿಗೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೊಂಡ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಗಮನಿಸಿ:-ಉದ್ಯೋಗದಲ್ಲಿ ಅಧಿಕಾರಿಗಳ ಒತ್ತಡ ಹೆಚ್ಚಾಗುತ್ತದೆ,
ಪರಿಹಾರ:-ನಿಮ್ಮ ಕುಲದೇವರ ದರ್ಶನ ಮಾಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading