Ad Widget

ಮಾಡನ್ನೂರು : ಡಿ.5,6 ಮತ್ತು 7 ರಂದು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಹಾಗೂ ಪದವಿ ಪ್ರಧಾನ ಸಮಾರಂಭ

ಕಾವು ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಹಾಗೂ ಪದವಿ ಪ್ರಧಾನ ಸಮಾರಂಭ ಡಿ.೫.೬ ಮತ್ತು ೭ ರಂದು ಮೂರು ದಿನಗಳ ಕಾಲ ವಿವಿಧ ಕ್ಷೇತ್ರದ ಗಣ್ಯರ ಭಾಗವಹಿಸುವಿಕೆಯೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿ ಉಪಾಧ್ಯಕ್ಷ ಟಿ.ಎಂ. ಶಹೀದ್ ಹೇಳಿದರು.

. . . . . . . . .

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂಸ್ಥೆ ಹಾಗೂ ದಶಮಾನೋತ್ಸವ ಕಾರ್ಯಕ್ರಮದ ವಿವರ ನೀಡಿದರು. ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ಕೇರಳದ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ ಇದರ ಸಹ ಸಂಸ್ಥೆಯಾಗಿ ೨೦೧೫ ಆಗಸ್ಟ್ ೧೯ರಂದು ಗಡಿಭಾಗವಾದಪುತ್ತೂರು ತಾಲೂಕಿನ ಮಾಡನ್ನೂರ್ ಎಂಬಲ್ಲಿ ಪ್ರಾರಂಭವಾಗಿದೆ. ಪ್ರಸ್ತುತ ಸಂಸ್ಥೆಯು ೩೬೦ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶ್ವದರ್ಜೆಯ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ.ಇAಗ್ಲೀಷ್, ಅರಬಿ, ಉರ್ದು,ಕನ್ನಡ. ಮಲಯಾಳಂ ಹಾಗೂ ಇತರ ಅಂತರಾಷ್ಟ್ರೀಯ ಭಾಷೆಗಳಲ್ಲಿ ಪಾಠ ಪಠ್ಯೇತರ ಚಟುವಟಿಕೆ ಸೇರಿದಂತೆ ಉತ್ತಮ ಶಿಕ್ಷಣ ನೀಡುತ್ತಿದೆ. ಸಂಸ್ಥೆಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಕ್ಸಿಕ್ಯೂಟಿವ್ ಸಮಿತಿ, ಸುಳ್ಯ ಪುತ್ತೂರು ಹಾಗೂ ೯ ವಲಯಗಳು ಸೇರಿದಂತೆ ದೇಶವಿದೇಶಗಲ್ಲಿ ಸಮಿತಿಗಳು ಕಾರ್ಯಚರಿಸುತ್ತಿದ್ದು ಅಂತಾರಾಷ್ಟಿçÃಯ ಮಟ್ಟದ ಸಂಸ್ಥೆಯಾಗಿದೆ. ಸಂಸ್ಥೆಯ ದಶಮಾನೋತ್ಸವ ಸಂದರ್ಭದಲ್ಲಿ ೩೬ ವಿದ್ಯಾರ್ಥಿಗಳಿಗೆ ಹುದವಿ ಪದವಿ ಪ್ರಧಾನ ನಡೆಯಲಿದೆ.ಆಡಳಿತ ಮಂಡಳಿ ಸಂಸ್ಥೆಯನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮುನ್ನಡೆಸುತ್ತಿದ್ದು, ಧಾರ್ಮಿಕ ಹಾಗೂ ಮೌಖಿಕ ಸಮನ್ವಯ ಶಿಕ್ಷ£ಣದೊಂದಿಗೆ ವಿಧ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸುತ್ತಿದೆ ಎಂದರು.
ಡಿಸೆAಬರ್ ೫, ೬, ಮತ್ತು ೭ ರಂದು ನಡೆಯುವ ಐತಿಹಾಸಿಕವಾದ ಈ ಕಾರ್ಯಕ್ರಮದಲ್ಲಿ ಡಿ.೫ ರಮದು ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಗಳ್ ರವರ ನೇತೃತ್ವದಲ್ಲಿ ಸಮಸ್ತದ ನೂರು ಧ್ವಜಗಳನ್ನು ಹಾರಿಸಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಂಜೆ ೪:೩೦ಕ್ಕೆ ನಡೆಯಲಿರುವ ಉದ್ಘಾಟನಾ ಮಹಾಸಮ್ಮೇಳನದಲ್ಲಿ ಪಾಣಕ್ಕಾಡ್ ಮುನವ್ವರ್ ಅಲಿ ಶಿಹಾಬ್ ತಂಗಳ್, ಕರ್ನಾಟಕ ರಾಜ್ಯ ಸಭಾಪತಿಗಳಾದ ಯುಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಸೈಯ್ಯಿದ್ ಝೈನುಲ್ ಆಬಿದೀನ್ ತಂಗಳ್ ಕುನ್ನುಂಗೈ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಇದರ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ತಾದ್ ಉಸ್ಮಾನ್ ಫೈಝಿ ತೋಡಾರ್ ಇನ್ನಿತರ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಪ್ರಸ್ತುತ ರಾತ್ರಿ ಅಂತರಾಷ್ಟ್ರೀಯವಾಗಿ ಬಹು ಸಿಂಸಾರುಲ್ ಹಕ್ ಹುದವಿ ಅಬುಧಾಬಿ ಮುಖ್ಯ ಪ್ರಭಾಷಣ ಗೈಯಲ್ಲಿದ್ದಾರೆ.
ಡಿ.೬ರಂದು ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಕರ್ಮ ಶಾಸ್ತ್ರ ಸಂಬAಧವಾಗಿ ಸೆಮಿನಾರ್ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಗಲ್ಫ್ ಮೀಟ್ ಕಾರ್ಯಕ್ರಮ ನಡೆಯಲಿದೆ ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಕಾವು ವಹಿಸಲಿದ್ದಾರೆ.
ಡಿ.೦೭ ರಂದು ಮಾರೋಪ ಸಮಾರಂಭ ನಡೆಯಲಿದ್ದು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಬಹುಮಾನ್ಯ ಸೈಯ್ಯಿದುಲ್ ಉಲಮಾ ಸೈಯ್ಯಿದ್ ಮುಹಮ್ಮದ್ ಜಿಫ್ರಿ ತಂಗಳ್ ಪದವಿ ಪ್ರಧಾನ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಪಾಣಕ್ಕಾಡ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್ ಉದ್ಘಾಟಿಸಲಿದ್ದಾರೆ. ದಶಮಾನೋತ್ಸವದ ಅಂಗವಾಗಿ ನ.೩೦ ರಂದು ರಕ್ತದಾನ ಶಿಬಿರ ನಡೆಯಲಿದೆ ಎಂದರು.

