Ad Widget

ನೆಹರೂ ಮೆಮೋರಿಯಲ್ ಪಿ.ಯು. ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ – ಸನ್ಮಾನ


ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ನ. 29 ರಂದು ಕಾಲೇಜು ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಯಿತು.l
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.), ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಅವರು ದೀಪ ಬೆಳಗಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆ,ಸಾಧನೆ ಅನಾವರಣಕ್ಕೆ ಕಾಲೇಜು ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶಿಸ್ತಿನಿಂದ ವಿದ್ಯಾರ್ಜನೆಯನ್ನು ಮಾಡಬೇಕು, ಯಾವುದೇ ದುಶ್ಚಟಕ್ಕೆ ಬಲಿಯಾಗಬಾರದು ಎಂದರು.ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸಿದ್ಧ ಮಕ್ಕಳ ತಜ್ಞರು ಮತ್ತು ಲೇಖಕರಾದ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರು ಮಾತನಾಡಿ ನನ್ನ ಭವಿಷ್ಯಕ್ಕೆ ಬುನಾದಿ ಹಾಕಿದ ಸoಸ್ಥೆ ಈ ಕಾಲೇಜು.ಜೀವನದಲ್ಲಿ ಅತಿ ದೊಡ್ಡ ಸಂಪತ್ತು ಶಿಕ್ಷಣ. ಅವಕಾಶ ಅಗಾಧವಾಗಿದೆ. ನಾವು ಒಳ್ಳೆಯ ರೀತಿಯಲ್ಲಿ ಕೌಶಲ್ಯ ವೃದ್ಧಿ ಮಾಡಬೇಕು.ಬುದ್ಧಿವಂತಿಕೆ, ಶಿಸ್ತು ತುಂಬಾ ಮುಖ್ಯ.
ಉತ್ತಮ ಭವಿಷ್ಯ ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

. . . . . . . . .


ಗೌರವ ಅತಿಥಿಗಳಾಗಿ ಉಪಸ್ಥಿತ ರಿದ್ದ ಆಡಳಿತ ಮಂಡಳಿಯ ಕಾರ್ಯದರ್ಶಿ ಹೇಮನಾಥ್ ಕೆ ವಿ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು,
ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ್ ಎಂ.ಎಂ. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ.ರೈ,
ವಿದ್ಯಾರ್ಥಿ ಕ್ಷೇಮಾಧಿಕಾರಿ ಕುಮಾರಿ ಬೇಬಿ ವಿದ್ಯಾ ಪಿ.ಬಿ.,ವಿದ್ಯಾರ್ಥಿ ನಾಯಕ ಯಶವಂತ್ ಕುಶಾಲಪ್ಪ ಸಿ.ಜೆ., ವಿದ್ಯಾರ್ಥಿ ನಾಯಕಿ ಶ್ರೇಯಾ ಎಂ.ಜಿ.,
ಸಾಂಸ್ಕೃತಿಕ ಕಾರ್ಯದರ್ಶಿ ಸುಗುಣಾ ಎಸ್. ಮತ್ತು ಕ್ರೀಡಾ ಕಾರ್ಯದರ್ಶಿ ಕೌಶಿಕ್ ಜಿ. ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಶರಣ್ಯ ಬಳಗದವರು ಪ್ರಾರ್ಥಿಸಿದರು.,ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ ಸಾಧಕರ ಪರಿಚಯ ವಾಚಿಸಿದರು. ಉಪನ್ಯಾಸಕರಾದ ಸಾವಿತ್ರಿ ಕೆ ,ವಿನಯ್ ನಿಡ್ಯಮಲೆ, ಸುಚೇತಾ ಎಂ ಇವರು ದತ್ತಿನಿಧಿ,ಕಲಿಕೆ,ವಿವಿಧ ಸ್ಪರ್ಧೆಗಳ ವಿಜೇತರು, ಬೆಸ್ಟ್ ಔಟ್ ಗೋಯಿಂಗ್ ಅವಾರ್ಡ್ ಪಟ್ಟಿ ವಾಚಿಸಿದರು.ಶ್ರೇಯ ಎಂ ಜಿ ಸ್ವಾಗತಿಸಿ, ಯಶವಂತ್ ಕುಶಾಲಪ್ಪ ಸಿ ಜೆ ವಂದಿಸಿದರು. ವಿದ್ಯಾರ್ಥಿಗಳಾದ ಚೆನ್ನಕೇಶವ ಕೆ ಸಿ, ಸಾಕ್ಷಿ ಎ,ಡೆನಿಕ ಲೋಬೊ,ಮೋಕ್ಷ ಬಿ ಬಿ ನಿರೂಪಿಸಿದರು.ಈ ಸಂದರ್ಭದಲ್ಲಿ ಡಾ ಕುಶ್ವoತ್ ಕೋಳಿಬೈಲು ಹಾಗೂ ವಿದ್ಯಾರ್ಥಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಹೇಮಂತ್ ಎಂ ಕೆ ಇವರನ್ನು ಸನ್ಮಾನಿಸಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading