Ad Widget

ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿ ಆರಂಭ

ಸಂಪಾಜೆ ಗ್ರಾಮದ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಕೇಂದ್ರದಲ್ಲಿ ಐ ಸಿ.ಡಿ.ಎಸ್ ಯೋಜನೆಯಡಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಕ್ಕಳಿಗೆ ಪುಸ್ತಕವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ ವಿತರಿಸಿದರು. ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ ಹನೀಫ್ ಸಂಪಾಜೆ ಸ್ಮಾರ್ಟ್ ಕ್ಲಾಸ್ ಟಿವಿ  ಉದ್ಘಾಟಿಸಿದರು.  ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಮೈಸೂರಿನಲ್ಲಿ 50 ವರ್ಷಗಳ ಹಿಂದೆ ಆರಂಬಿಸಿದ  ಐ.ಸಿ.ಡಿ.ಎಸ್ ಯೋಜನೆಯ ಸುವರ್ಣಮಹೋತ್ಸವ ಅಂಗವಾಗಿ ಸುಳ್ಯ ತಾಲೂಕಿನ 169 ಅಂಗನವಾಡಿಗಳ ಪೈಕಿ 13 ಅಂಗನವಾಡಿ ಈ ಯೋಜನೆಗೆ ಆಯ್ಕೆಯಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಂದರಿ ಮುಂಡಡ್ಕ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಮ್ಲತ್, ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್, ಸದಸ್ಯರಾದ ರಜನಿ ಶರತ್, ಲತೀಫ್ ಎಸ್.ಪಿ. ಅಂಗನವಾಡಿ ಕಾರ್ಯಕರ್ತೆ ಶಿಲಾವತಿ ನೆಲ್ಲಿಕುಮೇರಿ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಆಶಾ ಕಾರ್ಯಕರ್ತೆ ಸೌಮ್ಯ ಹಾಗೂ ಪೋಷಕರು  ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading