Ad Widget

ಕುಕ್ಕೆ ಸುಬ್ರಹ್ಮಣ್ಯ : ಲಕ್ಷ ದೀಪೋತ್ಸವಕ್ಕೆ ಭರದಿಂದ ಸಾಗಿದೆ ಸಿದ್ಧತೆ

ಸುಬ್ರಹ್ಮಣ್ಯ ನ.16 : ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ  ಜಾತ್ರೋತ್ಸವದ ಹಿನ್ನೆಲೆಯಲ್ಲಿ  ನವೆಂಬರ್ 19ರಂದು ಬುಧವಾರ ನಡೆಯುವ ಲಕ್ಷದೀಪೋತ್ಸವದ ಸಿದ್ಧತೆಗಳ ಬಗ್ಗೆ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ರವಿವಾರ ನಡೆಯಿತು.
ಸಭೆಯಲ್ಲಿ ಲಕ್ಷದೀಪ ದಿನದಂದು ರಥಬೀದಿ ಹಾಗೂ ಪ್ರಮುಖ ಮಾರ್ಗಗಳಲ್ಲಿ ಲಕ್ಷ ಹಣತೆಗಳನ್ನು ಹಚ್ಚುವ ವ್ಯವಸ್ಥೆಗಾಗಿ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳು ವಾಹನ ಚಾಲಕಮಾಲಕ ಸಂಘದವರು ವರ್ತಕರು ಸೇರಿ ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡರು. ಲಕ್ಷದೀಪದಂದು ಹಣತೆ, ಎಣ್ಣೆ ಹಾಗೂ ಬತ್ತಿಯನ್ನು ಈ ದೇವಳದ ವತಿಯಿಂದ ನೀಡುವುದಾಗಿದೆ. ಪ್ರಮುಖ ಸ್ಥಳಗಳಾದ ರಥಬೀದಿ ಸವಾರಿ ಮಂಟಪ ಕಾಶಿ ಕಟ್ಟೆ, ಆದಿ ಸುಬ್ರಹ್ಮಣ್ಯ ಮಾರ್ಗ, ಆಟೋ ಹಾಗೂ ಟ್ಯಾಕ್ಸ್ ನಿಲುಗಡೆ ಪ್ರದೇಶ, ಆದಿಶೇಷ ರಸ್ತೆ, ರಕ್ತೇಶ್ವರಿ ಗುಡಿ, ಟ್ಯಾಕ್ಸಿ ಸ್ಟಾಂಡ್, ಗ್ರಾಮ ಪಂಚಾಯತ್ ಕಟ್ಟಡ ಎದುರುಗಡೆ, ಪೊಲೀಸ್ ಸ್ಟೇಷನ್ ಎದುರುಗಡೆ, ಸುಬ್ರಹ್ಮಣ್ಯ ಐನೆಕಿದು  ಸೊಸೈಟಿ ಹಾಗೂ ಮಹಿಳಾ ಸೊಸೈಟಿ ಎದುರುಗಡೆ, ವಾಹನ ಪಾರ್ಕಿಂಗ್ ಸ್ಥಳಗಳು, ಕುಮಾರಧಾರ ಪ್ರವೇಶ ದ್ವಾರ, ಬಿಲದ್ವಾರ ಹಾಗೂ ಆದಿ ಸುಬ್ರಹ್ಮಣ್ಯ ಉದ್ಯಾನವನ ಮುಂತಾದೆಡೆ ಹಣತೆಗಳನ್ನು ಇಡುವುದೆಂದು ನಿರ್ಧರಿಸಲಾಯಿತು.
ಅಲ್ಲದೆ ಸುಬ್ರಹ್ಮಣ್ಯ ಗ್ರಾಮದ ಪ್ರತಿ ಮನೆಗೆ 10ಹಣತೆ, ಎಣ್ಣೆ, ಬತ್ತಿ ನೀಡುವುದು ಹಾಗೂ ಆ ಮನೆಯವರು ಲಕ್ಷದೀಪ ದಿನದಂದು ಸೂಚಿತ ಪ್ರದೇಶದಲ್ಲಿ ಹಣತೆ ಉರಿಸುವುದೆಂದು ನಿರ್ಧರಿಸಲಾಯಿತು.
ಸಭೆಯಲ್ಲಿ ಶ್ರೀ ದೇವಳದ ಸಹಾಯಕ  ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಲೀಲಾ ಮನಮೋಹನ್, ಪ್ರವೀಣ ರೈ, ಸೌಮ್ಯ ಭರತ್, ಅಶೋಕ್ ನೆಕ್ರಾಜೆ, ಅಜಿತ್ ಪಾಲೇರಿ, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಅಚ್ಚುತಗೌಡ, ಲೋಲಾಕ್ಷ ಕೈಕಂಬ, ಪವನ್ ಎಂಡಿ, ಊರ ಪ್ರಮುಖರಾದ ಶಿವರಾಮ ರೈ, ಕಿಶೋರ್ ಅರಂಪಾಡಿ, ರವೀಂದ್ರ ನೂಚಿಲ, ಕುಸುಮಾಧರ ಹಾಗೂ ಸಂಘ-ಸಂಸ್ಥೆಗಳ ಅಧ್ಯಕ್ಷರು-ಪದಾಧಿಕಾರಿಗಳು ಹಾಗೂ ಸದಸ್ಯರು, ಊರ ಮಹನೀಯರು, ಭಕ್ತರು ಪಾಲ್ಗೊಂಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading