ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪೋಡಿಯಂ(ಸ್ಪೀಚ್ ಸ್ಟ್ಯಾಂಡ್) ಕೊಡುಗೆ

ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪೋಡಿಯಮ್(ಸ್ಪೀಚ್ ಸ್ಟ್ಯಾಂಡ್) ಅನ್ನು ಶಾಲಾ ಪ್ರಾರಂಭೋತ್ಸವದ ದಿನ ಸೋಮವಾರದಂದು ಹಸ್ತಾಂತರಿಸಲಾಯಿತು. ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಎ ತಿಲಕ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ನಿರ್ದೇಶಕಿ ಗಾಯತ್ರಿ ತಿಲಕ್ ಉಪಸ್ಥಿತರಿದ್ದರು. 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಸಹಕಾರಿಗಳಾದ ಜಾಕೆ ಮಾಧವ ಗೌಡ ಅವರು ಮಾತನಾಡುತ್ತಾ “ದಾನಗಳಲ್ಲಿ ಬಹಳಷ್ಟು ದಾನಗಳಿವೆ , ಅದರಲ್ಲಿ ಇಂತಹ ಪೋಡಿಯಂ ಅನ್ನು ಶಾಲಾ ಮಕ್ಕಳ ಉಪಯೋಗಕ್ಕಾಗಿ ಹಾಗೂ ಶಾಲೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳ ಉಪಯೋಗಕ್ಕಾಗಿ ಕೊಡುಗೆಯಾಗಿ ನೀಡುತ್ತಿರುವುದು ದೊಡ್ಡ ಕೊಡುಗೆಯಾಗಿದೆ. ಇಲಾಖೆಯಿಂದ ನಾವು ಅಗತ್ಯವುಳ್ಳ ಎಲ್ಲವನ್ನು ಬಯಸಿದರೂ ಸಿಗದಿದ್ದಾಗ ದಾನಿಗಳಿಂದ ಇದು ಸಾಧ್ಯವಾಗುತ್ತದೆ” ಎಂದರು. 
ಡಾ. ತಿಲಕ್ ಎ.ಎ ಅವರು ಮಾತನಾಡಿ “ನಿವೃತ್ತಿಯ ನಂತರ ನಮಗೆ ಸಿಗುವ ಪಿಂಚಣಿಯಲ್ಲಿ ಒಂದಂಶವನ್ನು ನಾವು ದಾನಕ್ಕಾಗಿ ನೀಡಿದಾಗ ಅದು ಎಷ್ಟೋ ಜನರಿಗೆ ಉಪಯೋಗವಾಗುತ್ತದೆ. ಸಮಾಜದಲ್ಲಿರುವ ಅಶಕ್ತರಿಗೆ, ತೀರ ಬಡತನದಲ್ಲಿರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ತೀರ ಅನಾರೋಗ್ಯದಿಂದ ಇರುವ ವ್ಯಕ್ತಿಗಳಿಗೆ ನಮ್ಮ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ಸದಾ ನೆರವನ್ನು ನೀಡುತ್ತಾ ಬಂದಿದೆ” ಎಂದರು. 
ಗಾಯತ್ರಿ ತಿಲಕ್ ಅವರು ಮಾತನಾಡಿ “ಶತಮಾನೋತ್ಸವ ಕಂಡ ಶಾಲೆಯ ಮಕ್ಕಳ ಉಪಯೋಗಕ್ಕಾಗಿ ನಾವು ಕೊಡುಗೆಯಾಗಿ ನೀಡುತ್ತಿರುವುದು ನಮಗೆ ಸಂತಸ ತಂದಿದೆ” ಎಂದರು. 
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಅಧ್ಯಕ್ಷ ಲಿಗೋದರ ಆಚಾರ್ಯ ಉಪಸ್ಥಿತರಿದ್ದು, ಶುಭ ಹಾರೈಸಿದರು. 
ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ.ಟಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ಪೋಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading