Ad Widget

ಸುಳ್ಯ : ಇಂದಿರಾ ಕ್ಯಾಂಟೀನ್ ನಲ್ಲಿ  ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ

ಸುಳ್ಯದ ಇಂದಿರಾ ಕ್ಯಾಂಟೀನ್ ನಲ್ಲಿ ಸುಳ್ಯ ತಾಲೂಕು ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.  ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೀತಾ ಕೊಲ್ಚಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ ಇಂದಿರಾ ಕ್ಯಾಂಟೀನ್ ನಲ್ಲಿ ನಡೆಸುವ ಮೂಲಕ ಇಂದಿರಾ ಗಾಂಧಿ ಯವರಿಗೆ ಬಡವರ ಮೇಲೆ ಇದ್ದ ಪ್ರೀತಿ. ಕಾಳಜಿ ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಪಂಗಡದ ಬಗ್ಗೆ ಪ್ರೀತಿ ಹಾಗೂ ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಹೊಲದ ಒಡೆಯ ಮೊದಲಾದ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿರುವುದನ್ನು ನೆನಪಿಸಿದರು.

. . . . . . . . .


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ. ಜಯರಾಮ್ ಮಾತನಾಡಿ ಇಂದಿರಾ ಗಾಂಧಿ ಜೀವನ ಅವರ ಆದರ್ಶ ಜಗತ್ತಿಗೆ ಮಾದರಿ ಎಂದರು.

. . . . . . .

ಮಹಿಳಾ ಕಾಂಗ್ರೆಸ್ ಉಸ್ತುವಾರಿ ಸರಸ್ವತಿ ಕಾಮತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೀತಾ ಕೊಲ್ಚಾರ್. ಕೆಡಿಪಿ ಸದಸ್ಯರಾದ ಸುಜಯ ಕೃಷ್ಣ. ಜಿಲ್ಲಾ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಲಾದ ಸುಂದರಿ ಮುಂಡಡ್ಕ. ಅನುಸೂಯ ಬೆಳ್ಳಾರೆ. ಕಾಂಗ್ರೆಸ್ ಮುಖಂಡರಾದ ಸಿದ್ದೀಕ್ ಕೊಕ್ಕೊ. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಕಾಂಗ್ರೆಸ್ ಮುಖಂಡರಾದ ಜಿ ಕೆ. ಹಮೀದ್ ಗೂನಡ್ಕ. ಸಚಿನ್ ರಾಜ್ ಶೆಟ್ಟಿ.ಜಲೀಲ್ ಬೆಳ್ಳಾರೆ.ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ. ಹನೀಫ್. ಸದಸ್ಯರಾದ ವಿಮಲಾ ಪ್ರಸಾದ್. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕಾಂತಿ ಬಿ. ಎಸ್ ಮಾಜಿ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ. ಧೀರ ಕ್ರಾಸ್ತಾ. ವಕೀಲರು ಕಾಂಗ್ರೆಸ್ ಮುಖಂಡರಾದ ಚರಣ್ ಕಾಯರ್ ಪರಿಶಿಷ್ಟ ಜಾತಿಯ ಘಟಕದ ಅಧ್ಯಕ್ಷರಾದ ಮಹೇಶ್ ಬೆಳ್ಳರ್ಕರ್ ಹಾಗೂ ಕಾಂಗ್ರೆಸ್ ಮುಖಂಡರು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading