Ad Widget

ಸೋಣಂಗೇರಿ ಸರ್ಕಲ್ ಬಳಿಯ ರಸ್ತೆ ಗುಂಡಿಗೆ ಸ್ಥಳೀಯರಿಂದ ಕಾಂಕ್ರೀಟೀಕರಣ

ಸೋಣಂಗೇರಿ ಸರ್ಕಲ್ ಬಳಿ ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡ ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದರೂ ಯಾರು ಕೂಡಾ ಈ ಬಗ್ಗೆ  ಗಮನ ಹರಿಸಿಸುತ್ತಿಲ್ಲ.
ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುವ ಸ್ಥಿತಿಯಿರುವ ಹಿನ್ನೆಲೆಯಲ್ಲಿ ಸತ್ಯಶಾಂತಿ ತ್ಯಾಗಮೂರ್ತಿ ನೇತೃತ್ವದಲ್ಲಿ ಸ್ಥಳೀಯರು ಸೇರಿಕೊಂಡು  ರಸ್ತೆ ಗುಂಡಿಗೆ ಕಾಂಕ್ರೀಟ್ ಹಾಕಿ ಮುಚ್ಚಿದರು.
ಈ ಕಾರ್ಯಕ್ಕೆ  ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಯೋಗೀಶ ಕೆಳಗಿನಮನೆ, ಚಂದ್ರಶೇಖರ ಕುಕ್ಕಂದೂರು, ದೇವೇಂದ್ರ ಕುಕ್ಕಂದೂರು, ಸುಂದರರಾಜ್ ಸೋಣಂಗೇರಿ ಮತ್ತಿತರರಿ  ಸಹಕಾರ ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading