Ad Widget

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸುಳ್ಯದ ಮೆಸ್ಕಾಂ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಎ.ಇ.ಇ ಹರೀಶ್ ನಾಯ್ಕ್, ಜೆ.ಇ ಉಷಾ, ಜೆ.ಇ ದಿವ್ಯ, ಮೇಲ್ವಿಚಾರಕರಾದ ಧರ್ಮಪಾಲ ಕೆ, ಜಯಪ್ರಕಾಶ್ ಕೆ.ರಫೀಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆರಂತೋಡು ರಬ್ಬರ್  ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಪುನರಾಯ್ಕೆ

ಆರಂತೋಡು ರಬ್ಬರ್  ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಅಡ್ತಲೆ ಪುನರಾಯ್ಕೆಗೊಂಡಿದ್ದಾರೆ.  ಹಾಗೂ ನಿರ್ದೇಶಕರಾಗಿ  ಆರಂತೋಡು ಗ್ರಾಮದಿಂದ ಯಶೋಧರ ಪಿಂಗಾರ ತೋಟ, ಯು.ಎಂ ಕಿಶೋರ್ ಕುಮಾರ್ ಉಳುವಾರು, ಮೋಹನ್ ಕುಮಾರ್ ಪಾರೆಮಜಲು ಹಾಗೂ ತೊಡಿಕಾನ ಗ್ರಾಮದಿಂದ ಕೇಶವ ಕೊಳಲುಮೂಲೆ, ವೆಂಕಟ್ರಮಣ ಪೆತ್ತಾಜೆ ಮತ್ತು ಕಮಲಾಕ್ಷ ಕಾಟೂರು(ಪಡ್ಪು) ಆಯ್ಕೆಯಾಗಿದ್ದಾರೆ.
Ad Widget

ಕನ್ನಡ ಕನ್ನಡ ಅಹಾ…..! ಸವಿಗನ್ನಡ

ಕರ್ನಾಟಕ ಬರಿಯ ನಾಡಲ್ಲ. ನಮ್ಮ  ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ಅದು ನಮ್ಮಂತರಂಗದ ಮಾತು. ಇಂದು ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡದ ದಿನ .ಕರ್ನಾಟಕ ರಚನೆಯ ದಿನ. 1947 ಆಗಸ್ಟ್ 15ರಂದು ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ  ಮುಕ್ತಿ ಹೊಂದಿತು.1950ರಲ್ಲಿ ಭಾರತವು ಗಣರಾಜ್ಯವಾಯಿತು. ಇದಾದ ನಂತರ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳ...

ನ.05 : ನಿಡ್ವಾಳ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ – ಕೋಡಿ ಮಠದ ಶ್ರೀಗಳ ಉಪಸ್ಥಿತಿ – ಮುಂದಿನ ಎಪ್ರಿಲ್ ನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತೀರ್ಮಾನ

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವಂಬರ್ 05 ಬುಧವಾರದಂದು ಬೆಳಗ್ಗೆ 8-30ರಿಂದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ನಡೆಯಲಿದೆ. ಋಷಿ ಪರಂಪರೆಯ ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ಲೋಕಕಲ್ಯಾಣಾರ್ಥವಾಗಿ ಹಾಗೂ 2026ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ಈ ಮಹಾಯಾಗ ನಡೆಯಲಿದೆ....

12 ನೇ ವರ್ಷಕ್ಕೆ ಪಾದಾರ್ಪಣೆ ಅಂಗವಾಗಿ ಹೋಟೆಲ್ ಲಕ್ಷ್ಮೀ ವಿಲಾಸ್ ನಲ್ಲಿ ಪೂಜೆ – ಅನ್ನದಾನ

ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಕಳೆದ 11 ವರ್ಷಗಳಿಂದ ಕಾರ್ಯಚರಿಸುತ್ತಿರುವ ಹೋಟೆಲ್ ಲಕ್ಷ್ಮೀ ವಿಲಾಸ್ 12 ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ ಅ.31 ರಂದು ಲಕ್ಷ್ಮೀ ಪೂಜೆ ನೆರವೇರಿತು. ಇದರ ಅಂಗವಾಗಿ ಮಧ್ಯಾಹ್ನ ಅತಿಥಿಗಳಿಗೆ ಹಾಗೂ ಗ್ರಾಹಕರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಹೊಟೇಲ್ ಮಾಲಕರಾದ ಲಕ್ಷ್ಮೀಶ ಎನ್. ಚೊಕ್ಕಾಡಿ,...
error: Content is protected !!