. . . . . . .

ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ ಪ್ರಸಿದ್ಥ ಧಾರ್ಮಿಕ ಕೇಂದ್ರವಾಗಿರುವ ಇಲ್ಲಿ ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಶಿಕ್ಷಣ ಸೇವೆ ನೀಡುತ್ತಿದೆ. ಇಲ್ಲಿ ನಡೆಯುವ ಆಧ್ಯಾತ್ಮಿಕ ಮಜ್ಲೀಸ್ ನಲ್ಲಿ ಸಾವಿರಾರು ಮಂದಿ ಜಾತಿ ಮತ ಭೇಧವಿಲ್ಲದೇ ಭಾಗವಹಿಸುತ್ತಾರೆ. ಸಂಸ್ಥೆಯು ಈ ಹತ್ತು ವರ್ಷದ ಕೋರ್ಸಿಗೆ ಲಕ್ಷಾಂತರ ಖರ್ಚುಮಾಡಿ ದೇಶದ ಸತ್ಪçಜೆಂiÀiನ್ನಾಗಿಸುವ ಶಿಕ್ಞಣ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ನೀಡುವ ಹುದವಿ ಪದವಿಗೆ ಅಂತಾರಾಷ್ಟಿçÃಯ ಮಾನ್ಯತೆಯಿದೆ. ಇಲ್ಲಿ ಶಿಸ್ತು. ಬದ್ಧತೆ, ಸ್ಕೌಟ್ಸ್ ಗೈಡ್ಸ್, ಆಧ್ಯಾತ್ಮಿಕ ಚಿಂತನೆ ಜತೆಗೆ ದೇಶಪ್ರೇಮ, ಮೂಡಿಸುತ್ತಿದ್ದು ಲೌಖಿಕ ಶಿಕ್ಷಣದಂತೆ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡುತ್ತಿದ್ದಾರೆ. ಪ್ರತಿ ವರ್ಷ ಕುಟುಂಬ ಸಮ್ಮಿಲನ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ತಂದೆ ತಾಯಿಯ ಪಾತ್ರದ ಬಗ್ಗೆ ಅರಿವು ಮಾಡಿಸುತ್ತಿದೆ ಎಂದರು.

ಗೋಷ್ಠಿಯಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಸೆಂಟರ್ ನ ಉಪಾಧ್ಯಕ್ಷ ಇಬ್ರಾಹಿಂ ಹಾಜಿ, ದಶಮಾನೋತ್ಸವ ಸಮಿತಿ ಸದಸ್ಯರಾದ ಇಕ್ಬಾಲ್ ಎಲಿಮಲೆ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading