Ad Widget

“ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಭದ್ರತೆ ಹಾಗೂ ಸಮಗ್ರ ಅಭಿವೃದ್ಧಿಗೆ ಜನಮನ್ನಣೆ” – ಶಾಸಕಿ ಭಾಗೀರಥಿ ಮುರುಳ್ಯ

“ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎನ್.ಡಿ.ಎ ಒಕ್ಕೂಟದ ಅಲೆಗೆ ಕೊಚ್ಚಿಹೊಗಿದ್ದು, ಬಿಜೆಪಿ ನೇತೃತ್ವದ ಎನ್.ಡಿ.ಎ ಪ್ರಚಂಡ ಬಹುಮತವನ್ನು ಪಡೆದು  ಅಧಿಕಾರಕ್ಕೇರುತ್ತಿರುವುದು ಖುಷಿಯ ವಿಚಾರ. ಭ್ರಷ್ಟಾಚಾರ ರಹಿತ, ದೇಶದ ಭದ್ರತೆ, ಸಮಗ್ರ ಅಭಿವೃದ್ಧಿಗಳಿಂದ  ಜನಮನ್ನಣೆ ಗಳಿಸಿರುವ ಬಿಜೆಪಿ ದೇಶದ ಮೂಲೆ ಮೂಲೆಯಲ್ಲಿ ಭದ್ರವಾಗಿ ನೆಲೆಯೂರುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಸುಳ್ಳು ಭರವಸೆಗಳನ್ನು ಬಿಹಾರದ ಪ್ರಜ್ಞಾವಂತ ಮತದಾರರು ಸಾರಾಸಗಟಾಗಿ ತಿರಸ್ಕರಿಸಿರುವುದು ಈ ದೇಶದ ಪ್ರಧಾನಿ ಮೋದಿಯವರ ಆಡಳಿತಕ್ಕೆ ಮತ್ತೊಂದು ಮೈಲುಗಲ್ಲಾಗಿದೆ. ಈಗಾಗಲೇ 3 ರಾಜ್ಯಗಳ ಚುನಾವಣಾಯಲ್ಲಿ ಬಂದಿರುವ ಸ್ಪಷ್ಟ ಜನಾದೇಶದ ಕ್ರಾಂತಿಯು 2028ರಲ್ಲಿ ಕರ್ನಾಟಕದಲ್ಲೂ ಬಂದು ಬಿಜೆಪಿ ಆಡಳಿತ ನಡೆಸುವುದು ಗ್ಯಾರಂಟಿ, ಈಗಾಗಲೇ ಜನಸಾಮಾನ್ಯರು ಕರ್ನಾಟಕ ಕಾಂಗ್ರೆಸ್ ನ  ದುರಾಡಳಿತದಿಂದ ಮತ್ತು  ಅಧಿಕಾರದ ಒಳಜಗಳದಿಂದ  ರಾಜ್ಯದ ಅಭಿವೃದ್ಧಿ ಕುಂಟಿತದಿಂದ  ಆಕ್ರೋಶಗೊಂಡಿರುವುದು ಸ್ಪಷ್ಟವಾಗಿದೆ” ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading