Ad Widget

ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯನೆಡೆಗೆ 

ಕಡಬದಿಂದ ಕುಕ್ಕೆಗೆ ಪಾದಯಾತ್ರೆ : ಹೊರೆಕಾಣಿಕೆ ಸಮರ್ಪಣೆ

ಸುಬ್ರಹ್ಮಣ್ಯ ನ.25 : ವಿಶ್ವ ಹಿಂದೂ ಪರಿಷದ್ ಕಡಬ ಪ್ರಖಂಡ ವತಿಯಿಂದ “ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯ ನೆಡೆಗೆ” ಪಾದಯಾತ್ರೆ ಹಾಗೂ ಹಸಿರು ಹೊರೆಕಾಣಿಕೆ ಸಮರ್ಪಣೆ ಮಂಗಳವಾರ ನಡೆಯಿತು.
ಕಡಬದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಳ್ಳಲಾಯಿತು. ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಪಾದಯಾತ್ರೆಗೆ ಪ್ರಸಾದ್ ಕೆದಿಲಾಯ ಅವರು ಚಾಲನೆ ನೀಡಿದರು. ಬಳಿಕ ಕಡಬ ಭಾಗದ ಭಕ್ತರು ಕುಕ್ಕೆಗೆ ಪಾದಯಾತ್ರೆ ಕೈಗೊಂಡರು.
ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ತಾವುಗಳು ಬೆಳೆದ ತರಕಾರಿ, ಬೆಳೆಗಳನ್ನು ಕುಕ್ಕೆಗೆ ಸಮರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿರಿ. ವರ್ಷದಿಂದ ವರ್ಷಕ್ಕೆ ಕ್ಷೇತ್ರಕ್ಕೆ ಹಸಿರು ಕಾಣಿಕೆ ಸಮರ್ಪಣೆ ಹೆಚ್ಚಳವಾಗುತ್ತಿದೆ. ಕ್ಷೇತ್ರದ ವತಿಯಿಂದಲೂ ಸ್ಥಳೀಯವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ವರ್ಷಪೂರ್ತಿ ಸಾಮಾಗ್ರಿಗಳನ್ನು ಒದಗಿಸಲಾಗುತ್ತದೆ. ಅದರ ನೆನಪಿಗಾಗಿ, ಕೃತಜ್ಞತಾ ಭಾವದಿಂದ ಭಕ್ತರು ಕ್ಷೇತ್ರಕ್ಕೆ ಹಸಿರು ಕಾಣಿಕೆ ಸಮರ್ಪಿಸುತ್ತಾರೆ” ಎಂದು ಭಾವಿಸುತ್ತೇನೆ ಎಂದರು.
ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಡಿ, ಪ್ರಮುಖರಾದ ವಾಸುದೇವಾ ಭಡ್ ಕಡ್ಯ, ಅಶೋಕ್ ಮೂಲೆಮಜಲು, ಶಿವರಾಮ ಶೆಟ್ಟಿ ಕೇಪು, ರಾಜೇಶ್ ಎನ್.ಎಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಮೀಳಾ ಲೋಕೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಶೆಟ್ಟಿ ಸಾಯಿರಾಮ್ ವಂದಿಸಿದರು. ಬಳಿಕ ಭಕ್ತರು ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading