Ad Widget

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೆಹರೂ ಜಯಂತಿ ಆಚರಣೆ – “ನೆಹರೂರವರ ದೂರ ದೃಷ್ಟಿಯ ಆಡಳಿತ ದೇಶದ ಪ್ರಜಾಪ್ರಭುತ್ವ ವನ್ನು ಬೆಳಗಿಸಿದೆ” : ಕೆ.ಎಂ. ಮುಸ್ತಫಾ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹಾರ್ ಲಾಲ್ ನೆಹರೂ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಉಪಾಧ್ಯಕ್ಷ ದಿನೇಶ್ ಅಂಬೆಕಲ್ಲು ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಎಂ.ಎ ಮುಸ್ತಾಫ “ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಚಾಚಾ ನೆಹರೂರವರು ಅಂದಿನ ಮಕ್ಕಳಲ್ಲಿ ದೇಶದ ಭವಿಷ್ಯವನ್ನು ಕಂಡು ಮಕ್ಕಳಲ್ಲಿ ವಿಶೇಷ ಮಮತೆ ಪ್ರೀತಿ ತೋರಿದರು. ಅಂದು ಅವರು ಬಿತ್ತಿದ ಬೀಜ ಇಂದು ಭಾರತವನ್ನು ಸುಭದ್ರ ಮತ್ತು ಸಮರ್ಥ ಭಾರತವಾಗಿಸಿದೆ” ಎಂದರು.
ಗ್ಯಾರಂಟಿ ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರುಗಳಾದ ಶರೀಫ್ ಕಂಠಿ, ಧೀರ ಕ್ರಾಸ್ತ, ಪಕ್ಷದ ಧುರೀಣರುಗಳಾದ ಭೋಜಪ್ಪ ನಾಯ್ಕ್, ರಹೀಂ ಬೀಜದಕಟ್ಟೆ, ಕೊರಗಪ್ಪ ಐವರ್ನಾಡು, ಕರುಣಾಕರ ಪಳ್ಳತಡ್ಕ, ಇಬ್ರಾಹಿಂ ಜಯನಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading