Ad Widget

ಕ್ಯಾಂಪ್ಕೋ ಚುನಾವಣೆ – 13 ಸ್ಥಾನ ಅವಿರೋಧ – 6 ಸ್ಥಾನಗಳಿಗೆ ಚುನಾವಣೆ – ಸುಳ್ಯದಿಂದ ಮೂವರು ಸ್ಪರ್ಧೆ – ಮಾಲಿನಿ ಪ್ರಸಾದ್ ಬಾಳಿಲ ಅವಿರೋಧ ಆಯ್ಕೆ

ಅಡಿಕೆ ಹಾಗೂ ಕೊಕ್ಕೊ ಬೆಳೆಗಾರರ ಹಿತಾಶಕ್ತಿ ಕಾಯುವ ಉದ್ದೇಶದಿಂದ 1973 ರಲ್ಲಿ ವಾರಣಾಸಿ ಸುಬ್ರಾಯ ಭಟ್ ಕ್ಯಾಂಪ್ಕೋ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಆ ಬಳಿಕ ವಿಶಾಲವಾಗಿ ಸಂಸ್ಥೆ ಬೆಳೆದು ಅಂತರಾಜ್ಯ ಸಂಸ್ಥೆಯಾಗಿದೆ. ನ.23 ರಂದು ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು , 19 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 6 ಜನ ಸಹಕಾರ ಭಾರತಿಯಿಂದ ಮತ್ತು ಇಬ್ಬರು ಸ್ವತಂತ್ರ  ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ರಿದ್ದಾರೆ.

. . . . . . . . .

ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಸುಳ್ಯದ ಸಹಕಾರಿ ಧುರೀಣ ಎ.ವಿ.ತೀರ್ಥರಾಮ, ಮುರಳಿಕೃಷ್ಣ ಚಳ್ಳಂಗಾರು, ಸ್ವತಂತ್ರ ಅಭ್ಯರ್ಥಿಯಾಗಿ ಅಮರ ಪಡ್ನೂರು ಮಾಯಿಪಡ್ಕ ನಿವಾಸಿ ಸತ್ಯನಾರಾಯಣ ಎಂ.ಜಿ. ಸೇರಿದಂತೆ 8 ಜನ ಕಣದಲ್ಲಿದ್ದಾರೆ. 13 ಜನ ಅವಿರೋಧವಾಗಿ ಆಯ್ಕೆಯಾದವರಲ್ಲಿ ಸುಳ್ಯ ತಾಲೂಕಿನ ಬಾಳಿಲದ ಮಾಲಿನಿ ಪ್ರಸಾದ್ ಇದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading