ತಿಂಗಳಾಡಿ-ಅಲ್ ಫಝಲ್ ತಟ್ಟುಕಡ ಶುಭಾರಂಭ

ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಶಾಫಿ ಪಳ್ಳಿಮಜಲು ಬೆಳ್ಳಾರೆ ಮಾಲಕತ್ವದ ಅಲ್ ಫಝಲ್ ತಟ್ಟುಕಡ ನ 21ರಂದು ಶುಭಾರಂಭಗೊಂಡಿತು.ತಿಂಗಳಾಡಿ ಮಸೀದಿಯ ಖತೀಬರು ದು:ಆ ನೆರವೇರಿಸಿ ಶುಭಾರಂಭ ಮಾಡಿದರು.ಸಲೀಂ ಸಅದಿ ಕಳೆಂಜಿಬೈಲು,ಮುನವ್ವರ್ ಅಹ್ಮದ್ ಕಳೆಂಜಿಬೈಲು,ಮಾಲಕ ಶಾಫಿ ಪಳ್ಳಿಮಜಲು ಬೆಳ್ಳಾರೆ ಉಪಸ್ಥಿತರಿದ್ದರು.ಇಲ್ಲಿ ಚಹಾ,ಕಾಫಿ,ಕರಿದ ತಿಂಡಿಗಳು,ಮೃದು ಪಾನೀಯಗಳು,ಮಧ್ಯಾಹ್ನದ ಗಂಜಿ,ಊಟ ಎಲ್ಲಾ ತರದ ಲೈವ್ ಜ್ಯೂಸ್ ಗಳು ಲಭ್ಯವಿವೆ ಎಂದು ಮಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ...

ಕ್ಯಾಂಪ್ಕೋ ಚುನಾವಣೆ – ಎ.ವಿ.ತೀರ್ಥರಾಮ, ಮುರಳಿಕೃಷ್ಣ ಚಳ್ಳಂಗಾರು ಸೇರಿದಂತೆ ಸಹಕಾರ ಭಾರತಿಯ ಆರು ಅಭ್ಯರ್ಥಿಗಳ ಗೆಲುವು

ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿಗೆ 13 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು ಬಾಕಿ ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆಯಿತು. ಒಟ್ಟು 5651 ಮತದಾರರ ಪೈಕಿ 2573 ಮತದಾರರು ಮತ ಚಲಾಯಿಸಿದ್ದು ಶೇ.45.5% ಮತದಾನವಾಗಿತ್ತು. 6 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿದ್ದರು. 6 ಜನ ಸಹಕಾರ ಭಾರತಿಯಿಂದ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ...
Ad Widget

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತ್ರಿವಳಿ ಪ್ರಶಸ್ತಿಯನ್ನು ಪಡೆದುಕೊಂಡ ದರ್ಶಿಕ್.ಸಿ.ಎಸ್

ಇಂಪ್ಯಾಕ್ಟ್ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಚಳ್ಳಂಗಾರು ಸುರೇಶ್ ಹಾಗೂ ಗೀತಾ ದಂಪತಿಗಳ ಪುತ್ರರಾದ ದರ್ಶಿಕ್.ಸಿ.ಎಸ್ ತ್ರಿವಳಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಕರಾಟೆಯ ವೈಯಕ್ತಿಕ ಕಟಾ ಕುಮಿಟಿ, ಟೀಮ್ ಕಟಾ...

ಮರಕತ : ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ವಾರ್ಷಿಕ ಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ವಾರ್ಷಿಕ ಸಭೆ ಇತ್ತೀಚೆಗೆ ಜರುಗಿತು.‌ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಸವಿತಾ ಚಿದಾನಂದ ಹುಲಿಮನೆ, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರುತಿ ರಘುನಾಥ ಮರಕತ ಆಯ್ಕೆಯಾದರು. ಸಭೆಯಲ್ಲಿಶ್ರೀ ದುರ್ಗಾ ಭಜನಾ ಮಂಡಳಿಯ ಸ್ಥಾಪಕರಾದ ರಾಮಚಂದ್ರ ಭಟ್ ನಡುಗಲ್ಲು, ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್...
error: Content is protected !!