Ad Widget

ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಗ್ರಾ.ಪಂ ವತಿಯಿಂದ ದುರಸ್ಥಿ

ಬೆಳ್ಳಾರೆ ಸರಕಾರಿ ಆಸ್ಪತ್ರೆ ಹೋಗುವ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದ್ದು ಇಂದು ಪಂಚಾಯತ್ ವತಿಯಿಂದ ದುರಸ್ಥಿ ಕಾರ್ಯ ನಡೆಯಿತು.ಹಲವು ಸಮಯದಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಕೆಸರುಮಯವಾಗಿತ್ತು. ವಾಹನ ಸವಾರರು ಕಷ್ಟ ಪಟ್ಟು ಈ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರು.ಇಂದು ರಸ್ತೆಗೆ ಜೆಸಿಬಿ ಮುಖಾಂತರ ಚರಲ್ ಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ಥಿಪಡಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ...

ಅಮರ ಸಂಘಟನಾ ಸಮಿತಿ ವತಿಯಿಂದ ಹಾಸನಡ್ಕ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಳ್ಯ : ನವೆಂಬರ್ 26 ರಂದು ಅಮರ ಸಂಘಟನಾ ಸಮಿತಿ(ರಿ.) ಸುಳ್ಯ ಇದರ ವತಿಯಿಂದ ಹಾಸನಡ್ಕ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದೀರ್ ದೇವ, ಉಪಾಧ್ಯಕ್ಷರು ಅಮರ ಸಂಘಟನಾ ಸಮಿತಿ ಸುಳ್ಯ ಇವರು ವಹಿಸಿದ್ದರು ತಿಮ್ಮಪ್ಪ ಗೌಡ ಕೊಂಡೆಬಾಯಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅಮರಮಡ್ನೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ...
Ad Widget

ಕಂದ್ರಪ್ಪಾಡಿ :  ಅಮೃತಸರೋವರದ ಬಳಿ ಸಂವಿಧಾನ ದಿನಾಚರಣೆ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಮೃತ ಸರೋವರದ ಬಳಿ ಸಂವಿಧಾನ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಹಾಗೂ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಗ್ರಾಮ ಪಂಚಾಯತ್ ಸದಸ್ಯರಾದ ದುರ್ಗಾದಾಸ್ ಮೆತಡ್ಕ ಪ್ರಶಾಂತ್ ಮೆದು, ಭವಾನಿಶಂಕರ ಮುಂಡೋಡಿ, ಸುಲೋಚನಾ ದೇವ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸ್ಥಳೀಯರಾದ ಬಾಲಕೃಷ್ಣ ಮಾಸ್ತರ್ ಮತ್ತು...

ಚಂಪಾ ಷಷ್ಠಿ ಬ್ರಹ್ಮರಥೋತ್ಸವ ದಿನ 231 ಭಕ್ತರಿಂದ ಎಡೆ ಸ್ನಾನ ಸೇವೆ

ಸುಬ್ರಹ್ಮಣ್ಯ ನ.26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ  ಬ್ರಹ್ಮರಥೋತ್ಸವದ ದಿನದಂದು 231 ಭಕ್ತಾದಿಗಳು ಅಂಗಣದಲ್ಲಿ ಎಡೆ ಸ್ನಾನ ಸೇವೆಯನ್ನು ಸಲ್ಲಿಸಿದರು.ವಾರ್ಷಿಕ ಜಾತ್ರೆಯ ಮೂರು ದಿನಗಳಲ್ಲಿ ನಡೆಯುವ ಸ್ಥಾನದಲ್ಲಿ ಸುಮಾರು 600ಕ್ಕೂ ಮಿಕ್ಕಿ ಹರಕೆ ಹೊತ್ತು  ಭಕ್ತಾದಿಗಳು ಎಡೆಸ್ನಾನ ಸೇವೆ ಸಲ್ಲಿಸಿದರು. ಮಧ್ಯಾಹ್ನ ಶ್ರೀ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ದೇವಳದ ಅಂಗಣದ ಸುತ್ತಲು ಹಾಕಿದ...

ಸಂವಿಧಾನ ದಿನ – ನವೆಂಬರ್ 26 : ಡಾ| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ನವೆಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿವಸ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತದೆ. 1949ನೇ ನವೆಂಬರ್ 26 ರಂದು ಭಾರತ ಸರಕಾರದ ಸಂವಿಧಾನ ಸಮಿತಿ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ಅನುಮೋದಿಸಿತ್ತು. ಇದರ ಸವಿನೆನಪಿಗಾಗಿ ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ. ಆದರೆ ನಮ್ಮ ಸಂವಿಧಾನ ಜನವರಿ 26,...

ಪದ್ಮನಾಭ ಗೌಡ ಮುಂಡೋಡಿ ಮನೆ 

ದೇವಚಳ್ಳ ಗ್ರಾಮದ ಮುಂಡೋಡಿ ಮನೆ  ಪದ್ಮನಾಭ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 25 ರಂದು ನಿಧನರಾದರು. ಅವರಿಗೆ 73 ವರುಷ ವಯಸ್ಸಾಗಿತ್ತು. ಅವರು ಪ್ರಸಿದ್ಧ ಮುಂಡೋಡಿ ತರವಾಡು ಮನೆತನದ ದೈವ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಪ್ರೇಮ, ಪುತ್ರ ಪಸನ್ನ ಮುಂಡೋಡಿ, ಪುತ್ರಿಯರಾದ ಶ್ರೀಮತಿ ಪ್ರತಿಭಾ, ಪ್ರತೀಕ್ಷಾ ಮುಂಡೋಡಿ, ಸೊಸೆ ಶ್ರಿಮತಿ ಭವ್ಯಶ್ರಿ ಪ್ರಸನ್ನ,...

ನ.27 ರಂದು ಬೆಳ್ಳಾರೆಯಲ್ಲಿ ದಕ್ಷ ಜ್ಯೂಸ್ ಸೆಂಟರ್ ಮತ್ತು ಜನರಲ್ ಸ್ಟೋರ್ ಶುಭಾರಂಭ

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಸುನಿಲ್ ಕುಮಾರ್ ಆಲಂಕಾರು ಮಾಲಕತ್ವದ ದಕ್ಷ ಜ್ಯೂಸ್ ಸೆಂಟರ್ ಮತ್ತು ಜನರಲ್ ಸ್ಟೋರ್ ನ.27ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ರೀತಿಯ ಲೈವ್ ಜ್ಯೂಸ್ ಐಟಂಗಳು ಮತ್ತು ದಿನಸಿ ವಸ್ತುಗಳು ದೊರೆಯಲಿವೆ ಎಂದು ಮಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

ಕುಕ್ಕೆ ಸುಬ್ರಹ್ಮಣ್ಯ : ಸ್ವಯಂ ಸೇವಕರಾಗಿ ಭಾಗವಹಿಸಿದ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸುಬ್ರಹ್ಮಣ್ಯ ಒಕ್ಕೂಟದ ಸದಸ್ಯರು

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪಂಚಮಿ ದಿನವಾದ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ಒಕ್ಕೂಟದ ಸದಸ್ಯರು ಸ್ವಯಂಸೇವಕರಾಗಿ ಭಾಗವಹಿಸಿದರು.

ಮರಕತ : ಡಾ.ವಿರೇಂದ್ರ ಹೆಗ್ಗಡೆಯರ 78ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ  ವಿಶೇಷ ಪೂಜೆ

ನಾಲ್ಕೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ.) ಗುತ್ತಿಗಾರು ವಲಯದ ನಾಲ್ಕೂರು ಒಕ್ಕೂಟಗಳ ವಾರ್ಷಿಕೋತ್ಸವ ಹಾಗೂ ಡಾ.ವಿರೇಂದ್ರ ಹೆಗ್ಗಡೆ ಅವರ 78ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮೂಲಕ ಮನೆ ಮನೆಗಳಲ್ಲಿ ಆರ್ಥಿಕ,ಸಾಮಾಜಿಕ, ಸೈಕ್ಷಣಿಕ, ಅಭಿವೃದ್ಧಿಗೆ ಕಳೆದ 20...

ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಗೆ ಕೃಷಿ ಮೇಳದ ಮೆರುಗು

“ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ ಪ್ರಯುಕ್ತ ವಿಶೇಷ ಕೃಷಿ ಮೇಳ ಆಯೋಜಿಸಲಾಗಿದ್ದು ಕೃಷಿ ಮೇಳದಲ್ಲಿ ಕೃಷಿ ಉಪಯೋಗಿ ಸಲಕರಣೆಗಳು, ಸಾವಯುವ ರಸಗೊಬ್ಬರಗಳು ವಿವಿಧ ಜಾತಿಯ ವಿವಿಧ ಹಣ್ಣಿನ ಗಿಡಗಳು ಹಾಗೂ ಇನ್ನಿತರ ತರಕಾರಿ ಬೀಜಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಸದ್ಯ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗದ ಪರಿಹಾರ  ಮಾಹಿತಿಯ ಮಳಿಗೆ ಜೊತೆಗೆ ಕೃಷಿ, ತೋಟಗಾರಿಗೆ, ಪಶುವೈದ್ಯಕೀಯ...
Loading posts...

All posts loaded

No more posts

error: Content is protected !!