Ad Widget

ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ತಂಡಕ್ಕೆ ಜಿಲ್ಲಾ ಮಟ್ಟದ ತೈಕೊಂಡ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಆರು ಚಿನ್ನ ಎರಡು ಬೆಳ್ಳಿ ಐದು ಕಂಚಿನ ಪದಕ

ಮಂಗಳೂರಿನ ಆಫೀಸರ್ರ್ಸ್ ಕ್ಲಬ್ ನಲ್ಲಿ ನಡೆದ ಜಿಲ್ಲಾಮಟ್ಟದ ತೈಕೊಂಡ ಕರಾಟೆ ಪಂದ್ಯಾಟದಲ್ಲಿ ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆಯ ವಿದ್ಯಾರ್ಥಿಗಳಾದ ,  ಮೊಹಮ್ಮದ್ ಅಸ್ಹಾಜ್ ಒಂದನೇ ತರಗತಿ,  ಮೊಹಮ್ಮದ್ ಝಯಾನ್ ಮೂರನೇ ತರಗತಿ , ಅದಮ್ ಫಾಜ್ ನಾಲ್ಕನೇ ತರಗತಿ, ಮೊಹಮ್ಮದ್ ಬಾಸಿಮ್, ಶಝ ಫಾತಿಮಾ ಐದನೇ ತರಗತಿ, ಹಾನಿಯಾ ಅಲ್ ಹಕೀಮ್ ಏಳನೇ ತರಗತಿ ಪ್ರಥಮ,...

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ನೇಮಕ

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 194(4)ರ ಮೇರೆಗೆ ಸಭಾಪತಿಯವರು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರನ್ನು ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ.ಸಮಿತಿಯ ಸದಸ್ಯರಾಗಿ ಭಾರತಿ ಶೆಟ್ಟಿ, ಎಸ್.ವಿ. ಸಂಕನೂರ, ನಿರಾಣಿ ಹಣಮಂತ್ ರುದ್ರಪ್ಪ, ಶರವಣ ಟಿ.ಎ, ಡಾ|ಚಂದ್ರಶೇಖರ ಬಸವರಾಜ ಪಾಟೀಲ, ಕೆ.ಎಸ್. ನವೀನ್, ತಿಪ್ಪಣ್ಣಪ್ಪ ಕಮಕನೂರ,...
Ad Widget

ಡಾ.ಕೇನಾಜೆ ಸಹಯೋಗದ ಜಾನಪದ ಕೃತಿ ಲೋಕಾರ್ಪಣೆ

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗ ಮತ್ತು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜಾನಪದ ಸಂಶೋಧಕ, ಲೇಖಕ ಡಾ.ಸುಂದರ ಕೇನಾಜೆ ಸಹಯೋಗದಲ್ಲಿ ರಚಿಸಿದ ಕೃತಿಗಳ ಬಿಡುಗಡೆ ಕಾರ್ಯಕ್ರಮ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಸಭಾಂಗಣದಲ್ಲಿ ನ.18 ರಂದು ನಡೆಯಿತು.    ಡಾ.ಕೇನಾಜೆ ಹಾಗೂ ಇತರ ಏಳು ಲೇಖಕರನ್ನೊಳಗೊಂಡ ಬೃಹತ್‌ ಗ್ರಂಥ "ನಾವು ಕೂಗುವ ಕೂಗು" ಅಲ್ಲದೇ ಇತರ...

ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ನವಂಬರ್ 17 –  📝ಡಾ| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ನವೆಂಬರ್ 17 ರಂದು ನಮ್ಮ ಭಾರತ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಅಪಸ್ಮಾರ ದಿನ ಎಂದು ಆಚರಿಸಿ ರೋಗದ ಬಗ್ಗೆ ಇರುವ  ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕುವ  ಕಾರ್ಯವನ್ನು ‘ರಾಷ್ಟ್ರೀಯ ಅಪಸ್ಮಾರ ಸಂಸ್ಥೆ’ ನಡೆಸುತ್ತಿದೆ. ನವೆಂಬರ್ ತಿಂಗಳನ್ನು ಅಪಸ್ಮಾರ ಜಾಗೃತಿ ತಿಂಗಳು ಎಂದೂ ಆಚರಿಸಲಾಗುತ್ತದೆ. ಆದರೆ...

ಪುತ್ತೂರಿನಲ್ಲಿ ನಡೆದ ಸಹಕಾರಿ ಸಪ್ತಾಹದಲ್ಲಿ ಪಿ.ಯಸ್ ಕಾರ್ಯಪ್ಪ ಗೌಡರಿಗೆ ಸನ್ಮಾನ

ಸಹಕಾರ ಕ್ಷೇತ್ರದ ಸೇವೆಯನ್ನು ಗುರುತಿಸಿ ಪುತ್ತೂರಿನಲ್ಲಿ ನಡೆದ ಸಹಕಾರಿ ಸಪ್ತಾಹದಲ್ಲಿ ಪಿ.ಯಸ್ ಕಾರ್ಯಪ್ಪ ಗೌಡರನ್ನು  ಸನ್ಮಾನಿಸಲಾಯಿತು.ಯೇನೆಕಲ್ಲು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ಮಾಜಿ ನಿರ್ದೇಶಕರಾಗಿರುವ ಇವರು ಸುಮಾರು 40 ವರ್ಷಗಳಿಂದ ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸುಳ್ಯ : ಯುವ ಕಾಂಗ್ರೆಸ್ ರಾಜ್ಯ ಪದಾಧಿಕಾರಿಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರ ಭೇಟಿ – ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು  ದ. ಕ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿಗಳಿಂದ ಸುಳ್ಯ ವಿಧಾನ  ಸಭಾ ಕ್ಷೇತ್ರ ಭೇಟಿ ಹಾಗೂ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನ. 17 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ  ನಡೆಯಿತು. ದ. ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ರವರು...

ಗುತ್ತಿಗಾರು : ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ

"ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದ 40ನೇ ದಿನದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ವತಿಯಿಂದ ಹಾಲೆಮಜಲು ಬಸ್ಸು ತಂಗದಾಣ ದಿಂದ ಸುಬ್ರಹ್ಮಣ್ಯ ರಸ್ತೆ ಬದಿ ಪ್ಲಾಸ್ಟಿಕ್ ಹಾಗು ಕಸ ಹೆಕ್ಕುವ ಮೂಲಕ ಸ್ವಚ್ಚಗೊಳಿಸಲಾಯಿತು.

ಮಂಗಳೂರು ವಿಭಾಗದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಆಯ್ಕೆ

ವಿದ್ಯಾರ್ಥಿ ನಾಯಕತ್ವದಲ್ಲಿ ಮಹತ್ವದ ಬೆಳವಣಿಗೆಯಾಗಿರುವಂತೆ, ಮಂಗಳೂರು ವಿಭಾಗದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ 2025-26 ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಆಯ್ಕೆಯಾಗಿದ್ದಾರೆ. ಮಂಗಳೂರು ವಿಭಾಗವು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಈ ಮೂರು ಜಿಲ್ಲೆಗಳನ್ನೊಳಗೊಂಡ ದೊಡ್ಡ ಶೈಕ್ಷಣಿಕ ವಲಯವಾಗಿದ್ದು, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಸ್ಟುಡೆಂಟ್ ಫೋರಂ ಅಧ್ಯಕ್ಷರೂ ಆಗಿದ್ದಾರೆ. ಹಲವಾರು ವರ್ಷಗಳಿಂದಲೂ...

ಮುನವ್ವಿರುಲ್ ಇಸ್ಲಾಂ ಗಾಂಧಿನಗರ ಮದ್ರಸಾ ವಿದ್ಯಾರ್ಥಿಗಳು ರಾಷ್ಟ ಮಟ್ಟದಲ್ಲಿ ದ್ವಿತೀಯ ಸ್ಥಾನ

ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು‌.ಜೂನಿಯರ್ ವಿಭಾಗದ ಉರ್ದು ನ ಅತ್ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ  ವಿದ್ಯಾರ್ಥಿಗಳಾದ ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್ ಮತ್ತು ಮುಹಮ್ಮದ್ ಅಂಫಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ನಮ್ಮ...

ಚೊಕ್ಕಾಡಿ : ಮಕ್ಕಳ ದಿನಾಚರಣೆ

ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಹಾಗೂ ಸ್ತ್ರೀ ಶಕ್ತಿ ಸಂಘ ಚೊಕ್ಕಾಡಿ ಇದರ ವತಿಯಿಂದ ಚೊಕ್ಕಾಡಿ ಅಂಗನವಾಡಿ ಪುಟಾಣಿ ಮಕ್ಕಳಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳಿಗೆ  ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು. ಜೊತೆಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ, ಕಾರ್ಯದರ್ಶಿ...
Loading posts...

All posts loaded

No more posts

error: Content is protected !!