Ad Widget

ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಯಿಂದ ಹಕ್ಕೊತ್ತಾಯ

ರಬ್ಬರ್ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ತೊಂದರೆಗೊಳಗಾಗಿದ್ದು , ಈ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ತಜ್ಞರಾದ ಡಾ. ವಿಘ್ನೇಶ್ವರ ವರ್ಮುಡಿ ಅವರು ಸಿದ್ಧಪಡಿಸಿದ ರಬ್ಬರ್ ಕೃಷಿಯ ಉತ್ಪಾದನಾ ವೆಚ್ಚ ಮತ್ತು ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳನ್ನು ಸೂಚಿಸಿದ ಸಮಗ್ರ ಅಧ್ಯಯನ ವರದಿಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು. ಭಾಗಿರಥಿ ಮುರುಳ್ಯ ರವರಿಗೆ ಸಲ್ಲಿಸಲಾಯಿತು. ಹಾಗೂ ರಬ್ಬರ್ ಕೃಷಿಯನ್ನು ರಾಜ್ಯ ಸರಕಾರದ ತೋಟಗಾರಿಕಾ ಇಲಾಖೆಯ ಅಧೀನದಲ್ಲಿ ಸೇರ್ಪಡೆಗೊಳಿಸುವ ಮೂಲಕ ಹವಾಮಾನ ಆಧಾರಿತ ಬೆಳೆ ವಿಮೆ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನೂ ದೊರಕಿಸಿಕೊಡಬೇಕು ಎಂದು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ರಬ್ಬರ್ ಮಂಡಳಿಯ ನಿರ್ದೇಶಕರಾದ ಮುಳಿಯ ಕೇಶವ ಭಟ್ , ಸಂತೋಷ್ ಕುತ್ತಮೊಟ್ಟೆ , ವೆಂಕಟ್ ದಂಬೆಕೋಡಿ , ವಿಜಯಕೃಷ್ಣ ಪೆರಾಜೆ , ವಿನಯ ಕುಮಾರ್ ಕಂದಡ್ಕ , ಪ್ರದೀಪ್ ರೈ,ಶಶಿಕಲಾ ಎನ್ ಸುಭಾಶ್ವಂದ್ರ ಬಂಗಾರಕೋಡಿ , ರಾಕೇಶ್ ಮೆಟ್ಟಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading