Ad Widget

ಕುಕ್ಕೆಯಲ್ಲಿ ಚೌತಿಯಂದು 110 ಭಕ್ತರಿಂದ ಎಡ ಸ್ನಾನ

ಸುಬ್ರಹ್ಮಣ್ಯ ನ.24 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ  ಜಾತ್ರಾ ಮಹೋತ್ಸವದ ಮೂರು ದಿನಗಳಲ್ಲಿ(ಚೌತಿ, ಪಂಚಮಿ, ಷಷ್ಟಿ) ಸೋಮವಾರ ಚೌತಿಯಂದು ದೇವಳದ ಹೊರಾಂಗಣದಲ್ಲಿ ಸುತ್ತಲು ಹಾಕಿದ ಬಾಳೆ ಎಲೆ ಅದಕ್ಕೆ ಬಡಿಸಿದ ದೇವರ ನೈವೇದ್ಯ, ಅವುಗಳನ್ನು ಗೋವುಗಳಿಂದ ತಿನ್ನಿಸಿ ಬಳಿಕ ಹರಕೆ ಹೊತ್ತ 110 ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆಯನ್ನು ನೆರವೇರಿಸಿದರು. ಅದಕ್ಕೂ ಮೊದಲು ಸೇವೆಯಿಂದ ಮಾಡುವ ಭಕ್ತರು ದರ್ಪಣ ತೀರ್ಥದಲ್ಲಿ ಮಿಂದು ಅಲ್ಲಿಂದ ಸರತಿ ಸಾಲಿನಲ್ಲಿ ಬಂದು ಎಡೆ ಸ್ನಾನ ಸೇವೆಯನ್ನು ನೆರವೇರಿಸಿರುವರು. ಈ ಸಂದರ್ಭದಲ್ಲಿ ಆಗಮ ಶಾಸ್ತ್ರ ಪಂಡಿತರು, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಆರಕ್ಷಕ ಅಧಿಕಾರಿಗಳು, ದೇವಳದ ಅಧಿಕಾರಿಗಳು, ಭದ್ರತಾ ಸಿಬ್ಬಂದಿಯವರು ಹಾಗೂ ನೌಕರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading