Ad Widget

ಮಂಡೆಕೋಲು : ಕಾಡುಪ್ರಾಣಿಗಳಿಂದ ನಿರಂತರ ಕೃಷಿ ಹಾನಿಗೆ ರೈತರು ಕಂಗಾಲು – ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನ.24 ರಂದು ರೈತರಿಂದ ಬೃಹತ್ ಪ್ರತಿಭಟನೆ

ರೈತರ ಕೃಷಿ ಬೆಳೆಗಳು ಕಾಡಾನೆ ಸೇರಿದಂತೆ ಇತರ ಕಾಡುಪ್ರಾಣಿಗಳ ಉಪಟಳದಿಂದಾಗಿ ನಾಶವಾಗುತ್ತಿವೆ.  ಕಾಡುಪ್ರಾಣಿಗಳ ಉಪಟಳ ತಡೆಯಲು ನೆರೆಯ ಕೇರಳ ರಾಜ್ಯದಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತಿದ್ದರೂ ಕರ್ನಾಟಕದಲ್ಲಿ ಕೃಷಿಕರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ. ಆನೆಗಳ ಹಾವಳಿ ತಡೆಯಲು ಹಾಗೂ ತಕ್ಷಣಕ್ಕೆ ರೈತರ ನೆರವಿಗೆ ಧಾವಿಸಲು ಊರ ಕೇಂದ್ರದಲ್ಲಿ ವಿಶೇಷ ಕಾರ್ಯಾಚರಣೆ ಪಡೆ ಮೀಸಲಿರಿಸುವುದು, ಸೋಲಾರ್ ಬೇಲಿ ಅಳವಡಿಕೆ, ಮಂಗಗಳ ಉಪಟಳಕ್ಕೆ ಕಡಿವಾಣ ಹಾಕಲು ಮಂಕಿ ಪಾರ್ಕ್ ನಿರ್ಮಾಣ, ಜೊತೆಗೆ ಅವುಗಳ ಸಂಖ್ಯೆ ವೃದ್ಧಿಸದಂತೆ ಮಂಗಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮುಂತಾದ ಶಾಶ್ವತ ಪರಿಹಾರಕ್ಕಾಗಿ ಬೃಹತ್‌ ಪ್ರತಿಭಟನೆ ನಡೆಸಲು ರೈತ ಹಿತರಕ್ಷಣಾ ಸಮಿತಿ ಮಂಡೆಕೋಲು ತೀರ್ಮಾನಿಸಿದೆ.

ನವೆಂಬರ್ 24 ರಂದು ಮಂಡೆಕೋಲು ಗ್ರಾಮ ಪಂಚಾಯತ್ ಮುಂಭಾಗ ಬೆಳಿಗ್ಗೆ 9.30ಕ್ಕೆ ಬೃಹತ್ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading