Ad Widget

ಕೊಲ್ಲಮೊಗ್ರು : ಜಾಗದ ವಿವಾದ – ಕತ್ತಿಯಿಂದ ಹಲ್ಲೆ – ದೂರು ದಾಖಲು

ಕೊಲ್ಲಮೊಗ್ರ ಗ್ರಾಮದ ಶಿವಾಲ ಎಂಬಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನ.19 ರಂದು ವರದಿಯಾಗಿದೆ.
ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಾಗೂ ಭರತ್ ಶಿವಾಲ ಎಂಬವರಿಗೆ ಹಲವು ಸಮಯಗಳಿಂದ ಜಾಗದ ತಕರಾರು ನಡೆಯುತ್ತಿತ್ತು.‌ ನ.17 ರಂದು ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು. ನ.19 ರಂದು ವಿಶ್ವನಾಥ ರೈ ಅವರು ತನ್ನ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಮತ್ತೆ ವಿವಾದ ಉಂಟಾಗಿದೆ. ಬೇಲಿ ತೆಗೆಯಲು ವಿಚಾರದಲ್ಲಿ ಜಗಳವಾಗಿ ವಿಶ್ವನಾಥ ರೈ ಅವರ ಎಡ ಕಿವಿ ಹಾಗೂ ಎಡ ಕೈ ಭಾಗಕ್ಕೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಅ.ಕ್ರ ನಂಬ್ರ  58/2025  ಕಲಂ:118(1)BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading