Ad Widget

ಪಳ್ಳಿಮಜಲು : ಮಾಸಿಕ ಸ್ವಲಾತ್ ಮಜ್ಲಿಸ್

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಮಸ್ಜಿದ್ ಅಬೂಬಖರ್ ಸ್ವಿದ್ದೀಖ್(ರ)ಇಲ್ಲಿ ಸಾಪ್ತಾಹಿಕವಾಗಿ ನಡೆದು ಬರುತ್ತಿರುವ ಸ್ವಲಾತ್ ವೇದಿಕೆಯ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಅಧ್ಯಯನ ತರಗತಿ ಕಾರ್ಯಕ್ರಮ ನ-6 ರಂದು ಪಳ್ಳಿಮಜಲು ಮಸೀದಿಯಲ್ಲಿ ನಡೆಯಿತು.ಅರಿಕ್ಕಿಲ ಮಾಡಾವು ಜುಮುಅ: ಮಸೀದಿಯ ಮುದರ್ರಿಸ್ ಜುನೈದ್ ಸಖಾಫಿ ಜೀರ್ಮುಕಿ ಅಧ್ಯಯನ ತರಗತಿಯನ್ನು ನಡೆಸಿ ದು:ಆ ನೆರವೇರಿಸಿದರು.ಸ್ಥಳ ಸಾನಿಧ್ಯದಲ್ಲಿ ಕರಿಂಬಿಲ ಮದರಸ ಅಧ್ಯಾಪಕರಾದ ಮಹಮೂದ್ ಮುಸ್ಲಿಯಾರ್, ಸ್ಥಳೀಯ ಖತೀಬ್ ರಫೀಖ್ ಬಾ ಹಸನಿ,‌ಸ್ಥಳೀಯ ಮದರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ,ಪಳ್ಳಿಮಜಲು ಸಿರಾಜುಲ್ ಇಸ್ಲಾಂ ಖೊಮ್ಮಿಟೆ(ರಿ)ಮಾಜಿ ಅಧ್ಯಕ್ಷ ಇಬ್ರಾಹಿಂ ಬೀಡು,ಪಳ್ಳಿಮಜಲು ಸ್ವಲಾತ್ ಖೊಮ್ಮಿಟೆ(ರಿ)ಇದರ ಅಧ್ಯಕ್ಷ ಮೂಸಾ ಬೀಡು,ಪಳ್ಳಿಮಜಲು ಜಮಾಅತ್ ಖೊಮ್ಮಿಟೆ ಸದಸ್ಯ ಸ್ವುಹುಫಿ ಬೀಡು ಉಪಸ್ಥಿತರಿದ್ದರು.ನೂರಾರು ಮಂದಿ ಪ್ರವಾದಿ ಪ್ರೇಮಿಗಳು ಪಾಲ್ಗೊಂಡರು.ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿತ್ತು.ಪಳ್ಳಿಮಜಲು ಜುಮುಅ: ಮಸೀದಿ ಖತೀಬ್ ರಫೀಕ್ ಬಾ ಹಸನಿ ಸ್ವಾಗತಿಸಿ ಪಳ್ಳಿಮಜಲು ಮದರಸ ಮುಖ್ಯೋಪಾಧ್ಯಾಯ ಮಹಮೂದ್ ಸಖಾಫಿ ಧನ್ಯವಾದಗೈದರು.ಕೊನೆಗೆ ತಬರ್ರುಕ್ ವಿತರಣೆ ನಡೆಯಿತು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading