Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರೋತ್ಸವ ಕ್ಷೇತ್ರದ ವಿಶೇಷತೆಗಳು

ಸುಬ್ರಹ್ಮಣ್ಯ : ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.16 ರಿಂದ ಆರಂಭವಾಗಿ ಡಿಸೆಂಬರ್ 02ರ ತನಕ ನಡೆಯಲಿರುವುದು. ನ.26 ಬುಧವಾರದಂದು ಪ್ರಾತಃಕಾಲ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರು ಚಂಪಾಷಷ್ಠಿ ಮಹಾ ರಥೋತ್ಸವದಲ್ಲಿ ಬ್ರಹ್ಮರಥ ಏರಿ ನೆರೆದ ಲಕ್ಷಾಂತರ ಭಕ್ತರನ್ನು ಹರಸುವರು.ಕ್ಷೇತ್ರದ ವಿಶೇಷತೆಗಳು - 1) ಮೂಲ ಮೃತ್ತಿಕೆ ಪ್ರಸಾದ : ವರ್ಷಕ್ಕೊಮ್ಮೆ...

ಕ್ಯಾಂಪ್ಕೋ ಚುನಾವಣೆ – ಶೇ 45.53 ಮತದಾನ – ನ.25ರಂದು ಮತ ಎಣಿಕೆ

ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿಗೆ 13 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು ಬಾಕಿ ಉಳಿದ 6 ಸ್ಥಾನಗಳಿಗೆ  ನ.23 ರಂದು ಚುನಾವಣೆ ನಡೆಯಿತು. ಒಟ್ಟು 5651 ಮತದಾರರ ಪೈಕಿ 2573 ಮತದಾರರು ಮತ ಚಲಾಯಿಸಿದ್ದು ಶೇ.45.53% ಮತದಾನವಾಗಿದೆ.  6 ಸ್ಥಾನಗಳಿಗೆ  8 ಅಭ್ಯರ್ಥಿಗಳು ಕಣದಲ್ಲಿದ್ದರು. 6 ಜನ ಸಹಕಾರ ಭಾರತಿಯಿಂದ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ...
Ad Widget

ಮುರೂರಿನಲ್ಲಿ ಚೆಕ್ ಪೋಸ್ಟ್ ಮತ್ತು ಬಸ್ ಸ್ಟ್ಯಾಂಡ್ ಬಳಿ ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ

ವೀರವನಿತೆ ಕ್ರೀಡಾ ಮತ್ತು ಕಲಾಸಂಘ ಮಂಡೆಕೋಲು ಇದರ ವತಿಯಿಂದ ಯುವಜನ ಸಂಯುಕ್ತ ಮಂಡಳಿಯವರು ಹಮ್ಮಿಕೊಂಡಿರುವ 75 ದಿನಗಳ ಸ್ವಚ್ಛತಾ ಅಭಿಯಾನ ಪಂಚಸಪ್ತತಿ 2025 ಇದರ ಅಂಗವಾಗಿ ಕರ್ನಾಟಕ ಕೇರಳದ ಗಡಿ ಭಾಗವಾದ  ಮಂಡೆಕೋಲು ಗ್ರಾಮದ ಮುರೂರು ಚೆಕ್ ಪೋಸ್ಟ್ ಬಳಿ ಹಾಗೂ ಮೂರೂರು ಬಸ್ ಸ್ಟ್ಯಾಂಡ್ ಹಾಗೂ ಸುತ್ತಮುತ್ತ ಕಾಡು ಕಡಿದು ಕಸ ಹೆಕ್ಕಿ ಸ್ವಚ್ಛತೆ...

ನ.27 ಮತ್ತು 28 ರಂದು ಬೆಳ್ಳಾರೆ ಜ್ಞಾನದೀಪದಲ್ಲಿ ರಂಗ ಚಟುವಟಿಕೆ ಶಿಬಿರ

ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೃತ್ಯ ಮತ್ತು ಅಭಿನಯದ ಮೂಲಕ ಪರಿಣಾಮಕಾರಿಯಾಗಿ ಬೋಧಿಸಲು ಅಗತ್ಯವಾದ ಎರಡು ದಿನಗಳ ರಂಗ ಚಟುವಟಿಕೆ ಶಿಬಿರವು ನ.27 ಮತ್ತು ನ.28ರಂದು ನಡೆಯಲಿದೆ ಕಾಂತಾರ ಮತ್ತು ಸುಫ್ರಮ್ ಸೋ ಖ್ಯಾತಿಯ ಜಾನಪದ ಕಲಾವಿದ ಮೈಮ್ ರಾಮ್ ದಾಸ್, ಕಾರ್ಕಳದ ವರ್ಧಮಾನ ಶಿಕ್ಷಣ ಸಂಸ್ಥೆಗಳ...

ಅಜ್ಜನಗದ್ದೆ : ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ವತಿಯಿಂದ ಪಂಚ ಸಪ್ತತಿ 2025ರ ಅಂಗವಾಗಿ " ನಮ್ಮ ಊರು ಸ್ವಚ್ಛ ಊರು" ಎಂಬ ಧ್ಯೇಯವಾಕ್ಯದೊಂದಿಗೆ   ಅಜ್ಜನಗದ್ದೆ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಗಳನ್ನು  ಏರ್ಪಡಿಸಲಾಯಿತು. ಈ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಸೃಜನಶೀಲತೆ ಹಾಗೂ ಪರಿಸರ ಜಾಗೃತಿ ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.ಕಾರ್ಯಕ್ರಮದ...

ಮಂಡೆಕೋಲು : ಕಾಡುಪ್ರಾಣಿಗಳಿಂದ ನಿರಂತರ ಕೃಷಿ ಹಾನಿಗೆ ರೈತರು ಕಂಗಾಲು – ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನ.24 ರಂದು ರೈತರಿಂದ ಬೃಹತ್ ಪ್ರತಿಭಟನೆ

ರೈತರ ಕೃಷಿ ಬೆಳೆಗಳು ಕಾಡಾನೆ ಸೇರಿದಂತೆ ಇತರ ಕಾಡುಪ್ರಾಣಿಗಳ ಉಪಟಳದಿಂದಾಗಿ ನಾಶವಾಗುತ್ತಿವೆ.  ಕಾಡುಪ್ರಾಣಿಗಳ ಉಪಟಳ ತಡೆಯಲು ನೆರೆಯ ಕೇರಳ ರಾಜ್ಯದಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತಿದ್ದರೂ ಕರ್ನಾಟಕದಲ್ಲಿ ಕೃಷಿಕರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ. ಆನೆಗಳ ಹಾವಳಿ ತಡೆಯಲು ಹಾಗೂ ತಕ್ಷಣಕ್ಕೆ ರೈತರ ನೆರವಿಗೆ ಧಾವಿಸಲು ಊರ ಕೇಂದ್ರದಲ್ಲಿ ವಿಶೇಷ ಕಾರ್ಯಾಚರಣೆ ಪಡೆ ಮೀಸಲಿರಿಸುವುದು, ಸೋಲಾರ್ ಬೇಲಿ ಅಳವಡಿಕೆ,...

ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ಕೆ.ವಿ ರೇಣುಕಾಪ್ರಸಾದ್ ಆಯ್ಕೆ

ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ತಂಡದ ಅಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದರು ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.ಇಂದು ನಡೆದ ಚುನಾವಣೆಯಲ್ಲಿ ಎಲ್.ಶ್ರೀನಿವಾಸ್ ನೂತನ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಡಾ.ರೇಣುಕಾಪ್ರಸಾದ್ ಕೆ.ವಿ, ಉಪಾಧ್ಯಕ್ಷರಾಗಿ ಎಂ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಸಿ.ಜ., ಸಹ ಕಾರ್ಯದರ್ಶಿಯಾಗಿ ಡಿ.ಕೆ.ರಮೇಶ್‌, ಕೋಶಾಧಿಕಾರಿಯಾಗಿ ಕೆ.ವಿ.ಶ್ರೀಧರ್ ಆಯ್ಕೆಯಾದರು.

ಬೆಳ್ಳಾರೆ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನೆಟ್ಟಾರು ಶಾಲೆಯಲ್ಲಿ ಕಲಿಕಾ ಚಟುವಟಿಕೆ ಕಾರ್ಯಕ್ರಮ

ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಾರು ಇವರ ಸಹಕಾರದೊಂದಿಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025 ಅಂಗವಾಗಿ  ಮಕ್ಕಳಲ್ಲಿ...

ಅಕ್ಷರೋತ್ಸವಕ್ಕೆ ಅನನ್ಯ.ಎಚ್ ಸುಬ್ರಹ್ಮಣ್ಯ ಆಯ್ಕೆ

ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರತಿಷ್ಠಿತ ಎಕ್ಸೆಲ್ ಅಕ್ಷರೋತ್ಸವ ನಾಡು – ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಆಮಂತ್ರಣ ಸಾಂಸ್ಕೃತಿಕ – ಸಾಹಿತ್ಯ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ ಕವನಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಅನನ್ಯ.ಎಚ್ ಸುಬ್ರಹ್ಮಣ್ಯ ರವರ ಕವನವು ಆಯ್ಕೆಗೊಂಡಿದೆ.

ನಡುಗಲ್ಲು : ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ ಹಾಗೂ ನೂತನ ವಿದ್ಯುತ್ ಪರಿವರ್ತಕದ ಉದ್ಘಾಟನೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ವೆಂಕಟ್ ದಂಬೆಕೋಡಿ ಇವರು ನ.22 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ನಡುಗಲ್ಲು ಕಾಯರ್ ಮುಗೇರ್ ಎಂಬಲ್ಲಿ ಅಂಗನವಾಡಿ ಸಮೀಪ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ...
Loading posts...

All posts loaded

No more posts

error: Content is protected !!