Ad Widget

ಮರಕತ : ಡಾ.ವಿರೇಂದ್ರ ಹೆಗ್ಗಡೆಯರ 78ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ  ವಿಶೇಷ ಪೂಜೆ

ನಾಲ್ಕೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ.) ಗುತ್ತಿಗಾರು ವಲಯದ ನಾಲ್ಕೂರು ಒಕ್ಕೂಟಗಳ ವಾರ್ಷಿಕೋತ್ಸವ ಹಾಗೂ ಡಾ.ವಿರೇಂದ್ರ ಹೆಗ್ಗಡೆ ಅವರ 78ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮೂಲಕ ಮನೆ ಮನೆಗಳಲ್ಲಿ ಆರ್ಥಿಕ,ಸಾಮಾಜಿಕ, ಸೈಕ್ಷಣಿಕ, ಅಭಿವೃದ್ಧಿಗೆ ಕಳೆದ 20 ವರ್ಷಗಳಿಂದ ಗ್ರಾಮದ ನೂರಾರು ಕುಟುಂಬಗಳು ಸೇರಿಕೊಂಡು ಒಕ್ಕೂಟ ವ್ಯವಸ್ಥೆಯ ಮೂಲಕ ಬದುಕು ರೂಪಿಸಿ ಇಂದು ಸ್ವಸ್ಥ ಬದುಕು ನಡೆಸುತ್ತಿರುವ ಸಂಘಗಳ ಸದಸ್ಯರ ಜೀವನ ಇನ್ನಷ್ಟು ಅಭಿವೃದ್ಧಿಯಾಗಲಿ ಎನ್ನುವ ಸಂಕಲ್ಪ ದೊಂದಿಗೆ,
ನಮಗೆಲ್ಲರಿಗೂ ಮಾರ್ಗದರ್ಶಕರಾಗಿ ಸಮಾಜಕ್ಕೆ  ಸಮಾಜಮುಖಿ ಸೇವಾಕಾರ್ಯಗಳ ಮೂಲಕ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ರಾಜರ್ಷಿ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 78ನೇ ವರ್ಷದ ಹುಟ್ಟು ಹಬ್ಬದ ದಿನ, ಇವರ ಸೇವಾ ಕಾರ್ಯಕ್ಕೆ ಭಗವಂತ ಇನ್ನಷ್ಟು ಆಯಸ್ಸು, ಆರೋಗ್ಯ ನೀಡಲಿ ಎಂದು ದೇವಿ ಸನ್ನಿಧಾನದಲ್ಲಿ ಸಂಕಲ್ಪಿಸಿ,ಪ್ರಾರ್ಥಿಸಿ ಮಹಾಪೂಜೆ ನೆರವೇರಿಸಲಾಯಿತು. ಒಕ್ಕೂಟದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಪದ್ಮನಾಭ ಪರಮಲೆ,ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಜೇಶ್ ಉತ್ರಂಬೆ, ವೆಂಕಪ್ಪ ನಾಯ್ಕ ಅಂಜೇರಿ,ಷಣ್ಮುಖ ಅಂಬೆಕಲ್ಲು, ಚಂದ್ರಾವತಿ ಉತ್ರಾಂಬೆ,ರತ್ನಾವತಿ ಹುಲ್ಲುಕುಮೇರಿ, ಶ್ರೀ ಮಹಾ ಮೃತ್ಯುಂಜಯೇಶ್ವರ ಪಾರ್ವತಿ ಕ್ಷೇತ್ರ ನಡುಗಲ್ಲು ಇದರ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ನಡುಗಲ್ಲು,ವಲಯ ಭಜನಾ ಪರಿಷತ್ ನಿಕಟಪೂರ್ವ ಅಧ್ಯಕ್ಷ ವೆಂಕಟ್ ಹುಲಿಕೆರೆ,ವಲಯ ಮೇಲ್ವಿಚಾರಕರಾದ ರಾಜೇಶ್ ಪೆರಿಂಜೆ, ಒಕ್ಕೂಟಗಳ ಅಧ್ಯಕ್ಷ ಕೇಶರಾಜ್ ಹೊಸೊಳಿಕೆ, ಲೋಹಿತ್ ಚೆಮ್ನೂರು, ಕಾರ್ಯದರ್ಶಿಗಳಾದ ಲೀಲಾವತಿ ಅಂಜೇರಿ, ಪ್ರಸನ್ನ ಅಮೆ, ಜತೆ ಕಾರ್ಯದರ್ಶಿ ಕರುಣಾಕರ ನೆಲ್ಲಿಪುಣಿ, ಗಾಯತ್ರಿ ಉತ್ರಾಂಬೆ,ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕೊಯಿಲ, ಸ್ಥಾಪಕಾಧ್ಯಕ್ಷರಾದ ಮೋಹನ್ ಎರ್ದಡ್ಕ ,ಶಿವಪ್ರಸಾದ್ ಹಲ್ಗುಜಿ, ಒಕ್ಕೂಟಗಳ ಎಲ್ಲಾ ಸದಸ್ಯರೂ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು ಉಪಸ್ಥಿತರಿದ್ದರು.
ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading